Adsense

Tuesday, 29 September 2020

ಅಂಗಾರಕ ದೋಷ ಪರಿಹಾರ

ಅಂಗಾರಕ ದೋಷ ಪರಿಹಾರ

ಪ್ರತಿ ಮಂಗಳವಾರ ಪ್ರಾತಃಕಾಲ ಸೂರ್ಯೋದಯ ಸಮಯಕ್ಕೆ ಅಂದರೆ ಸೂರ್ಯ ಹುಟ್ಟುವ ಸಮಯದಲ್ಲಿ ಮೋಡ ಎಲ್ಲ ಕೆಂಪಾಗಿರುವಾಗ ದೇವರ ಮುಂದೆ ಎರಡು ತುಪ್ಪದ ದೀಪ ಹಚ್ಚಿ ಸ್ತೋತ್ರವನ್ನು ಹನ್ನೊಂದು ಸಲ ಹೇಳುತ್ತಾ ಹೋಗಿ ... ಹನ್ನೊಂದು ಸಲ ಅನ್ನುವವರೆಗೂ ದೀಪಗಳು ಇರಬೇಕು .. ದೇವಿ ದೇವಸ್ಥಾನಕ್ಕೆ ಹೋದಾಗ ಕನಕಾಂಬರ ಮಾಲೆ (ಅಂದರೆ ಕೆಂಪು ಹೂವಿನ ಮಾಲೆ )ಕೊಡಿ . ರೀತಿ ಮಾಡುತ್ತಾ ಹೊದಂತೆ ಯಾರಿಗೆ ಅಂಗಾರಕ ದೋಷವಿದೆಯೊ ಅವರ ಕಾರ್ಯಗಳು ಸುಗಮವಾಗಿ ಆಗುತ್ತವೆ..ಕಂಕಣಬಲ ಸಹ ಕೂಡಿಬರುತ್ತದೆಅಂಗಾರಕ ದೋಷ ಇದ್ದವರಿಗೆ ಬಹಳ ಕಿರಿಕಿರಿ ಇರುತ್ತದೆ ,ಗಂಡಹೆಂಡಿರ ನಡುವೆ ಜಗಳ , ಕೆಲಸದಲ್ಲಿ ತೊಂದೆರೆ ಇವೆಲ್ಲವೂ ಕಡಿಮೆ ಆಗುತ್ತದೆ ... ಮಾಡಿ ನೋಡಿ ನಿಮಗೆ ಅನಿಸುತ್ತದೆ...


ಅಂಗಾರಕ ಸ್ತೋತ್ರ

ಅಸ್ಯ ಶ್ರೀ ಅಂಗಾರಕಸ್ತೋತ್ರಸ್ಯವಿರೂಪಾಂಗಿರಸ ಋಷಿಃಅಗ್ನಿರ್ದೇವತಾಗಾಯತ್ರೀ ಛಂದಃ .
ಭೌಮಪ್ರೀತ್ಯರ್ಥಂ ಜಪೇ ವಿನಿಯೋಗಃ .

ಅಂಗಾರಕಃ ಶಕ್ತಿಧರೋ ಲೋಹಿತಾಂಗೋ ಧರಾಸುತಃ .
ಕುಮಾರೋ ಮಂಗಲೋ ಭೌಮೋ ಮಹಾಕಾಯೋ ಧನಪ್ರದಃ ll

ಋಣಹರ್ತಾ ದೃಷ್ಟಿಕರ್ತಾ ರೋಗಕೃದ್ರೋಗನಾಶನಃ .
ವಿದ್ಯುತ್ಪ್ರಭೋ ವ್ರಣಕರಃ ಕಾಮದೋ ಧನಹೃತ್ ಕುಜಃ ll

ಸಾಮಗಾನಪ್ರಿಯೋ ರಕ್ತವಸ್ತ್ರೋ ರಕ್ತಾಯತೇಕ್ಷಣಃ .
ಲೋಹಿತೋ ರಕ್ತವರ್ಣಶ್ಚ ಸರ್ವಕರ್ಮಾವಬೋಧಕಃ ll

ರಕ್ತಮಾಲ್ಯಧರೋ ಹೇಮಕುಂಡಲೀ ಗ್ರಹನಾಯಕಃ .
ನಾಮಾನ್ಯೇತಾನಿ ಭೌಮಸ್ಯ ಯಃ ಪಠೇತ್ಸತತಂ ನರಃ ll

ಋಣಂ ತಸ್ಯ ದೌರ್ಭಾಗ್ಯಂ ದಾರಿದ್ರ್ಯಂ ವಿನಶ್ಯತಿ .
ಧನಂ ಪ್ರಾಪ್ನೋತಿ ವಿಪುಲಂ ಸ್ತ್ರಿಯಂ ಚೈವ ಮನೋರಮಾಂ ll

ವಂಶೋದ್ದ್ಯೋತಕರಂ ಪುತ್ರಂ ಲಭತೇ ನಾತ್ರ ಸಂಶಯಃ .
ಯೋಽರ್ಚಯೇದಹ್ನಿ ಭೌಮಸ್ಯ ಮಂಗಲಂ ಬಹುಪುಷ್ಪಕೈಃ ll

ಸರ್ವಾ ನಶ್ಯತಿ ಪೀಡಾ ತಸ್ಯ ಗ್ರಹಕೃತಾ ಧ್ರುವಂ .. 7..

..ll ಇತಿ ಶ್ರೀಸ್ಕಂದಪುರಾಣೇ ಅಂಗಾರಕಸ್ತೋತ್ರಂ ಸಂಪೂರ್ಣಂ ..ll

 

ಸಾಯಿರಾಂ 

ಮಂಜುನಾಥ ಹಾರೊಗೊಪ್ಪ 

 

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...