Adsense

Thursday, 9 July 2020

ಶ್ರೀ ರಾಘವೇಂದ್ರ ಸ್ತೋತ್ರ (ಅಪ್ಪಣಾಚಾರ್ಯ ವಿರಚಿತ)

ಶ್ರೀ ರಾಘವೇಂದ್ರ ಸ್ತೋತ್ರ (ಅಪ್ಪಣಾಚಾರ್ಯ ವಿರಚಿತ)
ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾ
ಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ |
ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾ
ದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ || ೧ ||
ಜೀವೇಶ-ಭೇದ-ಗುಣ-ಪೂರ್ತಿ-ಜಗತ್-ಸು-ಸತ್ತ್ವ-
ನೀಚೋಚ್ಚ-ಭಾವ-ಮುಖ-ನಕ್ರ-ಗಣೈಃ ಸಮೇತಾ |
ದುರ್ವಾದ್ಯಜಾ-ಪತಿ-ಗಿಲೈರ್ಗುರು-ರಾಘವೇಂದ್ರ-
ವಾಗ್-ದೇವತಾ-ಸರಿದಮುಂ ವಿಮಲೀಕರೋತು || ೨ ||
ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ
ಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ |
ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ
ಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ || ೩ ||
ಶ್ರೀ-ರಾಘವೇಂದ್ರೋ ಹರಿ-ಪಾದ-ಕಂಜ-
ನಿಷೇವಣಾಲ್ಲಬ್ಧ-ಸಮಸ್ತ-ಸಂಪತ್ |
ದೇವ-ಸ್ವಭಾವೋ ದಿವಿಜ-ದ್ರುಮೋಽಯ-
ಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ || ೪ ||
ಭವ್ಯ-ಸ್ವರೂಪೋ ಭವ-ದುಃಖ-ತೂಲ-
ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |
ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ
ದುರತ್ಯಯೋಪಪ್ಲವ-ಸಿಂಧು-ಸೇತುಃ || ೫ ||
ನಿರಸ್ತ-ದೋಷೋ ನಿರವದ್ಯ-ವೇಷಃ 
ಪ್ರತ್ಯರ್ಥಿ-ಮೂಕತ್ವ-ನಿದಾನ-ಭಾಷಃ |
ವಿದ್ವತ್-ಪರಿಜ್ಞೇಯ-ಮಹಾ-ವಿಶೇಷೋ
ವಾಗ್-ವೈಖರೀ-ನಿರ್ಜಿತ-ಭವ್ಯ-ಶೇಷಃ || ೬ ||
ಸಂತಾನ-ಸಂಪತ್-ಪರಿಶುದ್ಧ-ಭಕ್ತಿ-
ವಿಜ್ಞಾನ-ವಾಗ್-ದೇಹ-ಸು-ಪಾಟವಾದೀನ್ |
ದತ್ವಾ ಶರೀರೋತ್ಥ-ಸಮಸ್ತ-ದೋಷಾನ್
ಹತ್ವಾ ಸ ನೋಽವ್ಯಾದ್ ಗುರು-ರಾಘವೇಂದ್ರಃ || ೭ ||
ಯತ್-ಪಾದೋದಕ-ಸಂಚಯಃ ಸುರ-ನದಿ-ಮುಖ್ಯಾಪಗಾಽಽಸಾದಿತಾ-
ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ |
ದುಸ್ತಾಪತ್ರಯ-ನಾಶನೋ ಭುವಿ ಮಹಾ-ವಂಧ್ಯಾ-ಸು-ಪುತ್ರ-ಪ್ರದೋ
ವ್ಯ್ಂಗ-ಸ್ವಂಗ-ಸಮೃದ್ಧಿ-ದೋ ಗ್ರಹ-ಮಹಾಪಾಪಾಪಹಸ್ತಂ ಶ್ರಯೇ || ೮ ||
ಯತ-ಪಾದ-ಕಂಜ-ರಜಸಾ ಪರಿಭೂಷಿತಾಂಗಾ
ಯತ್-ಪಾದ-ಪದ್ಮ-ಮಧುಪಾಯಿತ-ಮಾನಸಾ ಯೇ |
ಯತ-ಪಾದ-ಪದ್ಮ-ಪರಿಕೀರ್ತನ-ಜೀರ್ಣ-ವಾಚಃ
ತದ್-ದರ್ಶನಂ ದುರಿತ-ಕಾನನ-ದಾವ-ಭೂತಮ್ || ೯ ||
ಸರ್ವ-ತಂತ್ರ-ಸ್ವತಂತ್ರೋಽಸೌ ಶ್ರೀ-ಮಧ್ವ-ಮತ-ವರ್ಧನಃ |
ವಿಜಯೀಂದ್ರ-ಕರಾಬ್ಜೋತ್ಥ-ಸುಧೀಂದ್ರ-ವರ-ಪುತ್ರಕಃ || ೧೦ ||
ಶ್ರೀರಾಘವೇಂದ್ರೋ ಯತಿ-ರಾಡ್ ಗುರುರ್ಮೇ ಸ್ಯಾದ್ ಭಯಾಪಹಃ |
ಜ್ಞಾನ-ಭಕ್ತಿ-ಸು-ಪುತ್ರಾಯುರ್ಯಶಃ-ಶ್ರೀ-ಪುಣ್ಯ-ವರ್ಧನಃ || ೧೧ ||
ಪ್ರತಿ-ವಾದಿ-ಜಯ-ಸ್ವಾಂತ-ಭೇದ-ಚಿಹ್ನಾದರೋ ಗುರುಃ |
ಸರ್ವ-ವಿದ್ಯಾ-ಪ್ರವೀಣೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೨ ||
ಅಪರೋಕ್ಷೀಕೃತ-ಶ್ರೀಶಃ ಸಮುಪೇಕ್ಷಿತ-ಭಾವಜಃ |
ಅಪೇಕ್ಷಿತ-ಪ್ರದಾತಾಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೩ ||
ದಯಾ-ದಾಕ್ಷಿಣ್ಯ-ವೈರಾಗ್ಯ-ವಾಕ್-ಪಾಟವ-ಮುಖಾಂಕಿತಃ |
ಶಾಪಾನುಗ್ರಹ-ಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೪ ||
