Adsense

Friday, 24 July 2020

ಬುಧವಾರ ಉಪವಾಸ ಮಾಡುವದರಿಂದ ಪ್ರಯೋಜನಗಳು (ಹಣದ ಸಮಸ್ಯೆಗೆ)

ಬುಧವಾರ ಉಪವಾಸ ಮಾಡುವದರಿಂದ ಪ್ರಯೋಜನಗಳು (ಹಣದ ಸಮಸ್ಯೆಗೆ)

ಹಣಕಾಸು ಸಮಸ್ಯೆ, ವ್ಯವಹಾರ ಸಮಸ್ಯೆ, ಉಪಯುಕ್ತ ಕೆಲಸಕ್ಕೆ ಆಗುವ ಅಡೆತಡೆಗಳು, ಶತ್ರುಗಳಿಂದ ಆಗುವ ತೊಂದರೆಗಳು, ಅಪಾಯಗಳಿಗೆ ಸಂಬಂದಿಸಿದ ತೊಂದರೆ, ಹಠಾತ ನಿಧಾನ, ವಿಪತ್ತುಗಳಿಂದ ಆಗುವ ತೊಂದರೆಗಳಿಂದ/ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಲು ಈ ಬುಧವಾರ ವ್ರತವನ್ನು ಮಾಡುವದಿಂದ ಪರಿಹಾರಮಾಡಿಕೊಳಬಹುದು.

ಇಲ್ಲಿ ಬುಧವಾರ ವ್ರತವನ್ನು ಎರಡು ವಿಧಾನಗಳಾಗಿ ಮಾಡಬಹುದು

1) ಸಂಪತ್ತು ಹಣ ವ್ಯವಹಾರ ಮತ್ತು ಉದ್ಯೋಗಕೆ ಸಂಬಂಧಿಸಿದಂತೆ ಅಥವಾ ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ಬುಧವಾರ ವ್ರತವನ್ನು ಸಂಪತ್ತಿನ ದೇವತೆ ಲಕ್ಷ್ಮಿ ಮಾತೆಗೆ ಅರ್ಪಿಸಬೇಕು.

2) ಶತ್ರು ಸಮಸ್ಯೆಗಳಿಂದ ಪರ-ಆಗಲು, ಅಕಾಲಿಕ ಮತ್ತು ಹಠಾತ ಮರಣ, ಅಪಘಾತ ಮತ್ತು ವಿಪತ್ತುಗಳಿಂದ ರಕ್ಷಣೆಗಾಗಿ ನೀವು ಈ ಬುಧವಾರ ವ್ರತವನ್ನು ಆಂಜಿನೇಯನ ಆರಾಧನೆಗೆ ಅರ್ಪಿಸಬೇಕು

ಈ ಮೇಲೆ ತಿಳಿಸಿದ ಎರಡರಲ್ಲಿ ಯಾವುದಕೆ ಸಂಬಂಧಪಟಂತೆ ವ್ರತವನ್ನು ಆಚರಣೆ ಮಾಡುತಿರ ಆ ದೇವರಿಗೆ ಪೂಜಿಸಬೇಕು. ಯಾವ ದೇವರಿಗೆ ನೀವು ಈ ಬುಧುವಾರ ವ್ರತವನ್ನು ಆಚರಣೆ ಮಾಡುತಿರ ಆ ದೇವಾ ಅಥವಾ ದೇವತೆಗೆ ಸಂಬಂಧಪಟಂತೆ ಮಂತ್ರವನ್ನು ೧ ಮಾಲೆ ಜಪಿಸಬೇಕು, ಅಥವಾ ಆ ದಿನಕ್ಕೆ ಒಮ್ಮೆ ಹನುಮಾನ್ ಚಲಿಸನೂ ಪಟನೆ ಮಾಡಬಹುದು

ಬುಧವಾರದ ಉಪವಾಸದ ನಿಯಮಗಳು ಈ ರೀತಿಯಾಗಿದೆ. 

1) ನಿಮ್ಮ ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ಈ ವ್ರತವನ್ನು ಕನಿಷ್ಠ ಹನೊಂದು (11 ಪ್ರತಿ ಬುಧವಾರ) ಉಪವಾಸ ವ್ರತವನ್ನು ಆಚರಿಸಲು ಪ್ರಥಮ ಬುಧವಾರದ ದಿನ ಸಂಕಲ್ಪ ಮಾಡಿಕೊಳಬೇಕು
2) ಉಪವಾಸದ ದಿನದಂದು ಸ್ವಚ್ಛವಾದ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.
3) ಈ ದಿನಕ್ಕೆ ಒಮ್ಮೆ ಹಾಲಿನಿಂದ ತಯಾರಿಸಿದ ಬಿಳಿ ಬಣ್ಣದ ಆಹಾರವನ್ನು ಸೇವಿಸಬೇಕು. ಈ ದಿನ ಹುಳಿ, ಮಸಾಲೆಯುಕ್ತ, ಉಪ್ಪು ಅಥವಾ ಜಂಕ್-ಫುಡ್ ಸೇವಿಸಬಾರದು.
4) ಈ ವ್ರತವನ್ನು ಮಹಿಳೆಯರು ಆಚರಣೆ ಮಾಡಿದರೆ, ಆ ದಿನ ತಮ್ಮ ಮಾಸಿಕ ಚಕ್ರವನ್ನು ಹೊಂದಿದರೆ ಈ ಉಪವಾಸವನ್ನು ಇಟ್ಟುಕೊಳಬಾರದು ಮತ್ತು ಯಾವುದೇ ರೀತಿಯ ಮಂತ್ರ ಪಟನೆ ಮಾಡಬಾರದು, ಆದರೆ ಈ ಮೇಲೆ ತಿಳಿಸಿದ ನಿಯಮಗಳನ್ನು ಪಾಲಿಸಬೇಕು ಮತ್ತು ಆಚರಣೆಯನ್ನು ಮುಂದುವರೆಸಲು ಹೆಚ್ಚುವರಿ ಬುಧುವಾರ ಉಪವಾಸವಾಗಿ ತೆಗೆದುಕೊಳಬೇಕು  (೧೧ ಬುಧವಾರ ಉಪವಾಸ ವ್ರತಕ್ಕೆ ಸರಿಹೋಗುವಹಾಗೆ)

ಬುಧವಾರ ಉಪವಾಸ ವ್ರತವನ್ನು ಸಾಮಾನ್ಯವಾಗಿ ಶ್ರೀ ಗಣೇಶ್ ಮತ್ತು ಬುಧ ಗ್ರಹಕೆ ಅರ್ಪಿಸಲಾಗೆದೆ ಅದೇ ರೀತಿ ಈ ವ್ರತವನ್ನು ಲಕ್ಸ್ಮಿ ಮತ್ತು ಆಂಜಿನೇಯನಿಗೂ ಅರ್ಪಿಸಬಹುದು)

ಹನುಮನ ಮಂತ್ರ :-
ಲಕ್ಷ್ಮಿ ಮಂತ್ರ :- 


ಸಾಯಿರಾಂ
ಮಂಜುನಾಥ ಹಾರೊಗೊಪ್ಪ    

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...