Adsense

Showing posts with label ಅಪೇಕ್ಷಿತ ಕಾರ್ಯಗಳು ಶೀಘ್ರವಾಗಿ ಸಿದ್ಧಿಸುವದಕೆ. Show all posts
Showing posts with label ಅಪೇಕ್ಷಿತ ಕಾರ್ಯಗಳು ಶೀಘ್ರವಾಗಿ ಸಿದ್ಧಿಸುವದಕೆ. Show all posts

Tuesday, 21 July 2020

ಸೂರ್ಯ ಮಂತ್ರ

 ಅಪೇಕ್ಷಿತ ಕಾರ್ಯಗಳು ಶೀಘ್ರವಾಗಿ ಸಿದ್ಧಿಸುವದಕೆ ಪುರಾಣದಲ್ಲಿ ಸೂರ್ಯ ಮಂತ್ರ ಜಪ :- 

ಹಿಂದೂ ಪುರಾಣದಲ್ಲಿ ಸೂರ್ಯನು ಏಳು ಕುದುರೆಗಳನ್ನು ಹೊಂದಿರುವ ರಥದಲ್ಲಿ ಸವಾರಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ಏಳು ಕುದುರೆಗಳು ಮಾನವ ದೇಹದ ಏಳು ಚಕ್ರಗಳನ್ನು ಹಾಗೂ ಮಳೆ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತದೆ. ಬ್ರಹ್ಮಾಂಡದ ಮೂಲ ದೇವ ಮತ್ತು ವಿರಾಟ ಪುರುಷನ ಕಣ್ಣು ಎಂದು ಸಹ ಕರೆಯಲಾಗುವುದು. ಸಂತರು, ಅಸುರರು ಮತ್ತು ಮಾನವರು ಸೂರ್ಯನನ್ನು ಐದು ಸರ್ವೋತ್ತಮ ದೇವರುಗಳಲ್ಲಿ ಒಬ್ಬ ಎಂದು ಪೂಜಿಸುತ್ತಾರೆ.

ಸೂರ್ಯ ದೇವನ ಪೂಜೆ ಮತ್ತು ಪ್ರಯೋಜನಗಳು

ನಿತ್ಯವೂ ಸೂರ್ಯ ದೇವನನ್ನು ಪೂಜಿಸುವುದರಿಂದ ಅನೇಕ ಅನುಕೂಲವನ್ನು ಪಡೆದುಕೊಳ್ಳಬಹುದು. ಸೂರ್ಯನ ಪೂಜೆಯಿಂದ ವ್ಯಕ್ತಿ ಆಂತರಿಕ ಶಕ್ತಿ, ಆತ್ಮವಿಶ್ವಾಸವನ್ನು ಪಡೆದುಕೊಳ್ಳುತ್ತಾನೆ. ಅಂತೆಯೇ ಸಂವಹನ ಕ್ರಿಯೆಯನ್ನು ಸುಧಾರಿಸುತ್ತದೆ. ಪೂಜೆಯಿಂದ ಗ್ರಹಗಳ ದೋಷ ಹಾಗೂ ಋಣಾತ್ಮಕ ಸಂಗತಿಗಳಿಂದ ಸುಲಭವಾಗಿ ಪಾರಾಗಬಹುದು. ಅಲ್ಲದೆ ಜೀವನದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಪಡೆದುಕೊಳ್ಳಬಹುದು.

ಸೂರ್ಯನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಂಡರೂ ಸಾಕಷ್ಟು ತೊಂದರೆಗಳು ನಮ್ಮಿಂದ ದೂರ ಸರಿಯುತ್ತವೆ. ಆರೋಗ್ಯ, ಸಂಪತ್ತು ಸಮೃದ್ಧಿಯಾಘುತ್ತವೆ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಧೈರ್ಯ ಹಾಗೂ ಅವಕಾಶಗಳು ಕೈಗೂಡಿ ಬರುತ್ತವೆ.

ಪ್ರಾಚೀನ ಪದ್ಧತಿಯ ಪ್ರಕಾರ ಸೂರ್ಯನಿಗೆ ಅಘ್ರ್ಯ ನೀಡಿದರೆ ಮಾನಸಿಕ, ದೈಹಿಕ ಮತ್ತು ಪ್ರಾಯೋಗಿಕ ಸಹಿಷ್ಣುತೆಯನ್ನು ನೀಡುತ್ತದೆ. ಅದು ಜೀವನದಲ್ಲಿ ಉಂಟಾಘುವ ಅನೇಕ ಸಂಘರ್ಷಗಳನ್ನು ತಡೆಯುತ್ತದೆ. ಸೂರ್ಯ ದೇವನಿಗೆ ನಿಯಮಿತವಾಗಿ ಪೂಜೆ ಸಲ್ಲಿಸುವುದರಿಂದ ಬುದ್ಧಿಶಕ್ತಿ ಹೆಚ್ಚುವುದು, ವಿದ್ವಾಂಸರು ಆಗುವ ಸಾಧ್ಯತೆಗಳಿರುತ್ತವೆ. ವ್ಯಕ್ತಿಯ ಮನಸ್ಸಿನಲ್ಲಿ ಅಹಂ, ಕೋಪ, ದುರಾಸೆ, ಬಯಕೆ ಮತ್ತು ದುಷ್ಟ ಆಲೋಚನೆಗಳನ್ನು ನಿವಾರಿಸುತ್ತದೆ

ಲೋಕಾಲೋಕ ಪ್ರಕಾಶಾಯ| ಸರ್ವಲೋಕೈಕ ಚಕ್ಷುವೇ|

ಲೋಕೋತ್ತರ ಚರಿತ್ರಾಯ| ಭಾಸ್ಕರಾಯ ನಮೋ ನಮಃ||

ಕಾಲಚಕ್ರದ ಗಣನೆಯಲ್ಲಿ ಉತ್ತರಾಯಣ, ದಕ್ಷಿಣಾಯಣ ಮಹತ್ವದ ಘಟ್ಟಗಳು. ದೇವತೆಗಳಿಗೆ ಉತ್ತರಾಯಣ ಹಗಲು, ದಕ್ಷಿಣಾಯಣ ರಾತ್ರಿ. ಈ ಕಾಲ ಗಣನೆಗೆ ಮೂಲಾಧಾರವೇ ಸೂರ್ಯ. ಕಾಲ ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಕಾಲವೆಂಬುದು ಅನಂತವಾಗಿದ್ದು ಇದಕ್ಕೆ ಆದಿ-ಮಧ್ಯ-ಅಂತ್ಯವೆಂಬುದಿಲ್ಲ.

ಇದೆಲ್ಲದರ ಕಾರಣಕರ್ತ ಚಕ್ಷುಗೋಚರನಾದ ದೈವ ಸೂರ್ಯ. ಭಚಕ್ರದ ಪರಿಭ್ರಮಣೆಯಲ್ಲಿ ಸೂರ್ಯ ಮಕರ ಸಂಕ್ರಾಂತಿ ವೃತ್ತವನ್ನು ಮುಟ್ಟಿ ಮಕರ ರಾಶಿಗೆ ಪ್ರವೇಶ ಮಾಡಿ, ತನ್ನ ದಕ್ಷಿಣಾಯನವನ್ನು ಮುಗಿಸಿ ಉತ್ತರಮುಖಿಯಾಗುವ ದಿನವೇ ಉತ್ತರಾಯಣ ಪುಣ್ಯಕಾಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವೇ ಸಂಕ್ರಮಣ. ಸಂಕ್ರಮಣ ಕಾಲ ಸೂರ್ಯೋಪಾಸಕರಿಗೆ ಶ್ರೇಷ್ಠವಾದ ದಿನ. ಈ ದಿನದಂದು ನದಿಗಳಲ್ಲಿ ಪುಣ್ಯ ಸ್ನಾನ ಮಾಡುವುದು, ಸೂರ್ಯದೇವನಿಗೆ ಅಘ್ರ್ಯಪಾದ್ಯಗಳನ್ನಿತ್ತು ನಮಸ್ಕಾರ ಮಾಡುತ್ತಾರೆ. ಈ ದಿನದಂದು ಆದಿತ್ಯ ಹೃದಯ ಪಠಿಸುವುದು ಒಳ್ಳೆಯದು.

ಸೂರ್ಯಾರಾಧನೆಗೆ ಪೂರಕ ಮಂತ್ರಗಳು

ಸೂರ್ಯ ಲಘು ಮಂತ್ರ  : ಓಂ ಸೂರ್ಯ ನಾರಾಯಣಾಯ ನಮಃ 

ಸೂರ್ಯ ತಂತ್ರ ವಿಧಾನ ಮಂತ್ರ : ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ

ಸೂರ್ಯ ಬೀಜ ಮಂತ್ರ : ಓಂ ಘೃಣೀಃ ಸೂರ್ಯಾಯ ನಮಃ

ಸೂರ್ಯ ಗಾಯತ್ರಿ : ಓಂ ಭಾಸ್ಕರಾಯ ವಿದ್ಮಹೇ| ಜ್ಯೋತಿಷ್ಕರಾಯ ಧೀಮಹೀ| ತನ್ನೋ ಸೂರ್ಯ ಪ್ರಚೋದಯಾತ್‌|

ಸೂರ್ಯ ದ್ವಾದಶ ಮಂತ್ರ :

ಆದಿತ್ಯ ಪ್ರಥಮಂ ನಾಮ ದ್ವಿತೀಯಂ ತು ದಿವಾಕರಃ|

ತೃತೀಯ ಭಾಸ್ಕರಃ ಪ್ರೋಕ್ಷಂ ಚತುರ್ಥೇ ತು ಪ್ರಭಾಕರಃ|

ಪಂಚಮಂ ತು ಸಹಸ್ತ್ರಾಂಶು ಷಷ್ಠಂ ತ್ರೈಲೋಕ್ಯಲೋಚನಃ|

ಸಪ್ತಮಂ ಹರಿದ್ರಶ್ಚಶ್ಚ ಅಷ್ಟಮಂ ಚ ವಿಭಾವಸುಃ|

ನವಮಂ ದಿನಕರಃ ಪ್ರೋಕ್ತೋ ದಶಮಂ ದ್ವಾದಶಾತ್ಮಕಃ|

ಏಕಾದಶಂ ತ್ರಯೀಮೂರ್ತಿಃ ದ್ವಾದಶಂ ಸೂರ್ಯ ಏವ ಚ||

ಮಂತ್ರ ಕ್ರಮ : ಸೂರ್ಯ ಮಂತ್ರವನ್ನು 7000 ಬಾರಿ ಪಠಿಸಬೇಕು. ಇದನ್ನು ತ್ರಿಗುಣವಾಗಿ ಅಂದರೆ 21,000 ಬಾರಿ ಜಪಿಸಿದರೆ ಅಪೇಕ್ಷಿತ ಕಾರ್ಯಗಳು ಶೀಘ್ರವಾಗಿ ಸಿದ್ಧಿಸುತ್ತವೆ

ಸಾಯಿರಾಂ 
ಮಂಜುನಾಥ ಹಾರೊಗೊಪ್ಪ 

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...