ಅಜ್ಞಾನ-ವಿಸ್ಮೃತಿ-ಭ್ರಾಂತಿ-ಸಂಶಯಾಪಸ್ಮೃತಿ-ಕ್ಷಯಾಃ |
ತಂದ್ರಾ-ಕಂಪ-ವಚಃ-ಕೌಂಠ್ಯ-ಮುಖಾ ಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ-ಪ್ರಸಾದತಃ || ೧೫ ||
“(ಓಂ)ಶ್ರೀ ರಾಘವೇಂದ್ರಾಯ ನಮಃ” ಇತ್ಯಷ್ಟಾಕ್ಷರ-ಮಂತ್ರತಃ |
ಜಪಿತಾದ್ ಭಾವಿತಾನ್ನಿತ್ಯಮಿಷ್ಟಾರ್ಥಾಃ ಸ್ಯುರ್ನ ಸಂಶಯಃ || ೧೬ ||
ಹಂತು ನಃ ಕಾಯಜಾನ್ ದೋಷಾನಾತ್ಮಾತ್ಮೀಯ-ಸಮುದ್ಭವಾನ್ |
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮ-ವಿತ್ || ೧೭ ||
ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |
ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ || ೧೮ ||
ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ |
ಶ್ರೀ-ಮಧ್ವ-ಮತ-ದುಗ್ಧಾಬ್ಧಿ-ಚಂದ್ರೋಽವತು ಸದಾಽನಘಃ || ೧೯ ||
ಸರ್ವ-ಯಾತ್ರಾ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |
ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ || ೨೦ ||
ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ || ೨೧ ||
ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ
ಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ-ಭಂಗಾಕುಲೇ |
ನಾನಾ-ವಿಭ್ರಮ-ದುರ್ಭ್ರಮೇಽಮಿತ-ಭಯ-ಸ್ತೋಮಾದಿ-ಫೇನೋತ್ಕಟೇ
ದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ || ೨೨ ||
ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |
ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ || ೨೩ ||
ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |
ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ || ೨೪ ||
ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |
ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ || ೨೫ ||
ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |
ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ || ೨೬ ||
ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ || ೨೭ ||
ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |
ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ || ೨೮ ||
ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |
ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ || ೨೯ ||
ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || ೩೦ ||
ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” || ೩೧ ||
ಇತಿ ಶ್ರೀ-ರಾಘವೇಂದ್ರಾರ್ಯ-ಗುರು-ರಾಜ-ಪ್ರಸಾದತಃ |
ಕೃತಂ ಸ್ತೋತ್ರಮಿದಂ ದಿವ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿಧೈಃ || ೩೨ ||
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ೩೩ ||
ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ || ೩೪ ||

|| ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಸ್ತೋತ್ರಮ್ ||


ಆಸ್ತಿಯನ್ನು ಮಾರಾಟ

ಆಸ್ತಿಯನ್ನು ಮಾರಾಟ ಮಾಡಲು ಬಯಸಿದಲ್ಲಿ ಈ ತಂತ್ರ ಪ್ರಯೋಗ ಮಾಡಿ

1. ಈ ಭಾನುವಾರ ಪ್ರಾರಂಭಿಸಬೆಕ್ಕು 
2. 5 ಬಿಳಿ ಕೌಡಿ ತೆಗೆದುಕೊಳ್ಳಿ
3. ಪ್ರತಿ ಕೌಡಿ ಮಧ್ಯದಲ್ಲಿ ರಂಧ್ರವನ್ನು ಮಾಡಿ ಮತ್ತು ಈ ಕೌಡಿಯನ್ನು ಬ್ಲಾಕ್ ಬಣ್ಣದ ದಾರವನ್ನು ಸೇರಿಸಿ (ಸರ ಮಾಡಿ) 
4. ನಂತರ ಅದೇ ದಿನ, 5 ಕೌಡಿಗಳಲ್ಲಿ ಮಾರಾಟ ಮಾಡಲು ಬಯಸುವ ಆಸ್ತಿಯ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಈ ಕೌಡಿಗೆ ತುಂಬಿ ಈ ಕೌಡಿಯ ಹಾರವನ್ನು (ಸರ) ಬಾಬೂಲ್ ಮರದ (ನಮ್ಮ ಆಡುಭಾಷೆ ಜಾಲಿ ಮುಳ್ಳಿನ ಗಿಡ - ಇದು ಬಯಲು ಸೀಮೆ ಕಡೆ ಬಹಳ ಕಂಡು ಬರುವ ಗಿಡ ) ಬುಡ್ಡಕೆ ಕಟ್ಟಿ 
5. ನಂತರ ಈ ಬಾಬೂಲ್ ಮರದ ಬುಡ್ಡಕೆ ಪ್ರತಿದಿನ ಸುಮಾರು 50 ಗ್ರಾಂ ಎಣ್ಣೆಯನ್ನು ಅರ್ಪಿಸಬೇಕು ಇದು ಮುಂದಿನ ಭಾನುವಾರದವರೆಗೆ ಮಾಡಬೇಕು.(ಮುಂದಿನ ಭಾನುವಾರದವರೆಗೆ ಪ್ರತಿದಿನ ಮಾಡಬೇಕು)

ಇದು ತಾಂತ್ರಿಕ ಪ್ರಯೋಗ 

photos : 




ಸಾಯಿರಾಂ
ಮಂಜುನಾಥ ಹಾರೊಗೊಪ್ಪ 

Wednesday, 8 July 2020

ಋಣ ವಿಮೋಚನ ನೃಸಿಂಹ ಸ್ತೋತ್ರಂ

ಋಣ ವಿಮೋಚನ ನೃಸಿಂಹ ಸ್ತೋತ್ರಂ :- 





ಸ್ತೋತ್ರಂ :- 

ದೇವತಾ ಕಾರ್ಯ ಸಿದ್ಯರ್ಥಂ ಸಭಾಸ್ಥಂಭ ಸಮುಧ್ಭವಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ - ೧

ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಂ ವರದಾಯಕಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ - ೨

ಆಂತ್ರಮಾಲಧರಂ ಶಂಖಚಕ್ರಾಭ್ಜಾಯುಧ ಧಾರಿಣಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ -೩

ಸ್ಮರಣಾತ ಸರ್ವಪಾಪಗ್ನಂ ಖದ್ರೂಜ ವಿಷನಾಶನಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೪

ಸಿಂಹನಾದೇನಮಹತ ದಿಗ್ದಂತಿ ಭಯನಾಶನಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೫

ಪ್ರಹ್ಲಾದಂ ವರದಂ ಶ್ರೀಶಂ ಧೈತೇಶ್ವರ ವಿದಾರಿಣಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೬

ಕ್ರೂರಗ್ರಹೈ ಪೀಡಿತಾನಂ ಭಕ್ತಾನಂ ಅಭಯಪ್ರದಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೭

ವೇದವೇದಾಂತ ಯಜ್ಞೆಷಂ ಬ್ರಹ್ಮರುದ್ರಾದಿವಂದಿತಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ- ೮

ಯ ಇದಂ ಪಠತೇ ನಿತ್ಯಂ ಋಣ ಮೋಚನ ಸಂಹಿತಂ
ಅನ್ರುಣಿ ಜಾಯತೇ ಸತ್ಯೋ ಧನಂ ಶೀಘ್ರಮವಾಪ್ನುಯತ್ - ೯

ಇತಿ ಋಣ ವಿಮೋಚನ ನೃಸಿಂಹ ಸ್ತೋತ್ರಂ| 

ಸಾಯಿರಾಂ
ಮಂಜುನಾಥ ಹಾರೊಗೊಪ್ಪ

 

Tuesday, 7 July 2020

ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಶಾಸ್ತ್ರವು ನಿಜವಾಗಿಯೂ ಕೆಲಸ ಮಾಡುತ್ತ?

ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಶಾಸ್ತ್ರವು ನಿಜವಾಗಿಯೂ ಕೆಲಸ ಮಾಡುತ್ತ? 

ಖಂಡಿತ ....................

