ಕಿವಿಯ ತೊಂದರೆಗೆ ಮನೆಮದ್ದು:-
ಕಿವಿಯೊಳಗೆ ಇಯರ್ ಬಡ್ಸ್ ಹಾಕಬಾರದು. ಹೀಗೆ ಹಾಕೋದರಿಂದ ಹತ್ತಿ ಎಳೆಗಳು ಕಿವಿಯೊಳಗೆ ಬ್ಲಾಕ್ ಆಗುತ್ತವೆ. ಬಡ್ಸ್‌ನ ಕೋಲು ಕಿವಿಯೊಳಗೆ ತಾಗ ಬಹುದು. ಅದು ಕಾಲಾನಂತರದಲ್ಲಿ ಶ್ರವಣದೋಷಕ್ಕೆ ಕಾರಣವಾಗಬಹುದು. ಅದು ನೋವು ಮತ್ತು ಕಿವುಡುತನ ಸೇರಿದಂತೆ ವಿವಿಧ ಕಿವಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ನೀವು ಇವುಗಳನ್ನು ಬಳಸುವುದನ್ನು ತಡೆಯಬೇಕು. ಹಾಗಾದ್ರೆ ಕಿವಿಯ ವ್ಯಾಕ್ಸ್‌ನ್ನು ತೆಗೆಯಲು ಕೆಲವು ಮನೆಮದ್ದನ್ನು ಉಪಯೋದಿಸುವುದು ಸುರಕ್ಷಿತ ಮಾತ್ರವಲ್ಲದೆ ಇಯರ್‌ವಾಕ್ಸ್ ತೆಗೆಯುವಲ್ಲಿ ಪರಿಣಾಮಕಾರಿಯಾಗಿದೆ. ಈ ಮನೆಮದ್ದುಗಳನ್ನು ಬಳಸುವಾಗಲೂ ನೀವು ಸ್ವಲ್ಪ ಜಾಗರೂಕರಾಗಿರ ಬೇಕು. ಕಿವಿಯಲ್ಲಿ ನೋವು ಹಾಗೂಇನ್ನಿತರ ಸಮಸ್ಯೆ ಇದ್ದರೆ ಇವುಗಳನ್ನು ಕಿವಿಗೆ ಹಾಕ ಬಾರದು.
೧)ಅಡಿಗೆ ಸೋಡಾ
ಅಡಿಗೆ ಸೋಡಾವನ್ನು ಕಿವಿಯಿಂದ ಬರುವ ವಾಸನೆಯನ್ನು ತೆಗೆದುಹಾಕಲು ಬಳಸಬಹುದು. 2 ಟೀ ಚಮಚ ನೀರಿನಲ್ಲಿ 4 ಪಿಂಚ್ ಅಡಿಗೆ ಸೋಡಾವನ್ನು ಬೆರೆಸಿ , ಈ ದ್ರಾವಣದ ಕೆಲವು ಹನಿಗಳನ್ನು ಕಿವಿಯಲ್ಲಿ ಹಾಕಿ 2 ನಿಮಿಷಗಳ ಕಾಲ ನಿಲ್ಲಿಸಿದ ನಂತರ ಸ್ವಚ್ಛಗೊಳಿಸಿ. ನಿಮ್ಮ ಕಿವಿಯಿಂದ ವಾಸನೆ ಕಣ್ಮರೆಯಾಗುತ್ತದೆ ಮತ್ತು ವ್ಯಾಕ್ಸ್‌ನ್ನು ಸಹ ಸ್ವಚ್ಛಗೊಳಿಸಲಾಗುತ್ತದೆ.
೨)ಬೆಳ್ಳುಳ್ಳಿ ಎಣ್ಣೆ.:-
ಕಿವಿಯಲ್ಲಿ ಸ್ವಲ್ಪ ಬೆಳ್ಳುಳ್ಳಿ ಎಣ್ಣೆಯನ್ನು ಹಾಕಿ.
ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ-ವೈರಲ್ ಗುಣಗಳಿವೆ ಬೆಳ್ಳುಳ್ಳಿ ಎಣ್ಣೆ ನಿಮ್ಮ ಕಿವಿಯಲ್ಲಿನ ವ್ಯಾಕ್ಸ್‌ನ್ನು ಶುದ್ದೀಕರಿಸಲು, ವಾಸನೆಯನ್ನು ತೆಗೆದುಹಾಕಲು ಮತ್ತು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಎಣ್ಣೆ ತಯಾರಿಸಲು, 4-5 ಲವಂಗ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಸ್ವಲ್ಪ ತೆಂಗಿನ ಎಣ್ಣೆಯಲ್ಲಿ 10-12 ನಿಮಿಷ ಬೇಯಿಸಿ. ಈಗ ಈ ಎಣ್ಣೆಯನ್ನು ಫಿಲ್ಟರ್ ಮಾಡಿ ತಣಿದ ನಂತರ ಕಿವಿಗೆ ಹಾಕಿ. ಕಿವಿಯ ಒಳ ಚರ್ಮವು ತುಂಬಾ ತೆಳುವಾದ ಮತ್ತು ಸೂಕ್ಷ್ಮವಾಗಿರುತ್ತದೆ ಹಾಗಾಗಿ ಬಿಸಿ ಎಣ್ಣೆಯನ್ನು ಹಾಕಬಾರದು.
೩)ಆಪಲ್ ಸೈಡರ್ ವಿನೆಗರ್:-
ಆಪಲ್ ಸೈಡರ್ ವಿನೆಗರ್ ಬಳಸಿ ಕಿವಿಯ ವಾಸನೆಯನ್ನು ಸಹ ತೆಗೆದುಹಾಕಬಹುದು. ಇದು ಆಮ್ಲೀಯ ಗುಣಗಳನ್ನು ಹೊಂದಿದೆ, ಆದ್ದರಿಂದ ಇದು ವ್ಯಾಕ್ಸ್‌ನ್ನು ಹೊರಹಾಕುತ್ತದೆ. ನೀವು ಅರ್ಧ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು 2 ಟೀ ಚಮಚ ಬಟ್ಟಿ ಇಳಿಸಿದ ನೀರಿನಲ್ಲಿ ಬೆರೆಸಿ ದುರ್ಬಲಗೊಳಿಸಿ. ಈಗ ಅದನ್ನು ಕಿವಿಯಲ್ಲಿ ಹಾಕಿ 2 ನಿಮಿಷ ಬಿಡಿ. 2 ನಿಮಿಷಗಳ ನಂತರ ಕಿವಿಯನ್ನು ಸ್ವಚ್ಛಗೊಳಿಸಿ. ಇದು ಹೆಚ್ಚುವರಿ ವ್ಯಾಕ್ಸ್‌ನ್ನು ತೆಗೆದುಹಾಕುತ್ತದೆ ಮತ್ತು ಕಿವಿಯಿಂದ ಬರುವ ವಾಸನೆಯನ್ನು ತೆಗೆದುಹಾಕುತ್ತದೆ.
೪) ಶೋಧಿದಿ ಶುದ್ಧಮಾಡಿದ ಗೋಮೂತ್ರಕ್ಕೆ ಸ್ವಲ್ಪ ಬಟ್ಟಿ ಇಳಿಸಿದ ನೀರು ಸೇರಿಸಿ ಕಿವಿಗೆ 5-6 ಹನಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಶುದ್ಧ ಬಟ್ಟೆಯಿಂದ ಸ್ವಚ್ಛಗೊಳಿಸಿ.
೫)) ಕಿವಿಯಲ್ಲಿ ತೊಂದರೆ ಇದ್ದರೂ ಪರಿಹಾರಕ್ಕೆ ಎರಡೂ ಕೈನ ಕಿರು ಬೆರಳು ಮತ್ತು ಉಂಗುರದ ಬೆರಳಿನ ಬುಡದ ಮೇಲೆ ಕಾಲು ಅಂಗುಲ ಬಿಟ್ಟು ಒತ್ತಡ ಕೊಡಿ. ಅರ್ಧ ಗಂಟೆ ಎರಡು ಹೊತ್ತು.
೬) ಕಿವಿಯಲ್ಲಿ ವಾಸನೆ ಇದ್ದು ಸೋರುತ್ತಿದ್ದರೆ ಮಣ್ಣಿನ ಚಿಕಿತ್ಸೆ ಮಾಡಿ. ಅಂದರೆ ಜೇಡಿ ಮಣ್ಣನ್ನು ಕುಟ್ಟಿ ಜರಡಿಮಾಡಿ, ಅರಿಸಿನ, ಬೇವಿನ ಎಲೆರಸ, ಸ್ವಲ್ಪ ಕೆನೆಸುಣ್ಷ, ಚೆನ್ನಾಗಿ ಕಲೆಸಿ ಕಿವಿಯ ಸುತ್ತ ಸಂಜೆ ಬಳಿದು ಆರಿದ ಮೇಲೆ ಬಟ್ಟೆ ಕಟ್ಟಿ ಮಲಗಿ. ಬೆಳಗ್ಗೆ ಒಳಗಿರುವ ದ್ರವ ಎಲ್ಲಾ ಆಚೆ ಬರುತ್ತದೆ. ಅವಶ್ಯಕತೆ ಇದ್ದರೆ ಮೂರು,ನಾಲ್ಕು ದಿನ ಮಾಡಿ. ಯಾವುದೇ ಕಾರಣಕ್ಕೂ ಕಿವಿಯ ಒಳಕ್ಕೆ ಇದನ್ನು ಹಾಕಬೇಡಿ.
೭)ಕಿವಿಯಲ್ಲಿ ನೋವು ಇದ್ದು, ಸೋರುತ್ತಿದ್ದರೆ ಬದನೆಕಾಯಿ ಒಣಗಿಸಿ ಪುಡಿಮಾಡಿ ,ಕಾಗದದ ಸುರಳಿ ಮಾಡಿ ಅದರ ಒಳಕ್ಕೆ ತುಂಬಿ ಒಂದು ಕೊನೆಗೆ ಬೆಂಕಿ ಹಚ್ಚಿ ಬೇರೆಯವರು ಸಿಗರೇಟ್ ನಂತೆ ಹೊಗೆ ಸೇದಿ ರೋಗಿಯ ಕಿವಿಯಲ್ಲಿ ಊದಿ ಹೊಗೆ ತುಂಬ ಬೇಕು. ಇದರಿಂದ ಹುಳು ಓಗಿದ್ದರೆ ಆಚೆ ಬರುತ್ತದೆ, ನೋವು ಇದ್ದರೆ ಶಮನವಾಗುತ್ತದೆ ಜೊತೆಗೆ ಕಿವಿ ಸೋರುವುದು ನಿಲ್ಲುತ್ತದೆ
ಸಾಯಿರಾಂ
ಮಂಜುನಾಥ ಹಾರೊಗೊಪ್ಪ
No comments:
Post a Comment