Adsense

Wednesday, 2 September 2020

ಪಂಚಗವ್ಯವನ್ನು ತಯಾರಿಸಲು ಬೇಕಾದ ವಸ್ತುಗಳು-

 

ಪಂಚಗವ್ಯವನ್ನು ತಯಾರಿಸಲು ಬೇಕಾದ ವಸ್ತುಗಳು-

 

ಪಂಚಗವ್ಯವನ್ನು ತಯಾರಿಸಲು ಬೇಕಾದ ವಸ್ತುಗಳು- ಗೋಮೂತ್ರ (Cow Urine) ಗೋಮಯ (Cow Dung) ಗೋವಿನ ಹಾಲು (Cow Milk) ಗೋವಿನ ಮೊಸರು (Cow Curd) ಗೋವಿನ ತುಪ್ಪ (Cow Ghee) "ಪಂಚಗವ್ಯ ಕ್ಷೀರ ದಧಿ ಘೃತ ಗೋಮೂತ್ರ ಗೋಮಯೇ" ನಮಗೆ ಪಂಚಗವ್ಯ ಎಷ್ಟು ಬೇಕೆಂಬ ತೀರ್ಮಾನದ ಮೇಲೆ ಪ್ರಮಾಣವನ್ನು ನಿರ್ಧರಿಸಬೇಕು.ಅದರಲ್ಲಿ.. ಒಂದು ಭಾಗ ಗೋವಿನ ತುಪ್ಪ ಒಂದು ಭಾಗ ಗೋಮೂತ್ರ ಎರಡು ಭಾಗ ಗೋವಿನ ಮೊಸರು ಮೂರು ಭಾಗ ಗೋವಿನ ಹಾಲು ಅರ್ಧಭಾಗ ಗೋಮಯ ಉದಾಹರಣೆಗೆ - ಒಂದು ಚಮಚ ತುಪ್ಪ,ಒಂದು ಚಮಚ ಗೋಮೂತ್ರ,ಎರಡು ಚಮಚ ಗೋವಿನ ಮೊಸರು,ಮೂರು ಚಮಚಗಳಷ್ಟು ಗೋವಿನ ಹಾಲು ಹಾಗೂ ಅರ್ಧ ಚಮಚ ಗೋಮಯ ಪ್ರಮಾಣದಲ್ಲಿ ತಯಾರಿಸಬೇಕು. ಒಂದು ವಿಷಯ ಗಮನದಲ್ಲಿರಲಿ.ಪಂಚಗವ್ಯವನ್ನು ತಯಾರಿಸಲು ದೇಸಿ ತಳಿಯ ಉತ್ಪನ್ನಗಳೇ ಪರಿಣಾಮಕಾರಿ.ವಿದೇಶಿ ತಳಿಗಳ ಉತ್ಪನ್ನದಿಂದ ಪಂಚಗವ್ಯವನ್ನು ತಯಾರಿಸಿದರೆ ಪರಿಣಾಮಕಾರಿಯಾಗಲಾರದು. ಪಂಚಗವ್ಯ ತಯಾರಿಕೆಗೆ ಅಗಲವಾದ ಬಾಯುಳ್ಳ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆ ಉತ್ತಮ.ಯಾವುದೇ ಕಾರಣಕ್ಕೂ ಲೋಹದಿಂದ ತಯಾರಿಸಲ್ಪಟ್ಟ ಪಾತ್ರೆಗಳನ್ನು ಉಪಯೋಗಿಸಬಾರದು. ಮೊದಲು ಗೋಮಯ ಹಾಗೂ ತುಪ್ಪವನ್ನು ಪಾತ್ರೆಯಲ್ಲಿ ಹಾಕಿ,ಮೂರುದಿನಗಳಷ್ಟು ಕಾಲ ಅವೆರಡನ್ನೂ ಬೆರೆಸಿಡಬೇಕು.ನಾಲ್ಕನೇ ದಿನ ಮೊಸರು,ಹಾಲು,ಗೋಮೂತ್ರವನ್ನು ಸೇರಿಸಬೇಕು. ೧೫ ದಿನಗಳವರೆಗೆ ದಿನಕ್ಕೆರದು ಸಲ ಅಂದರೆ ಬೆಳಿಗ್ಗೆ ಹಾಗೂ ಸಂಜೆ ಕದಡುತ್ತಾ ಇರಬೇಕು.೧೫ ದಿನಗಳ ನಂತರ ದಿನ ಯಥಾವತ್ ಸ್ಥಿತಿಯಲ್ಲಿಡಬೇಕು.೧೯ನೇ ದಿನ ಪಂಚಗವ್ಯ ಬಳಸಲು ಸಿದ್ಧವಾಗುತ್ತದೆ. ಪಂಚಗವ್ಯವಿರುವ ಪಾತ್ರೆಯನ್ನು ಯಾವಾಗಲೂ ನೆರಳಿನಲ್ಲೇ ಇಡಬೇಕು.ಕ್ರಿಮಿಕೀಟಗಳು ಪಾತ್ರೆಯೊಳಗೆ ನುಸಳದಂತೇ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಬೇಕು.ಇದು ಪಂಚಗವ್ಯವನ್ನು ಸರಿಯಾಗಿ ಉತ್ಪಾದಿಸುವ ವಿಧಾನ. ಇನ್ನು ಶುದ್ಧಿಕಾರ್ಯಗಳಿಗೆ ಅದೇ ದಿನ ಪಂಚಗವ್ಯವನ್ನು ತಯಾರಿಸುತ್ತಾರೆ.ಅದು ಕೇವಲ ಶುದ್ಧಿಗಾಗಿರುತ್ತದೆಯೇ ಹೊರತು ಔಷಧೀಯಗುಣಗಳನ್ನು ಹೊಂದಿರುವುದಿಲ್ಲವೆಂಬುದು ಗಮನಿಸಬೇಕಾದ ಅಂಶ.

Uses

೫೦ ಮಿ.ಲಿ ಪಂಚಗವ್ಯವನ್ನು ೨೦೦ ಮಿ.ಲಿ ನೀರು ಹಾಗೂ ತೆಂಗಿನಕಾಯಿಯ ನೀರು (ಎಳನೀರಲ್ಲ) ,ಹಣ್ಣಿನ ಜ್ಯೂಸಿನೊಂದಿಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ಬೆಳಿಗ್ಗೆ ಎದ್ದ ಕೂಡಲೇ ೫೦ ಮಿ.ಲಿ ಪಂಚಗವ್ಯವನ್ನು ಸೇವಿಸಿದರೆ ಮಧುಮೇಹವನ್ನು ನಿಯಂತ್ರಿಸುತ್ತದೆ.ಪ್ರತಿದಿನ ಒಂದು ಚಮಚ ಪಂಚಗವ್ಯವನ್ನು ಸೇವಿಸುವುದರಿಂದ ಬಲಹೀನತೆ,ಅಜೀರ್ಣತೆ,ಮಲಬದ್ಧತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗಿ ದೇಹ ಕ್ರಿಯಾಶೀಲವಾಗಿರುತ್ತದೆ.ಇದಲ್ಲದೇ ಏಡ್ಸ್ ಹಾಗೂ ಪಾರ್ಶ್ವವಾಯು ರೋಗದಿಂದ ಪೀಡಿತರಾದವರೂ ಸಹ ನಿಯಮಿತವಾಗಿ ಪಂಚಗವ್ಯ ಸೇವನೆಯಿಂದ ಗುಣಮುಕ್ತರಾಗಿರುವ ಬಗ್ಗೆ ದಾಖಲೆಗಳಿವೆ. ಗೋಮಯದಿಂದ ಮನೆಯನ್ನು ಶುದ್ಧೀಕರಿಸಿದರೆ ವಿಷಾಣುಗಳು ನಾಶವಾಗಿ ಮಲೇರಿಯ ರೋಗ ಬರುವುದಿಲ್ಲವೆಂದು ಸಂಶೋಧನೆಗಳು ದೃಢಪಡಿಸಿವೆ. ಪಂಚಗವ್ಯವನ್ನು ಕೃಷಿಯಲ್ಲೂ ಬಳಸಲಾಗುತ್ತಿದೆ.ಮಾವು,ಬಾಳೆ,ಪೇರಲೆ,ಸಪೋಟ ಮುಂತಾದ ಹಣ್ಣುಗಳ ಉತ್ತಮ ಇಳುವರಿಗಾಗಿ ಪಂಚಗವ್ಯವನ್ನು ಸಿಂಪಡಿಸಲಾಗುತ್ತದೆ.ಹಾಗೇ ಅರಿಶಿನಬೆಳೆ ಹಾಗೂ ಕೆಲವು ಹೂವುಗಳಿಗೆ ಕ್ರಿಮಿನಾಶಕ ಔಷಧಿಯನ್ನಾಗಿ ಪಂಚಗವ್ಯವನ್ನು ಬಳಸಲಾಗುತ್ತಿದೆ. ಇದಲ್ಲದೇ ಸಾಕು ಪ್ರಾಣಿಗಳಾದ ಕುರಿ,ಹಂದಿ,ಕೋಳಿ,ಮೀನು,ದನಗಳಿಗೆ ಬರುವ ಹಲವು ಖಾಯಿಲೆಗಳಿಗೆ ಪಂಚಗವ್ಯ ದಿವ್ಯೌಷಧವೆಂದು ಸಾಬೀತಾಗಿದೆ.ಪಂಚಗವ್ಯ ಚಿಕಿತ್ಸೆಯೆಂಬ ಒಂದು ಚಿಕಿತ್ಸಾವಿಧಾನವೇ ಆವಿಷ್ಕೃತಗೊಂಡಿದೆ.ಹಲವು ದೇಶಿ ಹಾಗೂ ವಿದೇಶಿ ಆರೋಗ್ಯಸಂಸ್ಥೆಗಳು ಗೋಉತ್ಪನ್ನಗಳಿಂದ ಹಲವಾರು ರೋಗಗಳಿಗೆ ಔಷಧಿಯನ್ನು ಕಂಡುಹಿಡಿದಿವೆ.ಜಗತ್ತಿನಾದ್ಯಂತ ಇನ್ನೂ ಸಂಶೊಧನೆ,ಅಧ್ಯಯನ ನಡೆಯುತ್ತಲೇ ಇದೆ.ಹಾಗಾಗಿ ಗೋ ತಳಿಯ ಸಂರಕ್ಷಣೆಯಾಗಲೇಬೇಕಿದೆ.