ಈ ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಶಾಸ್ತ್ರವು ಸುಲಭವಾಗಿ ನಮಗೆ ಪರಿಹಾರ ನೀಡುವುದಿಲ್ಲ, ನಮ್ಮ ಕುಂಡಲಿಯು ಬ್ರಹ್ಮಲಿಖಿತ ಕುಂಡಲಿಯಾಗಿದ್ದು. ಅದರಂತೆ ನಾವು ಪಾಪ ಪುಣ್ಯಗಳನ್ನು ಅನುಭವಿಸುತಿರಬೇಕು  ಆದರೆ ಆ ಕಷ್ಟಗಳನ್ನು ಅನುಭಸುವುದಕ್ಕೆ ನಮಗೆ ಸಹನಾಶಕ್ತಿ, ಧೈರ್ಯಕೊಟ್ಟು ಮುಂದೆ ಆಗುವ ಕೆಟ್ಟಫಲಗಳನ್ನು ಮೊದಲೇ ತಿಳಿಸಿ ಸುಲಭವಾಗಿ ಪರಿಹಾರ ಮಾಡಲು ಈ ಶಾಸ್ತ್ರವು ದಾರಿ ತೋರಿಸುತ್ತದೆ. 

ಉದಾಹರಣೆಗೆ :- ನಮ್ಮ ಕುಂಡಲಿ ಪ್ರಕಾರ ಮುಂದೆ ಅಪಘಾತವಾಗಿ ಕೈಕಾಲು ಮುರಿದುಕೊಳ್ಳುವ ಬದಲು ಅಪಘಾತದಿಂದ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಬಹುದು, ಒಬ್ಬ ತಂದೆ ಮಗನ ವಿದ್ಯಾಭಾಸ ಮಟ್ಟ ಮೊದಲೇ ತಿಳಿದರೆ ಅವರು ಅದಕ್ಕೆ ಸರಿಹೊಂದುವ ವಿದ್ಯಾಗೆ ಸೇರಿಸಬಹುದು, ಇಲ್ಲದೆ ಅಸೆ ಬಿದ್ದು ಉನ್ನತ ವಿದ್ಯೆ ಕಲಿಯಲು ಅನೇಕವಾಗಿ ಹಣ ಖರ್ಚು ಮಾಡಿ ಕೊನೆಗೆ ನಿರಾಶೆಯಾಗುವರು ಹಣ ಪೋಲು, ಸಮಯ ಪೋಲು ಆಗುವುದು ತಪ್ಪಿಸಬಹುದು.

ಈ ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ನಮ್ಮ ದೇಶದಲ್ಲಿ ಅನೇಕರು ನಂಬುವದಿಲ್ಲ ಕಾರಣ ಈ ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಶಾಸ್ತ್ರವು ಅವರಿಗೆ ಮೂಗಂಡನಂಬಿಕೆ ಮತ್ತು ಸುಳ್ಳು ಎನಿಸಿದೆ. ಈ ಶಾಸ್ತ್ರವು ಹೇಳಿದ ರೀತಿ ನಮ್ಮ ಜೀವನದಲ್ಲಿ ನಡೆಯುತ್ತಿಲ್ಲ, ಹೇಳುವುದೊಂದು ಆಗುವುದು ಇನ್ನೊಂದು ಎಂದು ಮನಗೊಂಡಿದ್ದಾರೆ ಇದು ಅವರ ತಪ್ಪಲ್ಲ, ಈ ಶಾಸ್ತ್ರದ ತಪ್ಪಲ್ಲ ಈ ಶಾಸ್ತ್ರವನ್ನು ಸರಿಯಾಗಿ ಅಭ್ಯಾಸ ಮಾಡದೇ ಫಲ ಜ್ಯೋತಿಷ ಸರಿಯಾಗಿ ತಿಳಿಯದೆ ಅರ್ಧಬಂರ್ಧ ಕಲಿತು ಅಥವಾ ಮಾಡುವ ಕಾರ್ಯದಲ್ಲಿ ಸರಿಯಾಗಿ ಮಾಡದೇ ಇದಾಗ ಇದು ಪ್ರತಿಫಲ ನೀಡುವುದಿಲ್ಲ.

ಆದರೆ ಈ ಶಾಸ್ತ್ರವನ್ನು ನಂಬಿ ಬರುವವರು ಈ ಶಾಸ್ತ್ರದಲ್ಲಿ ಎಲ್ಲವೂ ಮುದ್ರ ಮಂತ್ರ ತಂತ್ರ ಯಂತ್ರ ಅಥವಾ ಜ್ಯೋತಿಷ್ಯ ಕೊಡುತ್ತದೆ ಎಂದು ಬರಬಾರದು ಇದು ದಾರಿ ತೋರಿಸುತ್ತದೆ. ಈ ಶಾಸ್ತ್ರವನು ಅಭ್ಯಾಸ ಮಾಡುವವರು ಕಾಯ, ವಾಚ, ಮನಸಾ, ತಿಳಿದಂತಹ ವ್ಯಕ್ತಿಯು ಪರಿಹಾರ ನೀಡದಾಗ/ಹೇಳಿದಾಗ ಈ ಕ್ರಮವನ್ನು ಸರಿಯಾಗಿ ಮಾಡಿದರೆ ಸ್ವಲ್ಪ ಸ್ವಲ್ಪವಾಗಿ ಪರಿಹಾರ ಖ೦ಡಿತವಾಗುತ್ತದೆ. ಕೆಲವೊಂದು ವೇಳೆ ಶೇಕಡ ೧೦೦ ಭಾಗ ಪರಿಹಾರವಾಗದಿದ್ದರು ಕಡಿಮೆ ಅಥವಾ ಇಲ್ಲದೆ ಇರಬಹುದು ಆಗ ಬೇಸರ ಪಟ್ಟುಕೊಳ್ಳುದೇ ಮತ್ತೆ ಅದೇನೇ ಚೆನ್ನಾಗಿ ತಿಳಿದವರ ಹತ್ತಿರ ಸಲಹೆ ಪಡೆಯಿರಿ ಇದರಿಂದ ಸ್ವಲ್ಪವಾದರೂ ಉತ್ತಮವಾಗುತ್ತದೆ ಅಥವಾ ಮುಂದೆ ಇದಕ್ಕಿಂತ ತೊಂದರೆ ಆಗುವುದು ತಪ್ಪುತ್ತದೆ ಅಥವಾ ಕಡಿಮೆಯಾಗುತ್ತದೆ.


