Adsense

Monday, 6 July 2020

ಸಾಲದ ಹೊರೆಗ, ಋಣಮೋಚಕ ಮಂಗಳ ಸ್ತೋತ್ರ

ಸಾಲದ ಹೊರೆ ಇರುವವರು, ಪ್ರತಿನಿತ್ಯವೂ ಋಣಮೋಚಕ ಮಂಗಳ ಸ್ತೋತ್ರವನ್ನು ಪಠಿಸಬೇಕು. ಇದರ ಪ್ರಭಾವದಿಂದಾಗಿ ವೇಗವಾಗಿ ಸಾಲ ತೀರುವುದಕ್ಕೆ/ಮುಕ್ತಿಹೊಂದುವದಕ್ಕೆ ಮಾರ್ಗಗಳು ದೊರೆಯುವುದು.

Note:- This is what I have gathered in the scripture that I have given you, which is the solution for debt relief, so that it may be of benefit to others. Those who are in need can recite this.
ವಿ-ಸೂ : - ಇದು ನಾನು ನನಲ್ಲಿರುವ ಗ್ರಂಥದಲ್ಲಿ ಸಂಗ್ರಹಿಸಿ ನಿಮಗೆ ತಿಳಿಸಿರುವೆ, ಇದು ಸಾಲದ ಋಣ ಮುಕ್ತಿಗಾಗಿ ಪರಿಹಾರವಾಗಿರುತ್ತದೆ, ಅದರಿಂದ ಇದು ಇತರರಿಗೆ ಉಪಯೋಗವಾಗಬಹುದು ಅನುವ ಆಧಾರದಮೇಲೆ ಕೊಟ್ಟಿರುವೆ. ಅವಶ್ಯಕತೆ ಇರುವವರು ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಬಹುದು.
ಸ್ತೋತ್ರ ಮತ್ತು ಭಾವಾರ್ಥ :-
|| ಋಣಮೋಚಕ ಮಂಗಲ ಸ್ತೋತ್ರಮ್ ||
ಮಂಗಲೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದ: |
ಸ್ಥಿರಾಸನೋ ಮಹಾಕಾಯ: ಸರ್ವ ಕರ್ಮಾವರೋಧಕ: ||೧||
ಭಾವಾರ್ಥ:-ಮಂಗಳ,ಭೂಮಿಪುತ್ರ,ಋಣನಾಶಕ,ಧನದಾಯಿ,ಸ್ಥಿರಾಸನ,
ಮಹಾಕಾಯ, ಸರ್ವಕರ್ಮಗಳಿಗೆ ತಡೆಯನ್ನುಂಟುಮಾಡುವವ,...
ಲೋಹಿತೋ ಲೋಹಿತಾಕ್ಷಶ್ಚ ಸಾಮಗಾನಾಂ ಕೃಪಾಕರ: |
ಧರಾತ್ಮಜ: ಕುಜೋ ಭೌಮೋ ಭೂತಿದೋ ಭೂಮಿ ನಂದನ: ||೨||
ಭಾವಾರ್ಥ:-ಲೋಹಿತ,ಲೋಹಿತಾಕ್ಷ,ಸಾಮವೇದ ಗಾಯಕರಿಗೆ
ಕರುಣೆಯನ್ನು
ತೋರುವವ,ಭೂಮಿತನಯ,ಕುಜ,ಭೌಮ,ಅಭ್ಯುದಯಕಾರಕ,ಭೂಮಿಗೆ
ಸಂತಸವನ್ನು ದಯಪಾಲಿಸುವವ....
ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕ: |
