Adsense

Showing posts with label ರಾಹು ಮತ್ತು ಕೇತು ಗ್ರಹ ದೋಷಗಳಿಗೆ ಪರಿಹಾರ ಕ್ರಮಗಳು. Show all posts
Showing posts with label ರಾಹು ಮತ್ತು ಕೇತು ಗ್ರಹ ದೋಷಗಳಿಗೆ ಪರಿಹಾರ ಕ್ರಮಗಳು. Show all posts

Tuesday, 21 July 2020

ರಾಹು ಮತ್ತು ಕೇತು ಗ್ರಹ ದೋಷಗಳಿಗೆ ಪರಿಹಾರ ಕ್ರಮಗಳು

ರಾಹು ಮತ್ತು ಕೇತು ಗ್ರಹ ದೋಷಗಳಿಗೆ ಪರಿಹಾರ ಕ್ರಮಗಳು : -

ಯಾವುದೇ ದೋಷಗಳಿಗೂ ಪರಿಹಾರ ಇರುತ್ತದೆ. ಹಾಗೆಯೇ ರಾಹುವುನಿಂದ ಎದುರಾಗುವ ಸಂಕಷ್ಟ, ವ್ಯಾಧಿಗಳನ್ನು ಪರಿಹರಿಸಿಕೊಳ್ಳಲೂ ಹಲವು ಮಾರ್ಗವಿದೆ.


1. ಸುಬ್ರಹ್ಮಣ್ಯ ಪೂಜೆ ಮಾಡಬೇಕು. ಪ್ರತಿ ತಿಂಗಳು ಬರುವ ಶುಕ್ಲಪಕ್ಷದ ಷಷ್ಠಿಯಂದು ಸುಬ್ರಹ್ಮಣ್ಯ ದೇವರಿಗೆ ಅರ್ಚನೆ ಅಭಿಷೇಕ ಮಾಡಿಸುವುದು.

2. ದುರ್ಗಾದೇವಿಯು ರಾಹುವಿಗೆ ಅಧಿದೇವತೆಯಾದ್ದರಿಂದ ದುರ್ಗಾ ಅಷ್ಟೋತ್ತರ, ದುರ್ಗಾ ಸ್ತೋತ್ರಗಳ ಪಠಣೆ ಮಾಡುವುದು ಶುಭ.

ರಾಹುವಿನ ಬೀಜಾಕ್ಷರ ಮಂತ್ರ 'ಓಂ ಹ್ರಾಂ ಹ್ರೀಂ ಹ್ರೌಂ ಸಂ ಶ್ರೀರಾಹುವೇ ನಮಃ' ಎಂಬುದನ್ನು ಶುಕ್ರವಾರ 108 ಬಾರಿ ಪಠಿಸಬೇಕು.

ಶುಕ್ರವಾರದ ದಿನ, 'ಓಂ ದುಂ ದುರ್ಗಾಯೈ ನಮಃ' ಎಂಬುದನ್ನು ಶ್ರದ್ಧೆಯಿಂದ ದುರ್ಗಾದೇವಿ ಚಿತ್ರಪಟದ ಮುಂದೆ ಕುಳಿತು 108 ಬಾರಿ ಪಠಣ ಮಾಡಬೇಕು. ರಾಹುವನ್ನು ಕುರಿತು ಜಪ, ತಪ, ರಾಹುಶಾಂತಿ ಮಾಡಿಸಿ ಉದ್ದು ದಾನ ಮಾಡಬೇಕು.

ರಾಹು ಸಂಬಂಧ ಶ್ಲೋಕ 'ಅರ್ಧಕಾಯಂ, ಮಹಾವೀರ್ಯಂ ಚಂದ್ರಾದಿತ್ಯ ವಿಮರ್ದನಂ! ಸಿಂಹಿಕಾಗರ್ಭ ಸಂಭೂತಂ ತಂ ರಾಹುಂ ಪ್ರಣಮಾವ್ಯಹಂ' ಎಂಬುದನ್ನು ಸಂಕಷ್ಟ ವ್ಯಾಘ್ರಗಳು ಉಂಟಾದಾಗ ನಿತ್ಯ 5 ಬಾರಿಯಾದರೂ ಶ್ರದ್ಧೆಯಿಂದ ಪಠಿಸಬೇಕು.
ದುರ್ಗಾ ದೇವಸ್ಥಾನದಲ್ಲಿ, ಮಂಗಳವಾರ, ಶುಕ್ರವಾರ ಪೂಜೆ, ಅರ್ಚನೆ ಮಾಡಿಸಬೇಕು