ಸಾಯಿರಾಂ 
ಮಂಜುನಾಥ ಹಾರೊಗೊಪ್ಪ 



ಸಂಜೆ ದೀಪ ಹಚ್ಚುವಾಗ ಪಠಿಸಬೇಕಾದ ಮಂತ್ರ

ಸಂಜೆ ದೀಪ ಹಚ್ಚುವಾಗ ಪಠಿಸಬೇಕಾದ ಮಂತ್ರ 

ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಪರಂ ತಪಃ |
ದೀಪೇನ ಹರತೇ ಸರ್ವಂ ಸಂದ್ಯಾ ದೀಪಂ ನಮೋಸ್ತುತೇ ||
ಶುಭಂ ಕರೋತಿ ಕಲ್ಯಾಣಂ ಆರೋಗ್ಯ೦ ಧನಸಂಪದಾ೦ |
ಶತ್ರು ಬುದ್ದಿ ವಿನಾಶಾಯ ದೀಪಂ ಜ್ಯೋತಿ ನಮೋಸ್ತುತೇ ||
ದೀಪಂ ಜ್ಯೋತಿ ಪರಬ್ರಹ್ಮ ದೀಪಜ್ಯೋತಿಜನಾರ್ದನಃ|
ದೀಪೋ ಹರತೇ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ||
ದೀಪಮೂಲೇ ಸ್ಥಿತೋ ಬ್ರಹ್ಮಾ ದೀಪ ಮದ್ಯೇ ಜನಾರ್ದನಃ|
ದೀಪಾಗ್ರೇ ಶಂಕರಃ ಪ್ರೂಕ್ತಃ ಸಂಧ್ಯಾದೀಪ ನಮೊಸ್ತ್ತುತೆ||
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ|
ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿ೦ ಕುರು || 


ಸಾಯಿರಾಂ 
ಮಂಜುನಾಥ ಹಾರೋಗೊಪ್ಪ

ವಶೀಕರಣ ಯಂತ್ರ

ಸ್ತ್ರೀ ಪ್ರೇಮ ಸಂಪಾದಿಸಲು ಮಡದಿಯಾಗಿರಲಿ ಅಥವಾ ವಿವಾಹಕ್ಕೆ ಬಯಸುವ ಇಚ್ಚಿತ ಸ್ತ್ರೀಯಾಗಿರಲಿ ಅವರ ಪ್ರೀತಿ ಪ್ರೇಮ ಸಂಪಾದಿಸಲು ಈ ಯಂತ್ರವನ್ನು ರಚನೆ ಮಾಡಿಬೇಕು 

ದಿನ :- ಶುಭ ಶುಕ್ರವಾರ 
ಇಂಕ್ :- ಹಸಿರು ಮಸಿಯಿಂದ 
ಕಟ್ಟಿಕೊಳ್ಳುವ ಸ್ಥಳ :- ಬಲಭುಜಕ್ಕೆ 
ದೇವದತ್ತ ಸ್ಥಳದಲ್ಲಿ  :- ದೇವದತ್ತ ಹೆಸರಿನ ಬದಲು ಇಚ್ಚಿತ ವ್ಯಕ್ತಿಯ ಹೆಸರು ಬರೆಯಬೇಕು.




ಸಾಯಿರಾಂ
ಮಂಜುನಾಥ ಹಾರೋಗೊಪ್ಪ 

ತಾಂತ್ರಿಕ ಲಕ್ಷ್ಮಿ ಮಂತ್ರ

ತಾಂತ್ರಿಕ ಲಕ್ಷ್ಮಿ ಮಂತ್ರ :-

ಈ ಲಕ್ಷ್ಮಿ ತಾಂತ್ರಿಕ ಸಾಧನೆಯು ಅತ್ಯಂತ ಪರಿಣಾಮಕಾರಿಯಾಗಿರುವದರಿಂದ ವ್ಯಾಪಾರಸ್ಥರು ಮಾಡಬಹುದು. 