ವೃಷ್ಟೇ ಕರ್ತಾsಪಹರ್ತಾಚ ಸರ್ವಕಾಮ ಫಲಪ್ರದ: ||೩||
ಅಂಗಾರಕ,ಯಮ,ಸರ್ವರೋಗವಿನಾಶಕ,ವೃಷ್ಟಿ[ಮಳೆ]ಕಾರಕ,ವೃಷ್ಟ್ಯಾಪ
ಹಾರಕ, ಸಮಸ್ತ ಕಾಮನೆಗಳ ಫಲದಾಯಕ...
ಏತಾನಿ ಕುಜನಾಮಾನಿ ನಿತ್ಯಮ್ ಯ: ಶ್ರದ್ಧಯಾ ಪಠೇತ್ |
ಋಣಂ ನ ಜಾಯತೇ ತಸ್ಯ ಧನಂ ಶೀಘ್ರ ಮವಾಪ್ನುಯಾತ್ ||೪||
ಭಾವಾರ್ಥ:-ಕುಜನ ಕುರಿತಾದ ಈ ಹೆಸರುಗಳನ್ನು ಅನುದಿನವೂ
ಶ್ರದ್ಧಾಯುಕ್ತನಾಗಿ ಯಾವಾತನು ಪಠಿಸುವನೋ ಅವನಿಗೆ ಸಾಲಾದಿ
ಋಣಗಳು ಬಾಧಿಸುವುದಿಲ್ಲ. ಅಂತಹವನು ಶೀಘ್ರವಾಗಿ
ಧನವಂತನಾಗುವನು.
ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂ ಶಕ್ತಿ ಹಸ್ತಂಚ ಮಂಗಲಂ ಪ್ರಣಮಾಮ್ಯಹಂ ||೫||
ಭಾವಾರ್ಥ:-ಭೂದೇವಿಯ ಗರ್ಭದಿಂದುದಿಸಿದವನೂ,ವಿದ್ಯುತ್ತಿನ
ಪ್ರಕಾಶದಂತೆ ಬೆಳಗುತ್ತಲಿರುವವನೂ,ಕುಮಾರನೂ,ಶಕ್ತಿಹಸ್ತನೂ
ಆಗಿರುವ ಮಂಗಳನಿಗೆ ನಾನು ನಮಿಸುವೆನು.
ಸ್ತೋತ್ರಮಂಗಾರಕಸ್ಯೈ ತತ್ಪಠನೀಯಂ ಸದಾನೃಭಿ: |
ನ ತೇಷಾಂ ಭೌಮಜಾ ಪೀಡಾ ಸ್ವಲ್ಪಾಪಿ ಭವತಿಕ್ವಚಿತ್ ||೬||
ಭಾವಾರ್ಥ:-ಅಂಗಾರಕನೆಂಬ ಹೆಸರಿನ ಈ ಕುಜ ಸ್ತೋತ್ರವು ಮನುಜರಿಂದ
ಯಾವಾಗಲೂ ಪಠಣ ಮಾಡತಕ್ಕದ್ದಾಗಿದೆ.ಆದರಿಂದ ಕುಜನ ಅನಿಷ್ಟಗಳು
ಅತ್ಯಂತ ವಿರಳವಾಗಿ ಕೂಡಾ ಕಿಂಚಿತ್ತೂ ಬಾಧಿಸದು.
ಅಂಗಾರಕ ಮಹಾಭಾಗ ಭಗವನ್ ಭಕ್ತವತ್ಸಲ |
ತ್ವಾಂ ನಮಾಮಿ ಮಮಾಶೇಷ ಮೃಣಮಾಶು ವಿನಾಶಯ ||೭||
ಭಾವಾರ್ಥ:-ಹೇ ಭಕ್ತವತ್ಸಲನೇ! ಸುಪ್ರಸಿದ್ಧನಾಗಿರುವ
ಭಗವದ್ಸ್ವರೂಪೀ ಕುಜನೇ, ನಿನಗಾನು ನಮಿಸುವೆನು. ನನ್ನ ಸಮಸ್ತ
ರಿಣದ ಹಂಗಿನಿಂದ ನಿ:ಶೇಷವಾಗಿ ಮುಕ್ತಗೊಳಿಸು.
ಋಣರೋಗಾದಿ ದಾರಿದ್ರ್ಯಂ ಯೇ ಚಾನ್ಯೇಹ್ಯಪಮೃತ್ಯವ: |
ಭಯಕ್ಲೇಷ ಮನಸ್ತಾಪಾನಶ್ಯಂತು ಮಮ ಸರ್ವದಾ ||೮||
ಭಾವಾರ್ಥ:-ಹಂಗು[ಸಾಲದಋಣ],ಅನಾರೋಗ್ಯಾದಿ ಅನಿಷ್ಟಗಳು,