 

ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಗೋವಿನಿಂದ ಸಿಗುವ ಪಂಚಪವಿತ್ರ ವಸ್ತುಗಳೇ ಪಂಚಗವ್ಯ.

ಗೋವಿನಿಂದ ಸಿಗುವ ಪಂಚಪವಿತ್ರ ವಸ್ತುಗಳೇ ಪಂಚಗವ್ಯ.

 ಭಾರತೀಯ ಸಂಸ್ಕೃತಿಯ ಜೀವಾಳವೇ ವೇದಗಳು.ವೇದವೃಕ್ಷಗಳ ಒಂದು ಶಾಖೆ ಆಯುರ್ವೇದ. ಆಯುರ್ವೇದವೆಂದರೆ ನಮ್ಮ ಪ್ರಾಚೀನ ವೈದ್ಯಕೀಯಶಾಸ್ತ್ರ. ಆಯುರ್ವೇದದ ದೃಷ್ಟಿಯಲ್ಲಿ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವೊಂದಷ್ಟೇ ಅಲ್ಲ ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವೂ ಕೂಡ.ಮನುಷ್ಯನ ಸಾಧನೆಗೆ ಆರೋಗ್ಯವೇ ಮೂಲ. ಆಯುರ್ವೇದದಲ್ಲಿ ಗೋವಿನ ಮಹತ್ವ ಹಾಗೂ ಗೋಉತ್ಪನ್ನಗಳಿಗಿರುವ ಪ್ರಾಮುಖ್ಯತೆಯನ್ನು ವಿವರವಾಗಿ ತಿಳಿಸಲಾಗಿದೆ.ಗೋವಿನಿಂದ ಸಿಗುವ ಪಂಚಪವಿತ್ರ ವಸ್ತುಗಳೇ ಪಂಚಗವ್ಯ. ಅವು-ಹಾಲು,ಮೊಸರು,ತುಪ್ಪ,ಗೋಮಯ (Cow Dung) ಹಾಗೂ ಗೋಮೂತ್ರ (Cow Urine). ಐದೂ ಪವಿತ್ರ ವಸ್ತುಗಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ವಾತ,ಪಿತ್ಥ,ಕಫ ತ್ರಿದೋಷಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿವೆ. ಆಯುರ್ವೇದದಲ್ಲಿ "ಮೂತ್ರ" ಎಂಬ ಶಬ್ದ ಎಲ್ಲೆಲ್ಲಿ ಬಳಕೆಯಾಗಿದೆಯೋ ಅವೆಲ್ಲವೂ ಗೋಮೂತ್ರವೆಂಬ ಅರ್ಥವನ್ನೇ ಪಡೆಯುತ್ತವೆ.ಗೋಮೂತ್ರದಿಂದ ತಯಾರಿಸಲ್ಪಡುವ ನೂರಾರು ಔಷಧಿಗಳ ಉಲ್ಲೇಖ ಆಯುರ್ವೇದ ಸೂತ್ರಗಳಲ್ಲಿವೆ. ಗೋವಿಗೆ ಕಾಮಧೇನು ಎಂದೂ ಕರೆಯುತ್ತಾರೆ.ಕಾಮಧೇನು ಎಂದರೆ ಮನೋಕಾಮನೆಗಳನ್ನು ನೀಡುವವಳು. "ಮಾತರಃ ಸರ್ವಭೂತಾನಾಮ್ ಗಾವಃ ಸರ್ವಸುಖಪ್ರದಾಮ್" ಅಂದರೆ ಎಲ್ಲ ಪ್ರಾಣಿಗಳ ತಾಯಿ ಹಾಗೂ ಎಲ್ಲಾ ಸುಖಗಳ ಜನನಿ ಗೋಮಾತೆ. "ಆದೌ ಮಾತಾ ಗುರುಪತ್ನೀ ಬ್ರಾಹ್ಮಣಿ ರಾಜಪತ್ನಿಕಾ | ಧೇನುರ್ಧಾತ್ರೀ ತಥಾ ಪೃಥ್ವೀ ಸಪ್ತೈತಾಃ ಮಾತರಃ ಸ್ಮೃತಾಃ ||" ಜನ್ಮಕೊಟ್ಟ ಜನನಿಯಷ್ಟೇ ತಾಯಿಯಲ್ಲ. ಗುರುಪತ್ನೀ,ಬ್ರಾಹ್ಮಣಿ,ರಾಜಪತ್ನೀ,ಧೇನು,ಶುಷ್ರೂಶಕಿ ಹಾಗೂ ಭೂಮಿ ಇವು ಕೂಡ ನಮ್ಮ ಸಾಕ್ಷಾತ್ ಮಾತೆಯರು ಎಂದು ಶ್ಲೋಕ ತಿಳಿಸುತ್ತದೆ.ಇಲ್ಲಿ ಧೇನುವೂ ಕೂಡ ನಮ್ಮ ಮಾತೆ, ಏಕೆಂದರೆ ಗೋವಿನ ಉತ್ಪನ್ನಗಳನ್ನು ಸೇವಿಸುತ್ತಾ ಬೆಳೆದವರು ನಾವು.ಹಾಗಾಗಿ ಸದಾ ಮಾತೃಸ್ಥಾನದಲ್ಲಿ ಗೋವನ್ನಿಟ್ಟು ಗೌರವಿಸುವುದು ನಮ್ಮ ಕರ್ತವ್ಯ. ಎಲ್ಲಾ ದೇವಾನುದೇವತೆಗಳಿರುವುದು ಗೋಶರೀರದಲ್ಲೆಂದು ನಂಬಿದ್ದೇವೆ. ಅದಕ್ಕೆ ಕಾರಣವಿಷ್ಟೇ..ದೇವಾನುದೇವತೆಗಳಿಂದ ಹೊರಹೊಮ್ಮುವ ಮಂಗಳಕಿರಣಗಳು ಗೋವಿನ ಶರೀರವನ್ನು ಪ್ರವೇಶಿಸುತ್ತವೆ.ಹಾಗಾಗಿ ಹಾಲು,ಗೋಮೂತ್ರ ಮತ್ತು ಗೋಮಯಗಳಿಗೆ ದಿವ್ಯೌಷಧೀಯ ಗುಣಗಳಿವೆ ಎನ್ನುತ್ತದೆ ಆಯುರ್ವೇದ. ಇನ್ನೂ "ಸೂರ್ಯಕೇತುನಾಡಿ" ಎಂಬ ವಿಶಿಷ್ಟವಾದ ನಾಡಿ ಧೇನುವಿನ ಬೆನ್ನಿನಲ್ಲಿದೆ. ನಾಡಿಯಿರುವ ಜಗತ್ತಿನ ಏಕೈಕಪ್ರಾಣಿ ಗೋವು.ಸೂರ್ಯನ ಕಿರಣಗಳಲ್ಲಿರುವ ಅನೇಕ ಔಷಧೀಯ ಗುಣಗಳನ್ನು ನಾಡಿ ಸ್ವೀಕರಿಸುತ್ತದೆ.ಹಾಗಾಗಿ ಗೋ ಉತ್ಪನ್ನಗಳು ಅನೇಕ ಔಷಧೀಯಗುಣಗಳಿಂದ ಕೂಡಿರುತ್ತವೆ. ಪಂಚಗವ್ಯವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗಿ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.