ಈ ಮಂತ್ರ ಸಾಧನೆಯು ಸಂಪತ್ತು ಮತ್ತು ಜೀವನದಲ್ಲಿ ಭೌತಿಕ ಪ್ರಯೋಜನಗಳನ್ನು ಪಡೆಯುವಲ್ಲಿ ಅತ್ಯಂತ ಶಕ್ತಿಶಾಲಿ. 

ಇದು ರಹಸ್ಯವಾದ ತಾಂತ್ರಿಕ ಲಕ್ಷ್ಮಿ ಸಾಧನವಾಗಿರುತ್ತದೆ, ಈ ಮಂತ್ರವನ್ನು ಯಾವುದಾದರು ಶುಭ ಮುಹೂರ್ತ ಅಥವಾ ದೀಪಾವಳಿ ದಿನ ಮದ್ಯ ರಾತ್ರಿ ಮಂತ್ರ ಸಾಧನೆಯನ್ನು ಪ್ರಾರಂಭಿಸಬೇಕು.

ಸಾಧನೆ ವಿವರಣೆ :- ದೀಪಾವಳಿಯ ಹಬ್ಬದ ದಿನ ಮದ್ಯ ರಾತ್ರಿಯ ನಂತರ ಕಪ್ಪು ಕಂಬಳಿಯ ಮೇಲೆ ಕುಳಿತುಕೊಂಡು, ಅದೇ ಕಂಬಳಿಯ ಮುಂದೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಅಥವಾ ಛಾಯಾಚಿತ್ರವನ್ನು ಮೇಲೆ ಇಟ್ಟು, ೧೦ ದೀಪವನ್ನು ಬೆಳಗಿಸಬೇಕು (೧೦ ದೀಪಗಳು ತುಪ್ಪದ ಎಣ್ಣೆಯಲ್ಲಿ ಹಚ್ಚಬೇಕು) ದೇವಿಯ ವಿಗ್ರಹಕೆ ಅಥವಾ ಫೋಟೋ ಗೆ ದೂಪ ದೀಪ ಇತ್ಯಾದಿಗಳಿಂದ ಪೂಜಿಸಿ. ದೇವಿಗೆ 10 ಹತ್ತಿಯ ವಿಕ್ನಿಂದ ಆರತಿ ಮಾಡಿ (ಶುದ್ಧ ತುಪ್ಪದಿಂದ ಎಣ್ಣೆಯಿಂದ ಮಡಿದ ಹತ್ತಿಯ ವೀಕ್ )

ನಂತರ ಕೊನೆಯದಾಗಿ :-  

ದೇವಿಯ ಎದುರಿಗೆ ನಿಮಗೆ ಸಾಧ್ಯವಾದಷ್ಟು ನಿರಂತರವಾಗಿ ಕೆಳಗಡೆ ನೀಡಿರುವ ಮಂತ್ರವನ್ನು ಪಟನೆ ಮಾಡಿ , ಹಾಗೆಯೆ ಮುಂದಿನ ೧೦ ದಿನನಗಳ ವರೆಗೆ ಈ ಸಾಧನೆಯನ್ನು ಮುಂದುವರೆಸಿ 

ಮಂತ್ರ :- 

||ಓಂ ನಮೋ ಭಗವತಿ ಪದ್ಮ ಪದ್ಮಾವತಿ 
ಓಂ ಹ್ರೀಂ ಶ್ರೀ೦ ಐ೦ ಪೂರ್ವಯ, ದಕ್ಷಿಣಾಯ 
ಪಶ್ಚಿಮಯ, ಉತ್ತರಾಯ ಆಜ್ ಪೂರ್ವ 
ಸರ್ವಜನ ವಶ್ಯಾಂ ಕುರು ಕುರು ಸ್ವಾಹಾ|| 

ಸಾಯಿರಾಂ 
ಮಂಜುನಾಥ ಹಾರೊಗೊಪ್ಪ 

Monday, 6 July 2020

ಶತ್ರು ಸಮಸ್ಯೆಗೆ ಬಹಳ ಶಕ್ತಿಯುತವಾದ ಹನುಮನ ಮಂತ್ರ

*ಶತ್ರು ಸಮಸ್ಯೆಗೆ ಬಹಳ ಶಕ್ತಿಯುತವಾದ ಹನುಮನ ಮಂತ್ರ* :- 

ನಿಮ್ಮ ಶತ್ರು ನಿಮಗೆ ತೊಂದರೆ ನೀಡುತ್ತಿದ್ದಾರೆ ಮತ್ತು ನಿಮಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದರೆ ಈ ಹನುಮಾನ್ ಮಂತ್ರವನು ಪಠಿಸುವದರಿಂದ ಪರಿಹಾರವಾಗುತ್ತದೆ.