3.* ರಾಹು ಗ್ರಹ ದೋಷಕ್ಕೆ ಪ್ರತಿ ಶನಿವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಉದ್ದಿನಬೇಳೆ ಸಹಿತ ದಾನ ಮಾಡಬೇಕು.

* ಕೇತು ಗ್ರಹ ದೋಷಕ್ಕೆ ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಹುರುಳಿಕಾಳು ದಕ್ಷಿಣೆ ಸಹಿತ ದಾನ ಮಾಡಬೇಕು.

4. ಯಾವುದೇ ರಾಹು ಗ್ರಹದ ದೋಷದಿಂದಾಗಿ ಕಷ್ಟ ಪಡುವ ಜನರು ಪರಿಹಾರಕ್ಕೆ ರಾಹು ಮಂತ್ರ ಜಪ ತರ್ಪಣ ಹಾಗೂ ಶಾಂತಿ ಹವನ ಮಾಡಿಸಬಹುದು.

ಜಾತಕದಲ್ಲಿ ರಾಹು ಉತ್ತಮ ಸ್ಥಿತಿಯಲ್ಲಿ ಇದ್ದು ರಾಹು ದೆಶೆ ನಡೆಯುತ್ತಿದ್ದರೆ ಉತ್ತಮ ಗುಣಮಟ್ಟದ ಗೋಮೆಧಕ ರತ್ನವನ್ನು ಬೆಳ್ಳಿಯಲ್ಲಿ ಉಂಗುರ ಮಾಡಿಸಿ ಕ್ರಮವಾಗಿ ಅದನ್ನು ಬುಧವಾರ ಜಲ ಗುರುವಾರ ಹಾಲು ಹಾಗೂ ಶುಕ್ರವಾರ ಉದ್ದಿನ ಬೇಳೆಯಲ್ಲಿ ಇರಿಸಿ ಸಂಸ್ಕಾರ ಆದ ನಂತರ ಶನಿವಾರದಂದು ಸೂರ್ಯೋದಯಕ್ಕೆ ಸರಿಯಾಗಿ ಅದನ್ನು ಪೂಜಿಸಿ ಧರಿಸುವುದು ಅಥವಾ ದುರ್ಗಾ ಸಪ್ತಶತೀ ಪಾರಾಯಣ, ಉದ್ದಿನ ಬೇಳೆ ದಾನ, ರಾಹು ಕಾಲದಲ್ಲಿ ದುರ್ಗಾದೇವಿಗೆ ನಿಂಬೆ ದೀಪ ಹಚ್ಚುವುದು ಮಾಡಬಹುದು.

* ಮೇಲೆ ತಿಳಿಸಿದ ಪರಿಹಾರಗಳಲ್ಲಿ ನಿಮಗೆ ಯಾವುದು ಸಾಧ್ಯವೋ ಅದನ್ನು ಮಾಡಬಹುದು.


* ಕೇತುಗ್ರಹಕ್ಕೆ ಪರಿಹಾರಗಳು *

1. ಫಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಂ।
ರೌದ್ರಂ ರುದ್ರಾತ್ಮಕಂ ಘೋರಂ ತಂ ಕೇತು ಪ್ರಣಮಾಮ್ಯಹಂ|

2. ಬೀಜಾಕ್ಷರ ಮಂತ್ರ
“ಓಂ ಪ್ರಾಂ ಪ್ರೀಂ ಪ್ರೌಂ ಸಃ ಶ್ರೀ ಕೇತುವೇ ನಮಃ'.

3. ಪ್ರತಿದಿನ “ಓಂ ಗಂ ಗಣಪತಿಯೇ ನಮಃ” 108ರಿಂದ 1008 ಸಲದ ವರೆಗೆ
ಪಠಿಸಿ.

