ಪೂಜೆ ಮಾಡುವವರು ಬೆಳಗ್ಗೆ ಸ್ನಾನದ ನೀರಿಗೆ ಸ್ವಲ್ಪ ಅರಿಸಿನ, ಹಸುವಿನ ಗಂಜು, ಹಾಗೂ ದರ್ಬೆ ಹಾಕಿ ಸ್ನಾನ ಮಾಡಿ, “ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಓದಿದರೆ,ನಿಮ್ಮ ಕೆಲಸಗಳು ಸುಸೂತ್ರವಾಗಿ ನಡೆಯುತ್ತದೆ ..
೧. ಯಾರು ಮಾತನಾಡುವಾಗ ತೊದಲುತ್ತಾರೋ ಅಂತಹವರು “ಶ್ರೀ ಸುಬ್ರಹ್ಮಣ್ಯ ” ಸ್ವಾಮಿ ಪೂಜೆ ಮಾಡಿ,ಅಷ್ಟೋತ್ತರವನ್ನು ಹೇಳಿ, ಸ್ವಾಮಿಗೆ ಜೇನುತುಪ್ಪ ನೈವೇದ್ಯ ಮಾಡಿ, ಜೇನುತುಪ್ಪವನ್ನು ಸುಬ್ರಹ್ಮಣ್ಯ ಸ್ವಾಮಿ ಮೂಲ ಮಂತ್ರದಿಂದ ಅಭಿಮಂತ್ರಿಸಿ, ಪ್ರಸಾದ ತಿನ್ನುತ್ತಾ ಬಂದರೆ, ಅತೀ ಶೀಘ್ರದಲ್ಲಿ ತೊದಲು ನಿವಾರಣೆಯಾಗುತ್ತದೆ ..
೨. ಮಕ್ಕಳು ತುಂಬಾ ಹಠ ಮಾಡಿದರೆ, ರೊಚ್ಚು ಹಿಡಿದರೆ, ಕೋಪ ಜಾಸ್ತಿ ಬಂದರೆ, ಬಾಲಗ್ರಹ ದೋಷ ಇದ್ದರೆ,
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಿಸಿ, ಭಸ್ಮದಿಂದ ಅರ್ಚಿಸಿ, ಶ್ರೀ ಗೋಪಿ ಚಂದನವನ್ನು ಅಭಿಮಂತ್ರಿಸಿಕೊಂಡು ತಂದು , ಮಕ್ಕಳಿಗೆ ಎರಡು ಹುಬ್ಬುಗಳ ಮಧ್ಯೆ ಇಟ್ಟು, ಭಸ್ಮವನ್ನು ಹಣೆಗೆ ಬೊಟ್ಟುಇಟ್ಟರೆ, ಮಕ್ಕಳು ಹಠ ಎಲ್ಲಾ ಹೋಗಿ ಆರೋಗ್ಯವಂತರಾಗಿರುತ್ತಾರೆ..
೩. ಸಂಸಾರದಲ್ಲಿ ಗಲಾಟೆ ನಡೆಯುತ್ತಿದ್ದರೆ, ನೆಮ್ಮದಿ ಇಲ್ಲದಿದ್ದರೆ, ದಂಪತಿಗಳು ಮಾತು ಮಾತಿಗೂ ಕೋಪ ನೆಮ್ಮದಿ ಕಳೆದುಕೊಂಡು ಬೇಸರದ ಸಂಸಾರ ಮಾಡುತ್ತಿದ್ದರೆ, ಅನ್ಯೋನ್ಯವಾಗಿ ಇಲ್ಲದಿದ್ದರೆ ..
ಅಂಥವರು “ಶ್ರೀ ಸುಬ್ರಹ್ಮಣ್ಯ ಸ್ವಾಮಿ”ಯನ್ನು ಅಷ್ಟೋತ್ತರದಿಂದ ಪೂಜಿಸಿ, ಹಾಲು ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡಿಸಿ, ೯ ನಮಸ್ಕಾರ ಮಾಡಬೇಕು..
೧೨ ದಿನ ಹೀಗೆ ಮಾಡುತ್ತಾ ಬನ್ನಿ ಅಥವಾ ೧೨ ಮಂಗಳವಾರ ಹೀಗೆ ಮಾಡಬಹುದು..
೧೨ ದಿನ ಮುಗಿದ ನಂತರ, “ವೃದ್ಧಬ್ರಾಹ್ಮಣ” ದಂಪತಿಗಳಿಗೆ ತಾಂಬೂಲ ದಾನ ಮಾಡಿದರೆ, ನಿಮ್ಮ ಮನೆಯಲ್ಲಿನ ಎಲ್ಲಾ ತರಹದ ಗಲಾಟೆಗಳು ನಿಂತು, ದಂಪತಿಗಳು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ನೆಮ್ಮದಿ ಹಾಗೂ ಶಾಂತಿಯನ್ನು ಪಡೆದು ಸುಖವಾಗಿ ಬಾಳುತ್ತಾರೆ..
೪. ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಓದುವಾಗ ಜ್ಞಾಪಕವಿದ್ದು, ನಂತರ ಮರೆತು ಹೋದರೆ, ಜ್ಞಾಪಕಶಕ್ತಿ ಕಡಿಮೆ ಇದ್ದರೆ, ಪರೀಕ್ಷೆಯಲ್ಲಿ ಜ್ಞಾಪಕ ಬರದೇ ಇದ್ದರೆ, ಪರೀಕ್ಷೆಯ ಸಮಯದಲ್ಲಿ ಅನಾರೋಗ್ಯವಾಗುತ್ತಿದ್ದರೆ, …
ಇವೆ ಮುಂತಾದ ಹಲವಾರು ಕಾರಣಗಳಿಗೆ ..
ನೈವೇದ್ಯವನ್ನು ಮಾಡಿ.“ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ, ಒಂದು ತಾಮ್ರದ ಚಂಬಿನಲ್ಲಿ ನೀರು ಹಾಕಿ, ಅದರ ಮೇಲೆ ಕೈ ಇಟ್ಟು “ಸುಬ್ರಹ್ಮಣ್ಯ ಷೋಡಶನಾಮಾವಳಿ” ಪಠಿಸಿ, ಮನೆಯ ಹೊರಗೆ ಸಾಯಂಕಾಲ ೫.೪೫ ರಿಂದ ೬.೧೫ ರ ಒಳಗೆ, ಶುಭ ಗೋಧೂಳಿ ಲಗ್ನದಲ್ಲಿ, ಮತ್ರಿಸಿದ ನೀರಿನಿಂದ ಮುಖ ತೊಳೆದುಕೊಂಡರೆ, ಸಮಸ್ತ ವಿದ್ಯಾದೋಷಗಳು ನೀಗಿ, ಮುಖದಲ್ಲಿ ವರ್ಚಸ್ಸು ಬಂದು ವಿದ್ಯಾವಂತರಾಗುತ್ತಾರೆ..
೫. ಮದುವೆಯಾಗದ ಗಂಡು/ಹೆಣ್ಣು ಮಕ್ಕಳಿಗೆ, ಎಷ್ಟೇ ಪ್ರಯತ್ನಪಟ್ಟರೂ ವಿವಾಹವಾಗದೇ ಇದ್ದರೆ,
ಗುರುವಾರ ಅಥವಾ ಭಾನುವಾರ ಬೆಳಿಗ್ಗೆ, ಶ್ರೀ ಸುಬ್ರಹ್ಮಣ್ಯಸ್ವಾಮಿಯನ್ನು ಅಷ್ಟೋತ್ತರದಿಂದ ಪೂಜಿಸಿ, ಒಂದು ತೆಂಗಿನಕಾಯಿಯನ್ನು ಪೂಜಿಸಿ, ಅರಿಸಿನದ
ಬಟ್ಟೆಯಿಂದ ಕಟ್ಟಿ ನಂತರ ಅಶ್ವಥ್ ಮರದ ಕೊಂಬೆಗೆ ಕಟ್ಟಿ ಬಂದರೆ ವಿವಾಹ ನಿಶ್ಚಿಯವಾಗುತ್ತದೆ..
೬ ಆರೋಗ್ಯ ಸರಿ ಇಲ್ಲದವರು ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಅಷ್ಷೋತರದಿಂದ ಪೂಜಿಸಿ ಸ್ವಾಮಿಗೆ ಹಾಲು ಮತ್ತು ಜೇನುತುಪ್ಪ.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮೂಲ ಮಂತ್ರದಿಂದ ಮಂತ್ರಿಸಿ ೧೨ ದಿವಸ ಕುಡಿದರೆ ನೀಮ್ಮ ಸಮಸ್ತ ಖಾಯಿಲೆಗಳು ನಿವಾರಣೆಯಾಗಿ ಆರೋಗ್ಯವಂತರಾಗುವಿರಿ..
Sairam.
Manjunath
No comments:
Post a Comment