ಚಿಕ್ಕಮಕ್ಕಳಿಗೆ ನೆಗಡಿ,ಕೆಮ್ಮು ಇರುವಂತಹ ಸಂದರ್ಭದಲ್ಲಿ ಮಕ್ಕಳಿಗೆ ಪಂಚಗವ್ಯವನ್ನು ನೀಡಬಹುದು.ಇದರಿಂದ ಮಕ್ಕಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲ.ಗೋಮೂತ್ರ ಅರ್ಕದ (ಗೋಮೂತ್ರದ ಉಗಿ) ಮೂಲಕ ಶ್ವಾಸಸಂಬಂಧಿ ಕಾಯಿಲೆಗಳನ್ನು ನಿಯಂತ್ರಣಕ್ಕೆ ತರಬಹುದು.ಇದಲ್ಲದೇ ಜ್ವರ,ಮೂಗು ಕಟ್ಟುವಿಕೆ,ಅಸ್ಥಮಾ,ರಕ್ತದೊತ್ತಡ,ಎಸಿಡಿಟಿ,ದೇಹದ ತೂಕ ಭಾರ,ಮಧುಮೇಹ,ಕಾಮಾಲೆ,ಅತಿಸಾರ,ಗ್ಯಾಸ್ಟ್ರೀಕ್ ಮುಂತಾದ ವ್ಯಾಧಿಗಳನ್ನು ಗುಣಪಡಿಸಲು ಗೋಮೂತ್ರದ ಅರ್ಕ ಪರಿಣಾಮಕಾರಿ ಎಂದು ಸಂಶೋಧನೆಗಳು ತಿಳಿಸಿವೆ. ಇನ್ನು ಗೋಮಯವನ್ನು ಒಣಗಿಸಿ ಬಹುಕಾಲ ಇಡಲಾಗುತ್ತದೆ.ಗೋಮಯದಿಂದ ಸ್ಥಳವನ್ನು ಶುದ್ಧೀಕರಿಸಿದರೆ ವಿಷಾಣುಗಳು ನಾಶವಾಗುತ್ತವೆಯೆಂದು ಸಂಶೋಧನೆಗಳಿಂದ ಸಾಬೀತಾಗಿದೆ.ಗೋಮಯವನ್ನು ಬಿಸಿ ಮಾಡಿ ನೋವಿರುವ ಪ್ರದೇಶದಲ್ಲಿ ಹಚ್ಚಿ ೨೦ ಅಥವಾ ೩೦ ನಿಮಿಷಗಳಷ್ಟು ಕಾಲ ಬಿಟ್ಟರೆ ನೋವು ಶಾಶ್ವತ ಪರಿಹಾರವಾಗುತ್ತದೆಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಹಾಲು,ಮೊಸರು,ತುಪ್ಪಗಳಲ್ಲಿರುವ ಪ್ರಾಮುಖ್ಯತೆ ನಮಗೆಲ್ಲರಿಗೂ ಗೊತ್ತು.ಹಾಗಾಗಿ ಪಂಚಗವ್ಯಪ್ರಾಶನ ನಮ್ಮ ಸಂಸ್ಕೃತಿಯಲ್ಲಿ ವೈಜ್ಞಾನಿಕ ಮಹತ್ವವನ್ನು ಹೊಂದೆದೆಯೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೇ ಅಲ್ಲವೇ..? ಅಮೇರಿಕದಂತಹ ದೇಶವೂ ಗೋಮೂತ್ರದ ಅರ್ಕಕ್ಕೆ ಎರಡು ಪೇಟೇಂಟ್ ಪಡೆದುಕೊಂಡಿದ್ದು. • US Patent No. 1 = 6410059 25-06-2002 • US Patent No. 2 = 6896907 24-05-2005 ಪಂಚಗವ್ಯವನ್ನು ಸೇವಿಸುವಾಗ ಪ್ರಾರ್ಥನೆ ಮಾಡಿದರೊಳಿತು.. "ಯತ್ವಗಸ್ತಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ | ಪ್ರಾಶನಾತ್ ಪಂಚಗವ್ಯಸ್ಯ ದಾಹಸ್ಯಾಗ್ನಿರಿವಾಂಧನಮ್ ||" ದೇಹದ ಚರ್ಮದಲ್ಲಿ,ಮೂಳೆಯಲ್ಲಿ,ಅಂಗಾಂಗಗಳಲ್ಲಿ ಯಾವುದಾದರೂ ಕೆಟ್ಟ ಅಂಶಗಳು ಸೇರಿದ್ದರೆ,ಅಗ್ನಿಯಿಂದ ಹೇಗೆ ಇಂಧನ ಸುಡುತ್ತದೆಯೋ ಹಾಗೇ ಪಂಚಗವ್ಯ ಪ್ರಾಶನದಿಂದ ನನ್ನ ಶರೀರದಲ್ಲಿರುವ ಎಲ್ಲಾ ಪಾಪಗಳೂ ದೂರವಾಗಲಿ. ಪ್ರಾಚೀನಕಾಲದಲ್ಲಿ ಪಂಚಗವ್ಯವನ್ನು ಪ್ರತಿದಿನ ಸೇವಿಸುವ ಪದ್ಧತಿಯಿತ್ತು. ಈಗ ಶುದ್ಧಕರ್ಮದಲ್ಲಿ,ವಿಶೇಷವಾದ ಪೂಜೆಗಳಲ್ಲಷ್ಟೇ ಸೇವಿಸುವ ಪದ್ಧತಿ ಬೆಳೆದುನಿಂತಿದೆ.ಇನ್ನೂ ಕೆಲವರು ಪಂಚಗವ್ಯದ ಮಹತ್ವವನ್ನು ಅರಿಯದೇ ಅದನ್ನು ತಿರಸ್ಕರಿಸುವವರೂ ಇದ್ದಾರೆ.ಹಿತ್ತಲಗಿಡ ಎಂದಿಗೂನಮಗೆ ಮದ್ದೆನಿಸುವುದಿಲ್ಲ.ಇಂಗ್ಲೀಷ್ ಔಷಧಿ ಸೇವಿಸಿದರಷ್ಟೇ ನೆಮ್ಮದಿ..!! ಇಂದಿಗೂ ಗೋ ಉತ್ಪನ್ನಗಳ ವಿಷಯದಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದೆ.ಗೋವು ದಿವ್ಯಪ್ರಾಣಿಯೆಂದು ಸಾಬೀತಾಗಿದೆ.ಹಾಗಾಗಿ ಗೋತಳಿಯ ಪಾಲನೆ ಹಾಗೂ ಸಂರಕ್ಷಣೆ ನಮ್ಮ ಕರ್ತವ್ಯವಾಗಬೇಕಿದೆ. ಗೋಮಾತೆ ಎಲ್ಲರಿಗೂ ಆಯುರಾರೋಗ್ಯ-ಐಶ್ವರ್ಯಗಳನ್ನು ಕರುಣಿಸಲಿ.. ಲೋಕಾಃ ಸಮಸ್ತಾಃ ಸುಖಿನೋ ಭವಂತು.


ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ

ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ.ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು?

ಶಾಂತಿಗಳು ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ.ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು

ಮಗುವಿನ ಜನನ ಕಾಲದಲ್ಲಿ ನಾನಾವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಕೊಳ್ಳಬೇಕು

. ಕೃಷ್ಣಚತುರ್ದಶಿ ಜನನ ಶಾಂತಿ ಮಗು ಕೃಷ್ಣ ಪಕ್ಷದ ಚತುರ್ದಶಿಯ ದಿನ ಜನನವಾದಲ್ಲಿ ಅನೇಕವಾದ ಅನಿಷ್ಠ ಫಲಗಳು ಬರುತ್ತದೆ.ಚತುರ್ದಶಿ ತಿಥಿಯ ಕಾಲವನ್ನು ಆರು ಭಾಗ ಮಾಡಿ ಒಂದನೇಯ ಭಾಗವನ್ನು ಶುಭ ಎಂತಲೂ, ಎರಡನೇಯ ಭಾಗವನ್ನು ತಂದೆಗೆ ಅನಿಷ್ಠ ಎಂತಲೂ,ಮೂರನೇಯ ಭಾಗವನ್ನು ತಾಯಿಗೆ ಅನಿಷ್ಠ ಎಂತಲೂ, ನಾಲ್ಕನೇಯ ಭಾಗವನ್ನು ಮಾವನಿಗೆ ಅನಿಷ್ಠ ಶಎಂದೂ,ಐದನೇಯ ಭಾಗವನ್ನು ವಂಶನಾಶ ಎಂತಲೂ,ಆರನೇಯ ಭಾಗವನ್ನು ಧನಹಾನಿ ಎಂದೂ ಶಾಸ್ತ್ರದಲ್ಲಿ ಹೇಳಿದೆ. . ಸಿನೀವಾಲೀ-ಕುಹೂ ಜನನ ಶಾಂತಿ ಮಗುವು ಅಮವಾಸ್ಯೆಯ ದಿನದಂದು ಜನಿಸಿದಲ್ಲಿ, ಅಮವಾಸ್ಯೆಯ ಪರಮಘಟಿಯನ್ನು ಭಾಗವನ್ನು ಮಾಡಿ ಪ್ರಥಮ ಭಾಗ ಜನನಕ್ಕೆ ಸಿನೀವಾಲೀ, ಅಷ್ಟಮ ಭಾಗಕ್ಕೆ ಕುಹೂ ಜನನ ಎಂದೂ ಕರೆಯುತ್ತಾರೆ. ಜನನದಲ್ಲಿ ಬರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು. . ದರ್ಶ ಜನನ ಶಾಂತಿ: ಅಮವಾಸ್ಯೆ ತಿಥಿಯ ಪರಮಘಟಿಯನ್ನು ಭಾಗವನ್ನಾಗಿ ಮಾಡಿದಾಗ ೨ನೇಯ ಭಾಗದಿಂದ ೬ನೇ ಭಾಗದವರೆಗೆ ಹುಟ್ಟಿದ ಮಗುವಿಗೆ ಬರುವ ದೋಷ ನಿವಾರಣೆಗೆ ದರ್ಶ ಜನನ ಶಾಂತಿ ಅಥವಾ ಅಮವಾಸ್ಯೆ ಜನನ ಶಾಂತಿ ಮಾಡಿಸಿಕೊಳ್ಳಬೇಕು. . ಸೂರ್ಯ ಸಂಕ್ರಾಂತಿ ಜನನ ಶಾಂತಿ ಮತ್ತು ವ್ಯತಿಪಾತ, ವೈದ್ರತಿ, ಅತೀಗಂಡ, ಗಂಡಯೋಗ ಜನನ ಶಾಂತಿ ಮಗುವು ಮೇಲೆ ಕಾಣಿಸಿದ ಕಾಲದಲ್ಲಿ ಜನಿಸಿದರೆ ಅದರ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು. . ಆಶ್ಲೇಷಾ ಜನನ ಶಾಂತಿ ಮಗುವು ಆಶ್ಲೇಷಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ಮೊದಲನೇ ಪಾದ ಜನನಕ್ಕೆ ಶುಭ ಫಲ, ದ್ವಿತೀಯ ಪಾದ ಜನನಕ್ಕೆ ಧನನಾಶ, ತೃತೀಯ ಪಾದ ಜನನಕ್ಕೆ ತಾಯಿಗೆ ಅನಿಷ್ಠ. . ಜ್ಯೇಷ್ಠ ನಕ್ಷತ್ರ ಜನನ ಶಾಂತಿ ಮಗುವು ಜ್ಯೇಷ್ಠ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ವಿಶೇಷತಃ ೪ನೇ ಪಾದದಲ್ಲಿ ಜನಿಸಿದರೆ ತಂದೆ-ತಾಯಿಗೆ ಅನಿಷ್ಠ. . ಮೂಲಾ ನಕ್ಷತ್ರ ಜನನ ಶಾಂತಿ ಮಗುವು ಮೂಲಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ೧ನೇ ಪಾದಕ್ಕೆ ಅತೀ ಅನಿಷ್ಠ. ೨ನೇ ಪಾದಕ್ಕೆ ತಾಯಿಗೆ ಅನಿಷ್ಠ. ೩ನೇ ಪಾದಕ್ಕೆ ಧನನಾಶ. ೪ನೇ ಪಾದಕ್ಕೆ ಕುಲನಾಶ. ಹೆಣ್ಣು ಮಗು ನಕ್ಷತ್ರದಲ್ಲಿ ಜನಿಸಿದರೆ ಗಂಡನ ತಂದೆಗೆ ಅತೀ ಅನಿಷ್ಠ. . ಗ್ರಹಣ ಜನನ ಶಾಂತಿ ಮಗುವು ಸೂರ್ಯ ಅಥವಾ ಚದ್ರ ಗ್ರಹಣ ಕಾಲದಲ್ಲಿ ಜನಿಸಿದರೆ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು. . ಏಕ ನಕ್ಷತ್ರ ಜನನ ಶಾಂತಿ ತಾಯಿ, ತಂದೆ, ಅಣ್ಣ-ತಮ್ಮ ಎಲ್ಲರ ನಕ್ಷತ್ರ ಒಂದೇ ಆದಲ್ಲಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೧೦. ವಿಷ ಘಟಿ ಜನನ ಶಾಂತಿ ಮಗುವು ವಿಷ ನಾಡಿಯಲ್ಲಿ ಜನಿಸಿದರೆ ಸರ್ವರಿಷ್ಠ. ಆದ್ದರಿಂದ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೧೧. ತ್ರಿಕ ಪ್ರಸವ ಶಾಂತಿ ತಾಯಿಗೆ ಏಕ ಕಾಲದಲ್ಲಿ ಮೂರು ಮಗುವಿನ ಜನನವಾದರೆ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೧೨. ಭದ್ರಾ ಜನನ ಶಾಂತಿ: ಭದ್ರ ಯೋಗದಲ್ಲಿ ಜನಿಸಿದ ಮಗುವಿಗೆ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೧೩. ಅಧೋಮುಖ ಜನನ ಶಾಂತಿ ಮಗು ಜನಿಸಿವಾಗ ಕೆಳಮುಖವಾಗಿ ಜನಿಸಿದರೆ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೧೪. ಸದಂತ ಜನನ ಶಾಂತಿ ಮಗು ಹುಟ್ಟಿದಾಗಲೇ ಹಲ್ಲು ಇದ್ದರೆ ಬರುವ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೧೫. ಯಮಳ ಜನನ ಶಾಂತಿ ಏಕ ಕಾಲದಲ್ಲಿ ಎರಡು ಮಗುವಿನ ಜನನವಾದಲ್ಲಿ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು.. ೧೬. ಪ್ರಸವ ವೈಕ್ರತಿ ಜನನ ಶಾಂತಿ ಮಗು ಜನಿಸುವಾಗ ಅಂಗ ವಿಕಲವಿದ್ದಲ್ಲಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೧೭. ದಿನ ಕ್ಷಯ, ವ್ಯತಿಪಾತ ಯೋಗಾದಿ ಜನನ ಶಾಂತಿ ೧೮. ಬಾಲಾರಿಷ್ಠ ಜನನ ಶಾಂತಿ ಮಗು ಜನಿಸಿದಾಗ ಜನ್ಮದಲ್ಲಿ ರವಿ, ಕುಜ,ಶನಿ,ರಾಹು,ಕೇತುಗಳು ವಿಷಮ ಸ್ಥಿತವಾದಲ್ಲಿ ವಿಪರೀತ ಕಷ್ಟಗಳನ್ನು ಕೊಡುತ್ತದೆ. ಕಷ್ಟಗಳ ನಿವಾರಣೆಗಾಗಿ ಶಾಂತಿಯನ್ನು ಮಾಡಿಕೊಳ್ಳಬೇಕು. ಶಾಂತಿಯನ್ನು ಮಗುವಿನ ಜನ್ಮದ ನಂತರದ ೧೨ನೆ ದಿನದ ಮೇಲೆ ಮಗು ಚಿಕ್ಕದಿದ್ದಾಗಲೆ ಮಾಡಿಕೊಳ್ಳುವುದು ಒಳ್ಳೆಯದು. ೧೯. ಅರಿಷ್ಟತ್ರಯ ಶಾಂತಿ ಮಗು ಜನಿಸಿದಾಗ ವಿಷಮ ಸ್ಥಾನ ಸ್ಥಿತರಾದ ಗ್ರಹದಿಂದ ಬರುವ ದೋಷ ನಿವಾರಣೆಗಾಗಿ ಶಾಂತಿ ಅಗತ್ಯ. ೨೦. ಪಂಚಮಾರಿಷ್ಟ ಶಾಂತಿ ಮಗು ಜನಿಸಿದಾಗ ಜನ್ಮ ಲಗ್ನ-ರಾಶಿಯಿಂದ ಪಂಚಮದಲ್ಲಿ ರವಿ ಇದ್ದರೆ ತಂದೆಗೆ ಅನಿಷ್ಠ, ಶನಿ ಇದ್ದರೆ ತಾಯಿಗೆ ಅನಿಷ್ಠ, ಕುಜ ಇದ್ದರೆ ಸಹೋದರೆನಿಗೆ, ಚಂದ್ರ ಇದ್ದರೆ ಮಾವನಿಗೆ, ಗುರುವಿದ್ದರೆ ತಾಯಿಯ ತಂದೆಗೆ, ಶುಕ್ರನಿದ್ದರೆ ಅಜ್ಜನಿಗೆ, ಶನಿ-ರಾಹುಗಳಿದ್ದರೆ ಮಗುವಿಗೆ ಹಾಗೂ ಕೇತುವಿದ್ದಲ್ಲಿ ಸಹೋದರನಿಗೆ ಅನಿಷ್ಠವಾದುದರಿಂದ ಶಾಂತಿಯ ಅವಶ್ಯಕತೆ ಇರುತ್ತದೆ. ೨೧. ಗೋಮುಖ ಪ್ರಸವ ಶಾಂತಿ ಮಗು ಜನಿಸಿದಾಗ ಬಂದಿರುವ ದಿನಕ್ಷಯ, ವ್ಯತೀಪಾತ-ವಾಘಾತ, ವಿಷ್ಠಿ-ಶೂಲ, ಗಂಡ-ಮೃತ್ಯು ಯೋಗ, ದಗ್ದಯೋಹ, ಆಶ್ಲೇಷ, ಜ್ಯೇಷ್ಠ, ಮೂಲಾ ನಕ್ಷತ್ರದಲ್ಲಿ ಜನಿಸಿದಾಗ ಎಲ್ಲಾ ದೋಷ ನಿವಾರಣೆಗೆ ಶಾಂತಿಯನ್ನು ಮತ್ತು ಗೋ ಗರ್ಭ ಜನನವನ್ನು ಮಾಡಿ ಆಮೇಲೆ ಉಕ್ತವಾದ ಶಾಂತಿಯನ್ನು ಮಾಡಬೇಕು. ೨೨. ಕುಜ-ರಾಹು ಸಂಧಿ ಶಾಂತಿ ನವಗ್ರಹದಲ್ಲಿ ಒಂದೊಂದು ಗ್ರಹಕ್ಕೆ ಇಷ್ಟು ವರ್ಷಗಳು ಮನುಷ್ಯನ ಜೀವನದಲ್ಲಿ ಅಧಿಪತ್ಯ (ಅಧಿಕಾರ) ಎಂದಿರುತ್ತದೆ. ಆದರೆ ಪರಸ್ಪರ ಶತ್ರು ಗ್ರಹಗಳ ಅಧಿಕಾರ ಅವಧಿ ಮುಗಿದು ಇನ್ನೊಂದು ಶತ್ರು ಗ್ರಹದ ಅಧಿಕಾರ ಆರಂಭ ಕಾಲದಲ್ಲಿ ತಿಂಗಳು ಮುಂಚಿತವಾಗಿ ಸಂಧಿ ಶಾಂತಿ ಮಾಡಿಸುತ್ತಾರೆ. ಇಲ್ಲಿ ಕುಜ ದಶಾ ವರ್ಷಗಳು ಮುಗಿದು ರಹು ದಶಾ೧೮ ವರ್ಷಗಲು ಆರಂಭವಾಗುವ ಸಮಯಕ್ಕೆ ಶಾಂತಿಯನ್ನು ಮಾಡಿಸಬೇಕು. ಸಂಧಿ ಕಾಲವಿ ವಿಶೇಷವಾಗಿ ಗಂಡಸರಿಗಿಗೆ ಹೆಚ್ಚು ಹಾನಿಕಾರಕವಾಗಿರುತ್ತದೆ. ಆಯುಷ್ಯದಲ್ಲಿ ಒಂದು ಕಂಟಕ ಎನ್ನಬಹುದು. ೨೩. ರಾಹು-ಬೃಹಸ್ಪತಿ ಸಂಧಿ ಶಾಂತಿ ರಾಹುವಿನ ಅಧಿಕಾರ ಅವಧಿ ೧೮ ವರ್ಷಗಳು ಕಳೆದು ಗುರುವಿನ ೧೬ ವರ್ಷದ ಅಧಿಕಾರದ ಅವಧಿ ಆರಂಭವಾಗುವ ತಿಂಗಳು ಮೊದಲು ಶಾಂತಿಯನ್ನು ಅಗತ್ಯವಾಗಿ ಮಾಡಿಸಿಕೊಳ್ಳಬೇಕು. ಸಂಧಿಕಾಲವು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಹಾನಿಕಾರಕವಾಗಿರುತ್ತದೆ. ೨೪. ಶುಕ್ರಾದಿತ್ಯ ಸಂಧಿ ಶಾಂತಿ ಶುಕ್ರಬ ಅಧಿಕಾರ ಅವಧಿ ೨೦ ವರ್ಷಗಳು ಕಳೆದು ಸೂರ್ಯನ ವರ್ಷದ ಅಧಿಕಾರದ ಅವಧಿ ಆರಂಭವಾಗುವ ತಿಂಗಳು ಮೊದಲು ಶಾಂತಿಯನ್ನು ಅಗತ್ಯವಾಗಿ ಮಾಡಿಸಿಕೊಳ್ಳಬೇಕು. ಸಂಧಿಕಾಲವು ಪುರುಷ ಮತ್ತು ಮಹಿಳೆಯರಿಬ್ಬರಿಗೂ ಹಾನಿಕಾರಕವಾಗಿರುತ್ತದೆ. ೨೫. ಷಷ್ಟ್ಯಬ್ಧ ಅಥವಾ ಉಗ್ರರಥ ಶಾಂತಿ ಮನುಷ್ಯನು ತನ್ನ ಜೀವನದ ಕಷ್ಟ-ಸುಖಗಳನ್ನು ಅನುಭವಿಸುತ್ತ ಸಕಾಲದಲ್ಲಿ ವಿವಾಹವಾಗಿ ಪತ್ನಿಯನ್ನೊಡಗೂಡಿ ಮಕ್ಕಳ ಆಗು ಹೋಗುಗಳನ್ನು ಪೂರೈಸುತ್ತ ತನ್ನ ಜೀವನದ ೬ನೇ ಸಂವತ್ಸರವನ್ನು ಪ್ರವೇಶಿಸಿದಾಗ ಜನ್ಮ, ನಕ್ಷತ್ರದಲ್ಲಿ ಶಾಂತಿಯನ್ನು ಮಾಡಬೇಕು. ಇದನ್ನು ಎಕೆ ಮಾಡಬೇಕು? ಇದನ್ನು ಮುಂದಿನ ಜೀವನದಲ್ಲಿ ಬರುವಂತಹ ಅಪಮೃತ್ಯು, ದುಃಸ್ವಪ್ನ ದರ್ಶನ, ಗೃಹಪೀಡೆ, ವಿವಿಧ ರೋಗಬಾದೆ, ಛಾಯಾವಿಕೃತಿ. ಭೂತ-ಪ್ರೇತಾದಿ ಪೀಡಾರೂಪಕವಾದಂತಹ ನಾನಾವಿಧ ಅರಿಷ್ಟ ನಿವಾರಣೆಗಾಗಿ ಮಾಡುವಂತಹ ಶಾಂತಿಯನ್ನು ಉಗ್ರರಥ ಶಾಂತಿ ಎನ್ನುತ್ತೇವೆ. ವಿಧಿಯಲ್ಲಿ ಗಣಪತಿ, ನವಗ್ರಹದೇವತೆಗಳನ್ನು, ಪೀಡಾಪರಿಹಾರಕನಾದ ಮೃತುಂಜಯನನ್ನು, ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮೃತ್ಯುವನ್ನೇ ಜಯಿಸಿದ ಮಾರ್ಕೆಂಡೆಯನನ್ನು, ಆಯುರ್ದೇವತೆ ನಕ್ಷತ್ರದೇವತೆಗಳನ್ನು ಆರಾಧಿಸಬೇಕು. ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನವನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ವಿಧಿಯಲ್ಲಿ ಉಗ್ರನೆಂಬ ಹೆಸರಿನ ಮೃತ್ಯುಂಜಯನು ಪ್ರಧಾನದೇವತೆಯಾದ್ದರಿಂದ ಉಗ್ರರಥ ಶಾಂತಿ ಎಂಬ ಹೆಸರು ಬಂತು. ವಿಧಿಯ ಅಂತ್ಯದಲ್ಲಿ ಕಲಶ ತೀರ್ಥಸ್ನಾನ ಮತ್ತು ಮಂಗಳದೃವ್ಯ ದರ್ಶನ ಅಲ್ಲದೇ ಪುನಃ ಮಂಗಳ ಸೂತ್ರ ಕಟ್ಟುವುದು ಮುಖ್ಯವಾಗಿರುತ್ತದೆ. ೨೬. ಭೀಮರಥ ಶಾಂತಿ ಶಾಂತಿಯನ್ನು ಜನ್ಮಕಾಲ ಮೊದಲುಗೊಂಡು ೭೦ನೇ ವರ್ಷವನ್ನು ಪ್ರವೇಶಿಸಿದಾಗ ಜನ್ಮಮಾಸ, ಜನ್ಮ ನಕ್ಷತ್ರದಲ್ಲಿ ಸಕಲಪೀಡಾಪರಿಹಾರಕ್ಕಾಗಿ ಮಾಡಬೇಕು. ವಿಧಿಯನ್ನು ವರ್ತಮಾನದಲ್ಲಿ ದೇಹದಲ್ಲಿ ಅಡಕವಾಗಿರುವ ವಾತ, ಪಿತ್ತ, ಕಫಾದಿ ನಾನಾವಿಧಧ ರೋಗಪೀಡಾ ಪರಿಹಾರಕ್ಕಾಗಿ ಅಲ್ಲದೆ ಮುಂದೆ ಬರುವಂತಹ ನಾನಾವಿಧ ಘೋರ ವಿಪತ್ಯಾದಿ ಸರ್ವಾರಿಷ್ಟ ನಿವಾರಣೆಗಾಗಿ ಆಯುಷ್ಯ, ಆರೋಗ್ಯ, ಆನಂದ ಪ್ರಾಪ್ತಿಗಾಗಿ ಶಾಂತಿಯನ್ನು ವಿಧಿಯುಕ್ತವಾಗಿ ಆಚರಿಸಿಕೊಳ್ಳಬೇಕು. ಶಾಂತಿ ಕ್ರಮದಲ್ಲಿ ಭೀಮ ಎಂಬ ಮಹಾ ಮೃತ್ಯುಂಜಯನು ಪ್ರಧಾನ ದೇವತೆಯಾದ್ದರಿಂದ ಇದನ್ನು ಭೀಮರಥ ಶಾಂತಿ ಎನ್ನಲಾಗಿದೆ. ವಿಧಿಯಲ್ಲಿ ಭೀಮ ಮೃತ್ಯುಂಜಯ, ಬ್ರಹ್ಮ, ವಿಷ್ಣು, ಲೋಕಪಾಲ ದೇವತೆಗಳನ್ನು, ಸಪ್ತಮಿ ಚಿರಂಜೀವಿಗಳನ್ನು, ಗ್ರಹದೇವತೆಯನ್ನು, ಆಯುಷ್ಯ ನಕ್ಷತ್ರ ಆಯುರ್ದೇವತೆಯನ್ನು ವಿಶೇಷವಾಗಿ ಆರಾಧಿಸಿ ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನ ದಾನಾದಿಗಳನ್ನು ಮಾಡಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ೨೭. ಸಹಸ್ರಚಂದ್ರ ದರ್ಶನ ಅಥವಾ ಶತಾಭಿಷೇಕ ಜನ್ಮ ಕಾಲ ಮೊದಲುಗೊಂಡು ಅಧಿಕಮಾಸಾದಿಗಳನ್ನು ಗಣನೆಗೆ ತೆಗೆದುಕೊಂಡು ೮೦ ವರ್ಷ ತಿಂಗಳು ಆದಾಗ ಮಾಡುವ ವಿಧಿಗೆ ಸಹಸ್ರಚಂದ್ರ ದರ್ಶನ ಎನ್ನುವರು. ವಿಧಿಯಲ್ಲಿ ಆದಿತ್ಯಾದಿ ನವಗ್ರಹ ದೇವತೆಗಳನ್ನು, ಆಯುರ್ದ್ಧಾ ಅಗ್ನಿಯನ್ನು, ಬ್ರಹ್ಮ, ಪ್ರಜಾಪತಿ, ಪರಮೇಷ್ಟಿ, ಚತುರ್ಮುಖ, ಹಿರಣ್ಯ ಗರ್ಭ, ಅಗ್ನಿ, ಸೋಮ ಯಜ್ಞ ಆದಿ ದೇವತೆಗಳನ್ನು ಆರಾಧಿಸಿ ಜಪ, ಹೋಮ,ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನ ದಾನಾದಿಗಳನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಶಾಂತಿಯನ್ನು ವರ್ತಮಾನದಲ್ಲಿ ದೇಹ ಸ್ಥಿತ ಸಕಲ ಬಾಧೆ ನಿವಾರಣೆಗೊಳಿಸುವ ಪೂರ್ವಕ ಭವಿಷ್ಯತ್ತಿನಲ್ಲಿ ಬರುವ ರೋಗ ಪೀಡಾ, ಗ್ರಹ ಪೀಡೆ. ದೃಷ್ಟಿಮಾಂದ್ಯ, ಛಾಯಾವಿಕೃತಿ, ಭೂತ ಪ್ರೇತ ಪಿಶಾಚಾದಿ ಸಕಲ ಪೀಡೆ ನಿವಾರಣೆಗೋಸ್ಕರ ಅಕಾಲಬಾಧಾ ಪರಿಹಾರವಾಗಿ ಆಯುಷ್ಯ, ಆನಂದ, ಆರೋಗ್ಯ, ಸನ್ಮಂಗಲ, ಜ್ಞಾನ ವೈರಾಗ್ಯ ಪ್ರಾಪ್ತಿಗಾಗಿ ವಿಧಿಯನ್ನು ಆಚರಿಸುತ್ತಾರೆ. ೨೮. ಗ್ರಹ ಶಾಂತಿ ಮನೆಯಲ್ಲಿ ಸಾಲದ ಬಾಧೆ, ಅಶಾಂತಿ, ಕೆಟ್ಟ ಕನಸು ಮತ್ತು ರೋಗ-ರುಜಿನಗಳಿಂದ ತೊಂದರೆ ಅನುಭವಿಸುತ್ತಿದ್ದಲ್ಲಿ ಗ್ರಹ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೨೯. ವಾಸ್ತು ಶಾಂತಿ ಹೊಸದಾಗಿ ತೆಗೆದುಕೊಂಡ ಮನೆ ಅಥವಾ ಪ್ಲಾಟ್ ನಿರ್ಮಿಸುವಾಗ ಸ್ಥಳದಲ್ಲಿರುವಂತಹ ನೂನ್ಯತೆಯನ್ನು ಹೊಗಲಾಡಿಸಿ ಸುಖ ಶಾಂತಿ, ಸಮೃದ್ಧಿಯಿಂದ ನೆಲೆಸುವುದಕ್ಕಾಗಿ ವಾಸ್ತು ಶಾಂತಿಯನ್ನು ಮಾಡುವುದು ಅಗತ್ಯ. ೩೦. ರಾಕ್ಷೋಘ್ನ ಶಾಂತಿ ಹೊಸಮನೆಯನ್ನು ನಿರ್ಮಿಸುವಾಗ ಸ್ಥಳದಲ್ಲಿ ಉಪಯೋಗಿಸಿರುವ ಮರದ ಸಲಕರಣೆಗಳಲ್ಲಿ ಇರುವ ಭೂತ, ಪ್ರೇತ ಪಿಶಾಚಿ ಬಾಧೆ ನಿವಾರಣೆಗಾಗಿ ವಾಸ್ತು ಹೋಮದ ಪೂರ್ವದಲ್ಲಿ ಹೋಮವನ್ನು ರಾತ್ರಿಯಲ್ಲಿ ಮಾಡಬೇಕು. ೩೧. ಗೇಹಾಭಿವೃದ್ಧಿ ಶಾಂತಿ ದೇವಸ್ಥಾನದಲ್ಲಿ ಸ್ಥಾಪಿಸಿರುವ ವಿಗ್ರಹಕ್ಕೆ ದೇವರ ಸಾನಿಧ್ಯ ಪ್ರಾಪ್ತಿಗಾಗಿ, ದೇವಾಲಯದ ಅಭಿವೃದ್ಧಿಗಾಗಿ ಶಾಂತಿಯನ್ನು ಮಾಡಬೇಕು. ೩೨. ಸರ್ವಾದ್ಭುತ ಶಾಂತಿ ಮನೆಯಲ್ಲಿ ಅಮಂಗಲವಾದ ಘಟನೆಗಳು ನಡೆದಾಗ ಉದಾಹರಣೆಗೆ ಮನೆಗೆ ಬೆಂಕಿ ತಗಲುವುದು, ಮನೆಗೆ ಕಾಗೆ ಪ್ರವೇಶಿಸುವುದು, ಮನೆಯಲ್ಲಿ ಜೇನುಗೂಡು ಕಟ್ಟುವುದು ಮನೆಯ ಒಂದು ಭಾಗ ಕುಸಿಯುವುದು ಇಂತಹ ಅನಿಷ್ಠಗಳಿದ್ದಲ್ಲಿ ಶಾಂತಿಯನ್ನು ಮಾಡಿಕೊಳ್ಳಬೇಕು. ೩೩. ಗ್ರಾಮೊತ್ಪಾತ ಶಾಂತಿ ಗ್ರಾಮದಲ್ಲಿ ಉತ್ಪನ್ನವಾಗಿರುವ ನಾನಾವಿಧ ಭಾದೆ ನಿವಾರಣೆಗೆ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೩೪. ರಕ್ತ ವಲ್ಮೀಕ ಶಾಂತಿ ದೇವಾಲಯದಲ್ಲಿ, ಮನೆಯಲ್ಲಿ ಅಥವಾ ಸಭಾಸ್ಥಾನದಲ್ಲಿ ಉತ್ಪತ್ತಿಯಾಗಿರುವ ಹುತ್ತವು ಅಶುಭ ಸೂಚಕವಾಗಿರುವುದರಿಂದ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೩೫. ವಾನರ ಪ್ರವೇಶ ಶಾಂತಿ ಮನೆಯೊಳಗೆ ವಾನರ ಪ್ರವೇಶವಾದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಶಾಂತಿಯನ್ನು ಮಾಡಬೇಕು. ೩೬. ಮರ್ಕಟ ಪ್ರವೇಶ ಶಾಂತಿ ಮನೆಯೊಳಗೆ ಕೃಷ್ಣಮುಖ ವಾನರ ಪ್ರವೇಶವಾದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಶಾಂತಿಯನ್ನು ಮಾಡಬೇಕು. ೩೭. ಮಹಿಷಿ ಪ್ರವೇಶ ಶಾಂತಿ ಮನೆಯೊಳಗೆ ಎಮ್ಮೆ ಅಥವಾ ಕೋಣ ಪ್ರವೇಶಿಸಿದರೆ ಸೂಚಿತ ಅಪಮೃತ್ಯು ಹಾಗೂ ಸರ್ವ ಅಮಂಗಲ ನಿವಾರಣೆಗಾಗಿ ಶಾಂತಿಯನ್ನು ಮಾಡಬೇಕು. ೩೮. ದೀಪಪತನ ಶಾಂತಿ ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಉರಿಯುತ್ತಿರುವ ದೀಪ ಆರಿಹೋದಲ್ಲಿ ಅಮಂಗಲ ನಿವಾರಣೆಗಾಗಿ ಶಾಂತಿಯನ್ನು ಮಾಡಬೇಕು. ೩೯. ಭೀತಿಹರ ದಕ್ಷಾಕರ ದುರ್ಗಾ ಶಾಂತಿ ಗ್ರಹ ಪೀಡೆಗಳಿಂದ ಪುನಃ ಪುನಃ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೪೦. ಅನಾವೃಷ್ಟಾದಿ ಶಾಂತಿ ಇದನ್ನು ಸಾಮೂಹಿಕವಾಗಿ ಉತ್ಪತ್ತಿಯಾಗಿರುವ ಮಹಾಮಾರಿ, ಪಶುರೋಗಾದಿ ನಿವಾರಣೆಗೆ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೪೧. ಕೃತ್ಯಾದ್ರೋಹ ಶಾಂತಿ ವಿರೋಧಿಗಳ ಯಾವುದೆ ಕುಟುಂಬ, ಉದ್ಯಮ, ಕೊಷ್ಠಗಳ ಮೇಲೆ ಮಾಡಿದ ಕೃತ್ರಿಮ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಬೇಕು. ೪೨. ದುಃಸ್ವಪ್ನ ಶಾಂತಿ ಕೆಲವೊಂದು ಸ್ವಪ್ನಗಳು ಅಮಂಗಲತೆಯ ಮುನ್ಸೂಚನೆ ಆಗಿರುವುದರಿಂದ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೪೩. ಪರ್ಜನ್ಯ ಶಾಂತಿ ದೇಶದ ಅಥವಾ ಯಾವುದೇ ಪ್ರಾಂತದಲ್ಲಿ ಸಕಾಲದಲ್ಲಿ ಮಳೆ ಆಗದಿದ್ದಲ್ಲಿ ಜೀವಿಗಳಿಗೆ ಅತಿ ಆತಂಕವಾಗುವುದು. ಪರಿಸ್ಥಿತಿ ನಿವಾರಣೆಗೆ ಪ್ರಕೃತಿ ದೇವಿಯನ್ನು ಶಾಂತಿಗೊಳಿಸಿ ಮಳೆ ಪಡೆಯುವುದಕ್ಕೆ ಶಾಂತಿ ಹೆಸರಿದೆ. ೪೪. ವೃಷ್ಟಿ ವೈಕೃತ ವೃಕ್ಷೋತ್ಪಾತ ವನಸ್ಪತಿ ಶಾಂತಿ ಭೂಮಿಯ ಮೇಲೆ ಮಳೆ ಇಲ್ಲದಿದರೂ ಕಷ್ಟ, ಅತಿಯಾದರೂ ಕಷ್ಟ. ವಿಶೇಷವಾಗಿ ಶಾಂತಿಯನ್ನು ಮಳೆ, ಗಾಳಿ, ಸಿಡಿಲಿನಿಂದ ಅರಣ್ಯ ಮತ್ತು ಫಲಗಳು ನಾಶವಾಗುತ್ತಿದ್ದಲ್ಲಿ ಪ್ರಕೃತಿದೇವಿಯನ್ನು ಶಾಂತಗೊಳಿಸಲು ಶಾಂತಿಯನ್ನು ಮಾಡಬೇಕು. ೪೫. ನಾಳವೇಷ್ಟನ ಶಾಂತಿ ಮಗುವಿನ ಜನನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಆಹಾರಾದಿಗಳನ್ನು ಕೊಡುವ ನಾಳವು ಕಂಠ, ಕೈ, ಕಾಲುಗಳಿಗೆ ಸುತ್ತಿಕೊಂಡು ಜನಿಸಿದರೆ ತಂದೆ, ತಾಯಿಗೆ ಅನಿಷ್ಟ, ಸಂಪತ್ತು ನಾಶ, ಸರ್ವ ನಾಶ ಎಂದಿರುತ್ತದೆ. ಆದ್ದರಿಂದ ದೋಷ ನಿವಾರಣೆಗೆ ಶಾಂತಿಯನ್ನು ಮಾಡಬೇಕು. ೪೬. ವಿಶಾಖಾ ನಕ್ಷತ್ರ ಜನನ ಶಾಂತಿ ವಿಶೇಷವಾಗಿ ಮಗುವು ವಿಶಾಖಾ ನಕ್ಷತ್ರದ ೪ನೇ ಚರಣದಲ್ಲಿ ಜನಿಸಿದರೆ ತಂದೆ, ತಾಯಿ, ಬಂಧುಗಳಿಗೆ ವಿವಾಹದ ನಂತರ ವರನ ಸಹೋದರರಿಗೂ ಅನಿಷ್ಟವಾದ್ದರಿಂದ ಶಾಂತಿಯ ಅಗತ್ಯವಿದೆ. ,, ಚರಣಗಳಿಗೆ ಅಗತ್ಯವಿಲ್ಲ. ೪೭. ಯೋನಿ ವೈಕೃತಿ ಶಾಂತಿ ಒಂದು ಹೆಣ್ಣು ಮಗಳು ಮೊದಲನೇ ಬಾರಿಗೆ ರಜೋದರ್ಶನವಾಗಿ(ಮಂತ್ಲಿ ಪಿರಿಯಡ್ಸ್) ನಂತರ ತಿಂಗಳವರೆಗೆ ರಜೋದರ್ಶನವಾಗದಿದ್ದಲ್ಲಿ ಮುಂದೆ ಮದುವೆಯಾದ ಮೇಲೆ ಬರುವಂತಹ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೪೮. ಗ್ರಹಣ ಶಾಂತಿ ಒಂದು ವೇಳೆ ಸೂರ್ಯಾ ಅಥವಾ ಚಂದ್ರ ಗ್ರಹಣವು ನಮ್ಮ ಜನ್ಮ ರಾಶಿಯಿಂದ ,,೧೨ನೇ ರಾಶಿಯಲ್ಲಿ ಸಂಭವಿಸುತ್ತಿದ್ದರೆ ಅದು ಅನಿಷ್ಟಕರವಾದ್ದರಿಂದ ಶಾಂತಿಯನ್ನು ಮಾಡುವುದು ಉತ್ತಮ. ೪೯. ಪ್ರಪೌತ್ರ ದರ್ಶನ ಶಾಂತಿ ಒಂದು ವೇಳೆ ನಮ್ಮ ಮಗನಿಗೆ ಮಗನು ಜನಿಸಿ,ಅವನಿಗೆ ಮಗನು ಜನಿಸಿದಾಗ ನಾವು ಪ್ರಪೌತ್ರವನ್ನು ಪಡೆದಂತೆ. ಪ್ರಪೌತ್ರ ದರ್ಶನವು ಮುತ್ತಜ್ಜನಿಗೆ ಒಳ್ಳೆಯದಲ್ಲ. ಆದ್ದರಿಂದ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೫೦. ಸರ್ವವ್ಯಾಧಿಹರ ನಾಮತ್ರಯೀ ಶಾಂತಿ ಜನ್ಮಾಂತರಗಳಿಂದ ಸಂಚಿತ ಪ್ರಾರಾಬ್ಧರೂಪ ಪಾಪ,ನಿವೃತ್ತಿ ಮತ್ತು ವ್ಯಾಧಿ ಬಾಧೆ ನಿವಾರಣೆಗಾಗಿ ಮತ್ತು ಆಯು: ಆರೋಗ್ಯ ಪ್ರಾಪ್ತಿಗಾಗಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೫೧. ಬಾಲಮಾರ್ಕಾಂಡೇಯ ಶಾಂತಿ ಮಗುವಿಗೆ ಮಹತ್ ಬಾಲಾರಿಷ್ಟ ವಶದಿಂದ ಆಯುಷ್ಯಕ್ಕೆ ಕಂಟಕ ಸೂಚಿಸಿದಲ್ಲಿ ಅನಿಷ್ಟ ಪರಿಹಾರಕ್ಕಾಗಿ ಶಾಂತಿಯನ್ನು ಮಾಡಿಸಬೇಕು. ೫೨. ರೋಹಿಣಿ ನಕ್ಷತ್ರ ಜನನ ಶಾಂತಿ ಮಗುವು ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಮಾವನಿಗೆ ಅರಿಷ್ಟ ಸೂಚನೆಯಾಗುವುದರಿಂದ ಶಾಂತಿಯನ್ನು ಮಾಡಿಸಬೇಕು. ೫೩. ಬಾಲಗ್ರಹ ಶಾಂತಿ ಮಗುವು ಪೂರ್ವ ಜನ್ಮಂತರದಲ್ಲಿ ಮಾಡಿದ ದೇವರ,ವೇದಗಳ,ಶಾಸ್ತ್ರಗಳ ಮತ್ತು ಗುರು ಹಿರಿಯರ ನಿಂದನಾದಿ ಸರ್ವ ಪಾತಕಗಳಿಂದ ಬರುವ ಪೀಡಾ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ೫೪. ಕುಂಭ ವಿವಾಹ ಶಾಂತಿ ಒಂದು ವೇಳೆ ಯುವತಿಯ ಕುಂಡಲಿಯಲ್ಲಿ ವೈಧವ್ಯ ಯೋಗವಿದ್ದಾಗ ಅಥವಾ ಎರಡು ಇಲ್ಲವೇ ಮೂರು ವಿವಾಹ ಯೋಗವಿದ್ದಲ್ಲಿ ದೋಷ ನಿವಾರಣೆಗೆ ಶಾಂತಿಯನ್ನು ಮಾಡಿಸುವುದು ಉತ್ತಮ. ೫೫. ಕದಳಿ ವಿವಾಹ ಶಾಂತಿ ವಿಧಿಯನ್ನು ಸಹ ಮೇಲೆ ಕಾಣಿಸಿದ ದೋಷ ನಿವಾರಣೆಗೆ ಮಾಡಿಸಲಾಗುತ್ತದೆ. ೫೬. ಅರ್ಕ ವಿವಾಹ ಶಾಂತಿ ಒಂದು ವೇಳೆ ಯುವಕನ ಜಾತಕದಲ್ಲಿ ಮೊದಲನೇಯ ವಿವಾಹವಾಗಿ ಆತನ ಪತ್ನಿಯು ಪತಿಯನ್ನು ತ್ಯಜಿಸಿದಾಗ ಇಲ್ಲವೇ ಮರಣ ಹೊಂದಿದಾಗ ಅದೇ ರೀತಿ ಎರಡನೇಯ ವಿವಾಹವು ಇದೇ ರೀತಿಯಾದಲ್ಲಿ ಮೂರನೇಯ ವಿವಾಹವಾಗುವ ಮುನ್ನ ಶಾಂತಿಯನ್ನು ಮಾಡಿಸಿಕೊಂಡು ವಿವಾಹವಾಗಬೇಕು. ಹೀಗೆ ಅನೇಕ ವಿಧವಾದ ಶಾಂತಿ,ಹೋಮ,ಯಜ್ಞಾದಿಗಳು ಇರುತ್ತಿದ್ದು ಅವುಗಳನ್ನು ಜ್ಯೋತಿಷ್ಯಿಗಳ ಅಥವಾ ಪುರೋಹಿತರ ಸಲಹೆಯಂತೆ ಅಗತ್ಯ ಇದ್ದಲ್ಲಿ ಮಾಡಿಸಿಕೊಳ್ಳಬೇಕು. ಯಾಕೆಂದರೆ ಒಂದೇ ಮನೋಕಾಮನೆಗಾಗಿ ಅನೇಕ ವಿಧಿಗಳು ಇರುತ್ತವೆ. ಸಮಸ್ಯೆಯನ್ನು ತಿಳಿದು ಬೇಕಾದುದನ್ನು ಮಾಡಿದರೆ ಪರಿಹಾರ ಖಚಿತ. ಸರಿಯಾದ ತಿಳುವಳಿಕೆ ಮತ್ತು ಧರ್ಮಸಂಪನ್ನರಾದ ವೈದಿಕರಿಂದ ಶಾಂತ್ಯಾದಿಗಳನ್ನು ಮಾಡಿಸಬೇಕು. ಫಲ ನಿಶ್ಚಿತವಾಗಿ ಸಿಗುತ್ತದೆ.