ಶತ್ರುಗಳ ಸಮಸ್ಯೆಗೆ ಈ ಹನುಮಾನ್ ಮಂತ್ರವನು ಅಭ್ಯಾಸ ಮಾಡುವ ವಿಧಿಗನು ಕೆಳಗೆ ನೀಡಲಾಗಿದೆ 

೧) ಮಂತ್ರವನು ಪ್ರಾರಂಭಿಸುವ ದಿನ :- ಶುಕ್ಲ ಪಕ್ಷ ಮಂಗಳವಾರ ರಾತ್ರಿ 
೨) ಒಂದು ಭಾರಿ ಹನುಮಾನ್ ಚಾಲೀಸ್ ಪಟನೆ ಮಾಡಿ 
೩) ಮಂತ್ರ ||ಓಂ ಹಂ ಹನುಮತೆ ನಮಃ|| 108 ಬಾರಿ ಪಠಿಸಿ 
೪) ಸೀತಾ-ರಾಮ್ ಪೂಜೆ ಮಾಡಿ 
೫) ಕೆಳಗಡೆ ಕೊಟ್ಟಿರುವ ಮಂತ್ರವನು 108 ಭಾರಿ ಪಠಿಸಿ 

   ಮಂತ್ರ :- ||ಓಂ ಪೂರ್ವ ಕಪಿ ಮುಖಾಯ ಪಂಚ ಮುಖ ಹನುಮತೆ ಠಃ ಠಃ ಠಃ ಠಃ ಠಃ ಸಕಲ ಶತ್ರು ಸಂಹಾರಯ ಸ್ವಾಹಾ||

೫) ನೀವು ಮಾಡಿದ ಯಾವುದೇ ತಪ್ಪುಗಳಿಗೆ ಕ್ಷಮೆಯಾಚಿಸಿ ಮತ್ತು ನಿಮ್ಮನ್ನು ಕ್ಷಮಿಸುವಂತೆ ದೇವರನ್ನು ಬೇಡಿಕೊಳಿ ಮತ್ತು ಶತ್ರುಗಳು ಸೃಷ್ಟಿಸಿದ ಸಮಸೆಗಳನ್ನು ತೊಡೆದು ಹಾಕಲು ನಿಮ್ಮ ಯಶಸ್ವಿಗೆ ಪ್ರಾಥಿಸಿಕೊಳ್ಳಿ.

ಸಾಯಿರಾಂ 
ಮಂಜುನಾಥ್ ಹಾರೊಗೊಪ್ಪ

ಶತ್ರು ನಾಶಕ ಯಂತ್ರ :-











ಶತ್ರು ನಾಶಕ ಯಂತ್ರ :- 
 ನಮಗೆ ಯಾರು ತೊಂದರೆ ಕೊಡುತ್ತಾರೆ ಅವರಿಗೆ ಉಪಯೋಗಿಸುವ ಯಂತ್ರ :

೧) ಈ ಯಂತ್ರವನ್ನು ಯಾವುದಾದರು ದಿನ ಒಂದು ಬಿಳಿಯ ಕಾಗದದ ಮೇಲೆ ಕಪ್ಪು ಬಣದ ಇಂಕ್ ನು ಬಳಸಿ ರಚನೆ ಮಾಡಿಕೊಳಬಹುದು, ಯಂತ್ರದ ಕೆಳಗಡೆ ವ್ಯಕ್ತಿಯ ಹೆಸರು ಬರೆಯಬೇಕು. 

೨) ಯಂತ್ರವನ್ನು ತಮ್ಮ ಎದುರಿಗೆ ಕೈಲಿ ಹಿಡಿದುಕೊಂಡು ಒಂದು ಸೂಜ್ಜಿಯಿಂದ ಈ ಯಂತ್ರವನ್ನು 15-20 ಬಾರಿ ಚುಚ್ಚಬೇಕು.

೩) ನಂತರ ಯಂತ್ರವನ್ನು ಹರಿದು ತಮ್ಮ ಮನೆಯ ಹೊರಗಡೆ ಎಸಯಬೇಕು. 

೪) ಈ ಯಂತ್ರ ಪ್ರಯೋಗಕ್ಕೆ ಯಾವುದೇ ರೀತಿಯ ಮಂತ್ರ ಅಥವಾ ಪ್ರಾಥನೆಯನ್ನು ಜಪಿಸುವ ಅವಶ್ಯಕತೆ ಇಲ್ಲ 

ಇದು ಒಂದು ಸರಿ ಪ್ರಯೋಗ ಮಾತ್ರ

ಕೋಪ ಕಡಿಮೆ ಮಾಡಿಕೊಳುವುದಕ್ಕೆ ಯಂತ್ರ

೧) ಈ ಯಂತ್ರವನ್ನು ಒಂದು ಬಿಳಿಯ ಕಾಗದದ ಮೇಲೆ ಯಾವುದಾದರು ಬಣದ ಇಂಕ್ ಇಂದ ರಚನೆ ಮಾಡಿಕೊಳ್ಳಿ.