ದರಿದ್ರತೆ, ಹಾಗೆಯೇ ಅಪಮೃತ್ಯು, ಭೀತಿ,ದು:ಖ, ಮನೋವ್ಯಥೆ,
ಸೇಡು ಇತ್ಯಾದಿ ಅನ್ಯ ಬಾಧೆಗಳು ಸದಾ ನಾಶವಾಗಲಿ.
ಅತಿವಕ್ರ ದುರಾರಾಧ್ಯ ಭೋಗಮುಕ್ತಾ ಜಿತಾತ್ಮನ: |
ತುಷ್ಟೋದದಾಸಿ ಸಾಮ್ರಾಜ್ಯಂ ರುಷ್ಟೋಹರಸಿ ತತ್ಕ್ಷಣಾತ್ ||೯||
ಭಾವಾರ್ಥ:-ಹೇ ಕುಜನೇ! ನೀನು ಶ್ರೇಷ್ಠನಾಗಿರುವ ಮಂಗಳ
ಗ್ರಹವಾಗಿರುವೆ. ಆರಾಧನೆಗೆ ಎಟಕದವನು. ಸುಖಾನುಭವಗಳಿಂದ
ವಿರಕ್ತನಾದವನು.ಆತ್ಮವನ್ನು ಜಯಿಸಿದಾತನು.ನೀನು
ತೃಪ್ತಿಹೊಂದಿದವನಾದರೆ ಸಾಮ್ರಾಜ್ಯವನ್ನು ದಯಪಾಲಿಸುವೆ.
ಅಸಂತುಷ್ಟನಾದರೆ ಆ ಕ್ಷಣವೇ ಅದನ್ನು ಅಪಹರಿಸುವೆ.
ವಿರಿಂಚಿಶಕ್ರವಿಷ್ಣೂನಾಂ ಮನುಷ್ಯಾಣಾಂತು ಕಾ ಕಥಾ |
ತೇನತ್ವಂಸರ್ವ ಸತ್ವೇನ ಗ್ರಹರಾಜೋ ಮಹಾಬಲ: ||೧೦||
ಭಾವಾರ್ಥ:-ಗ್ರಹಗಳ ಒಡೆಯನಾದ ನೀನು ಸಮಸ್ತ ಬಗೆಯ ಜೀವಿಗಳಲ್ಲಿ
ಅತಿಬಲಿಷ್ಟನು. ನಿನ್ನೆದುರು ಬ್ರಹ್ಮ,ಇಂದ್ರ,ವಿಷ್ಣು, ಹಾಗೂ
ಮನುಷ್ಯರ ಚರಿತ್ರೆ ಎಲ್ಲಿಹುದು?
ಪುತ್ರಾನ್ ದೇಹಿ ಧನಂದೇಹಿ ತ್ವಾಮಸ್ಮಿ ಶರಣಂಗತ: |
ಋಣ ದಾರಿದ್ರ್ಯ ದು:ಖೇನ ಶತ್ರೂಣಾಂ ಚ ಭಯಾತ್ತತ: ||೧೧||
ಭಾವಾರ್ಥ:-ಸ್ವಾಮಿಯೇ ನಿನಗನು ಶರಣಾಗಿರುವೆ. ನನಗೆ ಸಂತತಿಯನ್ನು
ಅನುಗ್ರಹಿಸು. ಸಂಪತ್ತನ್ನು ದಯಪಾಲಿಸು. ಸಾಲ,ದರಿದ್ರತೆ,ಸಂತಾಪ,
ಮತ್ತು ಶತ್ರುಗಳ ಭೀತಿಯಿಂದ ನನ್ನನ್ನು ರಕ್ಷಿಸುವವನಾಗು.
ಏಭಿರ್ದ್ವಾದಶಭಿ: ಶ್ಲೋಕೈರ್ಯ: ಸ್ತೌತಿ ಚ ಧರಾಸುತಂ |
ಮಹತೀಂ ಶ್ರಿಯಮಾಪ್ನೋತಿಹ್ಯಪರೋ ಧನದೋಯುವಾ ||೧೨||
ಭಾವಾರ್ಥ:-ಶ್ರೇಷ್ಠನೂ ಧನದಾಯಿಯೂ ತರುಣನೂ ಆಗಿರುವ
ಮಂಗಳನನ್ನು ಈ ಹನ್ನೆರಡು ಶ್ಲೋಕಗಳಿಂದ ಸ್ತುತಿಸುವವನು ಮಹಾ
ಸಂಪದಗಳನ್ನು ಹೊಂದುವನು.
|| ಇತಿ ಋಣ ಮೋಚಕ ಮಂಗಲ ಸ್ತೋತ್ರಮ್ ||
ಸಾಯಿರಾಂ
ಮಂಜುನಾಥ ಹಾರೊಗೊಪ್ಪ

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...