ಗೋವಿಗೆ (ಹಾಲುನೀಡುವ ಕರುಸಮೇತವಾಗಿರುವ ಗೋವನ್ನು) ಪೂಜಿಸುವದರಿಂದ ಆಗುವ ಪ್ರಯೋಜನಗಳು
ಗೃಹ ಶಾಂತಿ,ಪತಿ ಪತ್ನಿ ಅತ್ತೆ ಸೊಸೆಯರ ವೈಮಸ್ಸುಗಳು ನಿವಾರಣೆ, ನಿಮಗಿರುವ ಸಾಲದ ಬಾದೆ, ಹಣಕಾಸಿನ ತೊಂದರೆ ನಿವಾರಣೆ
ಗೋಪೂಜಾ ವಿದಾನ:-
ಬೇಕಾದ ಸಾಮಗ್ರಿಗಳು :- ಹೊಸ ಮೊರ ಹರಿಸಿನ ಕುಂಕುಮ ಹಸಿರುಬಳೆ ಸೀರೆ,ಕುಪ್ಪಸ ಬಾಳೆಹಣ್ಣು(೩,೫,೭,೯) ತೆಂಗಿನಕಾಯಿ ಹೂವು ಎಲೆ ಅಡಿಕೆ ಬೆಲ್ಲ ಎರಡು ಅಚ್ಚು ಒಂದು ಸೇರು ಅಕ್ಕಿ ಮೂರು ಹಿಡಿ ಅವಲಕ್ಕಿ ಕೊಬ್ಬರಿ ದಕ್ಷಿಣೆ ಈ ಎಲ್ಲಾ ವಸ್ತುಗಳನ್ನು ತಗೆದುಕೊಂಡು ಹೋಗಿ ಗೋವಿಗೆ ಸ್ನಾನಾದಿಗಳನ್ನು ಮಾಡಿಸಿ ನಂತರ ಗೋವನ್ನು ಅರಿಸಿನ ಕುಂಕುಮಗಳಿಂದ ಹೂವು ವಸ್ತ್ರಗಳಿಂದ ಅಲಂಕರಿಸಿ ಬಕ್ತಿಪೂರ್ವಕವಾಗಿ ಗೋಮಾತೆಯನ್ನು (ಹಾಲುನೀಡುವ ಕರುಸಮೇತವಾಗಿರುವ ಗೋವನ್ನು) ಪೂಜಿಸಬೇಕು
ಪ್ರಯೋಜನ :-
ಮಂಗಳವಾರ(ಕನಕಾಂಬರ,ಕೆಂಪುಕಣಗಲೆ,ಕೆಂಪು ಹೂವಿಂದ) ಮುಂಜಾನೆ ಅಥವ ಮುಸ್ಸಂಜೆ ಪೂಜಿಸುವುದರಿಂದ ಗೃಹ ಶಾಂತಿ,ಪತಿ ಪತ್ನಿ ಅತ್ತೆ ಸೊಸೆಯರ ವೈಮಸ್ಸುಗಳು ನಿವಾರಣೆಯಾಗುತ್ತವೆ,ಗೃಹಶಾಂತಿ ಉಂಟಾಗುತ್ತದೆ.
ಇದೇರೀತಿ ಶುಕ್ರವಾರ(ಮಲ್ಲಿಗೆ ಅಥವ ಬಿಳಿಹೂವುಗಳಿಂದ)ಪೂಜೆ ಮಾಡುವುದರಿಂದ ನಿಮಗಿರುವ ಸಾಲದ ಬಾದೆ, ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. (ಸೂಚನೆ:- ನೀವು ಪರಿಶುದ್ದರಾಗಿ ಕಾಮಧೇನುಪೂಜೆ (ಗೋಪೂಜೆ)ಮಾಡಿದಾಗ ನಿಮ್ಮ ಕಷ್ಟ ನಿವಾರಣೆ ಆಗುವುದೆ ಇಲ್ಲವೆ ಎಂಬುದಕ್ಕೆ ಗೋವು ನೀವು ಪೂಜೆ ಮಾಡುವಾಗ ಮಲ(ಸಗಣಿ) ಮೂತ್ರ (ಗಂಜಲ) ಹಾಕಿದರೆ ವಿಶೇಷ ಫಲಗಳು ನಿಮಗೆ ದೊರೆಯುತ್ತವೆ. ನೀವು ಪೂಜೆ ಮಾಡಲು ನಿರ್ದಾರ ಮಾಡಿದ ಹಿಂದಿನ ದಿನವೇ (ಅಕ್ಕಿ,ಗೋಧಿ,ತುಗರಿ,ಅವರೆ,ಕಡಲೆ,ಎಳ್ಳು,ಉದ್ದು,ಉರುಳಿ,(ಅಕ್ಕಿಒಂದುಹಿಡಿ,ಎಳ್ಳು ಒಂದುಹಿಡಿಹಾಕಿಉಳಿದವನ್ನು ಪ್ರತಿಯೊಂದು ದಾನ್ಯವನ್ನು ಕನಿಷ್ಟ ೨೫೦ಗ್ರಾಂಗಳಂತೆ ಹಾಕಿ,) ನವದಾನ್ಯಗಳನ್ನು ನೀರಲ್ಲಿ ನೆನೆಸಿಡಿ ನಂತರ ನೀವು ಪೂಜೆಗೆ ಹೋಗುವಾಗ ಅವುಗಳನ್ನು ಸ್ವಲ್ಪ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ರಾಗಿ ಹಿಟ್ಟು ಸೇರಿಸಿ ಸ್ವಲ್ಪ ಉಪ್ಪು ಹಾಕಿ ೩ ಅಥವ ೫ ಉಂಡೆ ತಂಬಿಟ್ಟಿನ ರೀತಿಯಲ್ಲಿ ಮಾಡಿಕೊಂಡು ಪೂಜಾನಂತರ ಗೋಮಾತೆಗೆ ಇದನ್ನೇ ನೈವೇದ್ಯರೀತಿಯಲ್ಲಿ ತಿನ್ನಿಸಿ ಅದು ತಿನ್ನುವಾಗ ಅದರ ಬಾಯಿಂದ ಬರುವ ಎಂಜಲನ್ನು ನಿಮ್ಮ ಕುಟುಂಬವರು ತಲೆಗೆ ಹಚ್ಚಿಕೊಳ್ಳಿ)
ಶುಭವಾಗಲಿ
ಸಾಯಿರಾಂ
ಮಂಜುನಾಥ ಹಾರೊಗೊಪ್ಪ
No comments:
Post a Comment