ಅಪಮೃತ್ಯು ಪರಿಹರಿಸೋ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ನಿನ್ನುಳಿದು || ಪ ||
ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನದಲೆನ್ನುದಾಸೀನ ಮಾಡುವುದು
ನಿನಗೆ ಅನುಚಿತೋಚಿತವೆ ಸಜ್ಜನಶಿಖಾಮಣಿಯೆ || ೧ ||
ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದರಸು
ಹರಿಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರ್ಯ ನೀ ದಯಾಕರನೆಂದು ಪ್ರಾರ್ಥಿಸುವೆ || ೨ ||
ಭವರೋಗ ಮೋಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಜವನ ಬಾಧೆಯ ಬಿಡಿಸೋ ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದೊ || ೩ ||
ಜ್ಞಾನವಾಯುರೂಪಕನೆ ನೀನಹುದೊ ವಾಣಿ ಪಂಚಾ
ನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾ ನಿನ್ನ ಮರೆಹೊಕ್ಕೆ
ದಾನವಾರಣ್ಯಕೃಶಾನು ಸರ್ವದಾ ಎನ್ನ || ೪ ||
ಸಾಧನ ಶರೀರವಿದು ನೀ ದಯದಿಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯ
ವೇದವಾದೋದಿತ ಜಗನ್ನಾಥವಿಠಲನ
ಪಾದಭಕುತಿಯ ಕೊಟ್ಟು ಮೋದವನು ಕೊಡು ಸತತ || ೫ ||
Adsense
Thursday, 9 July 2020
ಅಪಮೃತ್ಯು ಪರಿಹರಿಸೋ ಅನಿಲದೇವ (ಶ್ರೀ ಜಗನ್ನಾಥ ದಾಸರು)
Subscribe to:
Post Comments (Atom)
ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ
ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...
-
ಸಂಜೆ ದೀಪ ಹಚ್ಚುವಾಗ ಪಠಿಸಬೇಕಾದ ಮಂತ್ರ ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಪರಂ ತಪಃ | ದೀಪೇನ ಹರತೇ ಸರ್ವಂ ಸಂದ್ಯಾ ದೀಪಂ ನಮೋಸ್ತುತೇ || ಶುಭಂ ಕರೋತಿ ಕಲ್ಯಾಣಂ ಆ...
-
ಅಂಗಾರಕ ದೋಷ ಪರಿಹಾರ ಪ್ರತಿ ಮಂಗಳವಾರ ಪ್ರಾತಃಕಾಲ ಸೂರ್ಯೋದಯ ಸಮಯಕ್ಕೆ ಅಂದರೆ ಸೂರ್ಯ ಹುಟ್ಟುವ ಸಮಯದಲ್ಲಿ ಮೋಡ ಎಲ್ಲ ಕೆಂಪಾಗಿರುವಾಗ ದೇವರ ಮುಂದೆ ಎ...
No comments:
Post a Comment