೨) ಯಂತ್ರವನ್ನು ಪೂಜೆಯನು ದೂಪ, ದೀಪ ಹೂವು ಇತ್ಯಾದಿಗಳಿಂದ ಪೂಜಿಸಿ 

೩) ನಂತರ ಒಂದು ಕೆಂಪು ಬಣದ ಕಾಗದದಲ್ಲಿ ಮಾಡಚ್ಚಿ ದೇವರ ಪೂಜಾ ಸ್ಥಳದಲ್ಲಿ ೭ ದಿನಗಳವರೆಗೆ ಇಟ್ಟುಬಿಡಿ, ಪೂಜೆ ಮಾಡಿ 

೪) ಕೊನೆಯದಾಗಿ, ಈ ಯಂತ್ರವನ್ನು ಯಾವುದಾದರು ತಾಯಿತದಲಿ ಹಾಕಿ ಎಡಕೈ ರೆಟ್ಟೆ ಅಥವಾ ಕುತ್ತಿಗೆಗೆ ಧಾರಣೆ ಮಾಡಿ 

ಸಾಯಿರಾಂ 
ಮಂಜುನಾಥ ಹಾರೊಗೊಪ್ಪ

ವಶೀಕರಣ ಯಂತ್ರ


ಯಾವುದೇ ವ್ಯಕ್ತಿಯ ಮನಸ್ಸನ್ನು ನಿಯಂತ್ರಿಸಲು ವಶೀಕರಣ ಯಂತ್ರ :- 

ಯಾವುದೇ ಕಚೇರಿಯಲಿ ಅಧಿಕಾರದಲ್ಲಿ ಇರುವ ವ್ಯಕ್ತಿಯನ್ನು ಅಥವಾ ಶತ್ರು , ಪ್ರತಿಸ್ಪರ್ದಿ, ಅತ್ವ ಯಾವುದೇ ವ್ಯಕ್ತಿಯನ್ನು ನಿಯಂತ್ರಿಸುವ ಅತ್ಯಂತ ಶಕ್ತಿಯುತ ಯಂತ್ರವಿದು, ಇದು ನಿರ್ದಿಷ್ಟ ರೀತಿಯ ಯಂತ್ರವಾಗಿದು ಇದನ್ನು ಕೆಲವೊಮ್ಮೆ ಮಹಾಮೃತುಂಜಯ ಯಂತ್ರ ಎಂದೂ ಕರೆಯಲಾಗುತ್ತದೆ.

ರಚನೆ ವಿಧಾನ :- 

೧) ಯಾವುದೇ ದಿನ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ರಚನೆ ಮಾಡಬೇಕು 
೨) ಇದನ್ನು ಭೋಜಪತ್ರ ಅಥವಾ ಬಿಳಿ ಕಾಗದದ ಮೇಲೆ ಅಷ್ಟಗಂಧದ ಪೆಸ್ಟನಿಂದ ಒಂದು ಕಬ್ಬಿಣದ ಮೊಲೆಯಿಂದ ಈ ಯಂತ್ರವನ್ನು ರಚನೆ ಮಾಡಿಕೊಳಬೇಕು 
೩) ನಂತರ ಈ ಯಂತ್ರವನು ಒಂದು ಮರದ ಹಲಗೆಯ ಮೇಲೆ ಇಟ್ಟುಧೂಪ್ ದೀಪ ಇತ್ಯಾದಿಗಳಿಂದ ಪೂಜಿಸಬೇಕು.
೪) ನಂತರ ವಶೀಕರಣ ತಂತ್ರ :- ಈ ಯಂತ್ರವನ್ನು ಯಾವುದಾದರು ನಿರ್ಜನ ಪ್ರದೇಶಕೆ ತೆಗೆದುಕೊಂಡು ಹೋಗಿ ಒಂದು ದೊಡ್ಡ ಕಲ್ಲು ಅಥವಾ ಬಂಡೆಯ ತೆಗಳದೇ ಭದ್ರವಾಗಿ ಇಟ್ಟು ಬರಬೇಕು 

ನಂತರ ತಮಗೆ ಯಾರನ ನಮ್ಮಂತೆ ವಶೀಕರಣ ಮಾಡಿಕೊಳಬೇಕು ಆ ವ್ಯಕ್ತಿಯ ಎದುರಿಗೆ ಹೋಗಿ ಅಥವಾ ಭೇಟಿಯಾದಾಗ ಆ ವ್ಯಕ್ತಿಯು ನಿಮ್ಮ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಾನೆ. 

ಮೊದಲ ಅಡ್ಡ ಸಾಲು ले  लै लो 

ಎರಡನೇ ಅಡ್ಡ ಸಾಲು  लि ला ला

ಮೊದಲ ಕಂಬ ಸಾಲು लू लु ली 

ಎರಡನೇ ಕಂಬ ಸಾಲು लौ लं लः

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...