ಮಾಟದ ಪ್ರಭಾವಕೆ ಒಳಗಾದ ವ್ಯಕ್ತಿಯನ್ನು ಗುಣ ಪಡಿಸುವ ತಂತ್ರ / ವಿಧಾನ :-
ಯಾರಿಗಾದರೂ ಮಾಟ ಮಾಡಿದರೆ ಎಂದು ಸಂಶಯ ಉಂಟಾದಾಗ ಈ ಪರಿಣಾಮವನ್ನು ನಿರೀಕ್ಷಿಸಬಹದು, ವ್ಯಕ್ತಿಯ ಶರೀರದಲ್ಲಿ ಅತ್ಯಂತ ನೋವಾಗುವದು, ಶರೀರದಲ್ಲಿ ಬಿಸಿ ಹೆಚ್ಚಾಗುವದು, ತಲೆ ಭಾರವಾಗುವುದು, ಕೈಕಾಲುಗಳಲ್ಲಿ ಸಿಡಿತ ಉಂಟಾಗುವದು, ಹುಚ್ಚರಂತೆ ಮಾತಾಡುವದು, ಇನ್ನೊಬ್ಬರಿಗೆ ತೊಂದರೆ ಕೊಡುವದು, ಯಾವುದೇ ರೀತಿಯ ಔಷದಿ ಕೆಲಸ ಮಡದಿರುವುದು, ಮಂಕಾಗಿ ಕುಳಿತುಕೊಳ್ಳುವದು, ಹೀಗೆ ವಿವರಿಸಲಾರದ ಇತರೆ ಮುಂತಾದ ತೊಂದರೆಗಳು,
ಪರಿಹಾರ ಉಪಾಯ ಈ ರೀತಿ ಇದೆ.
1) ಐದು ಪಾವು ಕರಿಎಳ್ಳು,
2)ಅರ್ಧ ಕಿಲೋಗ್ರಾಮ ಆಗುವಷ್ಟು ಏಳು ಧಾನ್ಯಗಳ ಮಿಶ್ರಣ
3)ಐದು ಸೇರು ಬೇಳೆ
4)ಐದು ಸೇರು ಉದ್ದಿನ ಬೇಳೆ
ಈ ಎಲ್ಲವನ್ನು ಒಂದು ಕಪ್ಪು ಬಣ್ಣದ ಅರಿವೆಯಲ್ಲಿ ಕಟ್ಟಿ ಮಾಟ ಹೊಂದಿದ ವ್ಯಕ್ತಿಯ ಎದುರಿಗೆ 7 ಭಾರಿ ಮೇಲಿಂದ ಕೆಳಗೆ ನಿವಾಳಿಸಿ ಭೈರವ ಮಂದಿರದಲ್ಲಿ ಇಟ್ಟು ಹಿಂದಕ್ಕೆ ನೋಡದೆ ಮನೆಗೆ ಬರಬೇಕು ಈ ಕಾರ್ಯ ಶನಿವಾರದಂದು ಮಾಡಿದರೆ ಉತ್ತಮ
ಈ ರೀತಿ ಮಾಡುವದರಿಂದ ಮಾಟದ ಪ್ರಭಾವಕೆ ಒಳಗಾದ ವ್ಯಕ್ತಿ ಮಾಟ ದೋಷದಿಂದ ವಿಮುಕ್ತನಾಗುವನ್ನು.
ಸಾಯಿರಾಂ
ಮಂಜುನಾಥ ಹಾರೊಗೊಪ್ಪ
No comments:
Post a Comment