4. ಪ್ರತಿ ಮಾಸದಲ್ಲಿ ಬರುವ ಸಂಕಷ್ಟಹರ ಗಣಪತಿಯ ವ್ರತ ಮಾಡಿ,

5, ಶನಿ-ಕೇತು ಮಂತ್ರ ಪಠಿಸುತ್ತಾ ಅಶ್ವಥ ವೃಕ್ಷಕ್ಕೆ 9 ಪ್ರದಕ್ಷಿಣೆ ಮಾಡಿ, ಹುರಳಿ ದಾನ
ನೀಡಿ.

6. ಪ್ರತಿ ಮಂಗಳವಾರ ಶ್ರೀ ಗಣೇಶನಿಗೆ ನೀರಿನಿಂದ ಅಭಿಷೇಕ ಮಾಡಿ ಗಂಧ
ಪುಷ್ಪವಿಟ್ಟು ಪೂಜಿಸಿ, ಶ್ರೀ ಗಣೇಶನ ಅಷ್ಟೋತ್ತರ ಪಠಿಸಿ. ಹೂವಿನ ಅರ್ಚನೆ
ಮಾಡಿ.

7, ಮಂಗಳವಾರಗಳಲ್ಲಿ ಸ್ನಾನದ ನಂತರ ಬಣ್ಣದ ವಸ್ತ್ರ ಧರಿಸಿ, 108 ಸಲ ಕೇತು ಮಂತ್ರ
ಪಠಿಸಿ, ನವಗ್ರಹಗಳಿಗೆ 9 ಪ್ರದಕ್ಷಿಣೆ ಮಾಡಿ, ಹುರಳಿ ದಾನ ಮಾಡಿ.

8. ರಾಹುವಿನಂತೆ ನೀರಿಗೆ ಗರಿಕೆ ಮತ್ತು ದರ್ಭೆ ಹಾಕಿಕೊಂಡು ಅಶ್ವಥ ವೃಕ್ಷಕ್ಕೆ
ಶನಿವಾರ 9 ಪ್ರದಕ್ಷಿಣೆ ಮಾಡಿ, ಮರದ ಬುಡಕ್ಕೆ ನೀರು ಹಾಕಿ, ನವಗ್ರಹಗಳಿಗೆ 9 ಪ್ರದಕ್ಷಿಣೆ ಮಾಡಿ, ಹುರಳಿ ದಾನ ಮಾಡಿ.

9, ಕೇತುವಿನ ವೈಡೂರ್ಯವನ್ನು ಧರಿಸಿ (after consulting astrologer)

10. ಶೀಘ್ರ ಉಪಶಮನಕ್ಕೆ ಮಂಗಳವಾರದಿಂದ ಮಂಗಳವಾರದವರೆವಿಗೆ ಪ್ರತಿದಿನ
ಮರಳಿ ದಾನ ನೀಡಿ. ಧರಿಸಿ,

11. ಅಶ್ವಗಂಧದ ಬೇರನ್ನು ಮಂಗಳ ಅಥವಾ ಗುರುವಾರಗಳಲ್ಲಿ ನೀಲಿ ಬಣ್ಣದ ದಾರದಲ್ಲಿ ಧರಿಸಿ

12. ಲಾಲ್‌ಕಿತಾಬ್ ರೀತಿ ನಾಯಿಗಳಿಗೆ ಆಹಾರ ನೀಡಿ.

13. ಜಾತಕರ ಪುತ್ರನು ಜಾತಕರಿಗೆ ವಿಧೇಯತೆಯಿಂದ ಇಲ್ಲದಿದ್ದರೆ ನಡತೆ ಸರಿಯಿಲ್ಲದೆ
ಇದ್ದರೆ, ಒಂದು ಕಂಬಳಿಯನ್ನು ದೇವಾಲಯಕ್ಕೆ ದಾನ ಮಾಡಿ.

* ಮೇಲೆ ತಿಳಿಸಿದ ಪರಿಹಾರಗಳಲ್ಲಿ ನಿಮಗೆ ಯಾವುದು ಸಾಧ್ಯವೋ ಅದನ್ನು ಮಾಡಬಹುದು.

ಸಾಯಿರಾಂ
ಮಂಜುನಾಥ ಹಾರೊಗೊಪ್ಪ 

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...