 

 

ದೇವತಾ ಪ್ರತಿಷ್ಠಾಪನೆ ಹೇಗೆ ?

 ದೇವತಾ ಪ್ರತಿಷ್ಠಾಪನೆ ಹೇಗೆ ?


ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ.

ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ.

ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿಗ್ರಹ,ಮಲಗಿರುವ ವಿಗ್ರಹ ಎಂದು ಪ್ರಕಾರಗಳಿವೆ. ಕೆಲವು ಕುಳಿತ ದೇವರುಗಳ ವಿಗ್ರಹಗಳು ಶ್ರೇಷ್ಠ,ಮತ್ತೆ ಕೆಲವು ನಿಂತ ವಿಗ್ರಹಗಳು ಶ್ರೇಷ್ಠ.

ವಿಗ್ರಹವನ್ನು ಪ್ರತಿಷ್ಠಾಪನೆಗೆ ಬಳಸುವುದಾದಲ್ಲಿ ಕಲ್ಲಿನ ವಿಗ್ರಹ(ಕಪ್ಪು ಪಾಷಾಣ),ಚಿನ್ನ,ಬೆಳ್ಳಿ,ಪಂಚಲೋಹದ ವಿಗ್ರಹಗಳು ಉತ್ತಮ.ಮರದ ವಿಗ್ರಹಗಳನ್ನು ಬಳಸಬಹುದು. ಆದರೆ ಚಿತ್ರ ಬರೆದವು,ಗಾಜಿನ ವಿಗ್ರಹಗಳು ಪ್ರತಿಷ್ಠೆಗೆ ಯೋಗ್ಯವಲ್ಲ.

ಮೂರ್ತಿಪ್ರತಿಷ್ಠೆಯನ್ನು ಮಾಡುವಾಗ ಪ್ರಾಕೃತಿಕವಾಗಿ ತಯಾರಿಸಿದ ಅಷ್ಠಬಂಧವೆಂಬ ದ್ರವ್ಯವನ್ನೇ ಬಳಸಬೇಕು. ಬಿಳಿ ಸಿಮೆಂಟನ್ನು ಬಳಸಬಾರದು.

ಪ್ರತಿಷ್ಠಾಪನೆಗೆ ಮುನ್ನ ಮೂರ್ತಿಯ ಕೆಳಗೆ ಆ ದೇವರ ಯಂತ್ರ, ಸುವರ್ಣ, ನವರತ್ನಗಳನ್ನು ಹಾಕಬೇಕು. ಪ್ರತಿಷ್ಠಾಪಿಸಿದ ೪೮ ದಿನ,ಒಂದು ಮಂಡಲಗಳ ಕಾಲ ಜಲವನ್ನು ಪ್ರೋಕ್ಷಣೆ ಮತ್ತು ಷೋಡಷ ಉಪಚಾರಾದಿಗಳನ್ನು ಮತ್ತು ಮಹಾಪೂಜಾದಿಗಳನ್ನು ಮಾಡಬಹುದು. ೪೮ನೇ ದಿನ ಅಭಿಷೇಕಾದಿ ಮಹಾಪೂಜೆಯನ್ನು ಮಾಡಬೇಕು. ಆಮೇಲೆ ೧೨ನೇ ವರ್ಷವಾದಾಗ ಪುನ: ಪ್ರತಿಷ್ಠೆಯ ಬ್ರಹ್ಮ ಕಲಶೋತ್ಸವ ಆದಿಗಳನ್ನು ಮಾಡಿಸಬೇಕು.

ದೇವತಾ ಪ್ರತಿಷ್ಠೆಗಾಗಿ ಬಳಸುವ ಅಷ್ಠಬಂಧ ಮಾಡುವ ವಿಧಾನ ಮತ್ತು ದ್ರವ್ಯಗಳು. ಒಳ್ಳೆಣ್ಣೆ_೪ ಪಾವು ಬೆಲ್ಲ_ ೫ ಪಾವು) ಕೆಂಪು ಕಲ್ಲು_ ೬ ಪಾವು ಗುಗ್ಗೂಳ_ ೭ ಪಾವು ಗುಲಗಂಜಿ_೮ ಪಾವು ಕುರಂಗದ ಕಲ್ಲು_ ೯ ಪಾವು ಸಜ್ಜರಸ_೧೦ ಪಾವು ಅರಗು_೧೧ ಪಾವು ಜೇನು ಮೇಣ_೧೧ ಪಾವು ಈ ಎಲ್ಲಾ ವಸ್ತುಗಳನ್ನು ಚೂರ್ಣವಾಗಿ ಮಾಡಿಕೊಂಡು ಶೋಧಿಸಿಕೊಳ್ಳಬೇಕು. ಆಮೇಲೆ ಹೊಸ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಾಯಿಸಬೇಕು.ಸೌಟನ್ನು ಮೇಲೆತ್ತಿ ನೋಡಲು ನೂಲಿನಂತೆ ಪಾಕವು ಬಂದಾಗ ಅಷ್ಠಬಂಧದ ಹದವು ಸರಿಯಾಗುವುದು.ಸ್ವಲ್ಪವೂ ಹದ ಮೀರಬಾರದು. ಹೀಗೆ ಸರಿಯಾಗಿ ತಯಾರಿಸಿದ ಅಷ್ಠಬಂಧದಿಂದ ವಿಗ್ರಹಗಳನ್ನು ಸ್ಥಾಪಿಸಬೇಕು.

ನಾಲ್ಕನೇಯದಾಗಿ, ಮಂದಿರದಲ್ಲಿ ಸ್ಥಾಪಿಸುವ ಮೂರ್ತಿಯು ೧ ಅಂಗುಷ್ಟ ಪ್ರಮಾಣದಿಂದ ೧೬ ವಿತಸ್ತಿ(ಬಾಹು) ಪ್ರಮಾಣದವರೆಗೆ ಇರಬಹುದು. ಇದಕ್ಕಿಂತ ಜಾಸ್ತಿ ಇರಬಾರದು. ಮನೆಯಲ್ಲಿ ಪೂಜಿಸುವ ಮೂರ್ತಿಯು ೧ ಅಂಗುಷ್ಟ(ಹೆಬ್ಬೆರಳಿನಷ್ಟು)ಪ್ರಮಾಣವಿರಬೇಕು. ಆದರೆ ಮತ್ಸ ಪುರಾಣದಲ್ಲಿ ೧ ಅಂಗುಷ್ಟ ಪ್ರಮಾಣದಿಂದ ೧೨ ಅಂಗುಲ ಪ್ರಮಾಣವನ್ನು ಹೇಳಿವೆ. ಐದನೇಯದಾಗಿ, ಪ್ರಧಾನ ದೇವತೆಯನ್ನು ಸ್ಥಾಪಿಸಿದ ನಂತರ ಆಯಾಯ ದೇವತಾ ವಾಹನವನ್ನು ಉದಾಹರಣೆಗೆ(ನಂದಿ,ಕೂರ್ಮ,ಸಿಂಹ) ಸ್ಥಾಪಿಸಬೇಕು.ಗರ್ಭಗುಡಿಯಲ್ಲಿ ಇರುವ ದೇವರ ಮತ್ತು ದೇವಸ್ಥಾನದ ಹೊರಗಿನ ಗೋಡೆಯ ನಡುವಿನ ಅಳತೆಯನ್ನು ಮಾಡಿ ೧,೩,೫,೭,೯,೧೧, ಈ ಅಳತೆಯನ್ನು ತೆಗೆದುಕೊಂಡು ಧ್ವಜ ಸ್ಥಂಬವನ್ನು ಸ್ತಾಪಿಸಬೇಕು. ಮಂದಿರದ ಗೋಪುರವು ಮತ್ತು ಅದರಲ್ಲಿ ಸ್ಥಾಪಿಸುವ ಕಲಶವು ಭಗವಂತನ ಶಕ್ತಿಯನ್ನು ಆಕರ್ಷಿಸುವ ಮತ್ತು ಶಕ್ತಿಯನ್ನು ಬಿಡುಗಡೆ ಮಾಡುವ "ಎರಿಯಲ್"ಇದ್ದಂತೆ ಕೆಲಸವನ್ನು ಮಾಡುತ್ತದೆ. ಈ ಕಲಶದಲ್ಲಿ ಸಪ್ತ ಋಷಿಗಳು ನೆಲೆಸಿರುತ್ತಾರೆ. ಇದರ ದರ್ಶಮಾತ್ರದಿಂದ ಅಲ್ಲಿ ಸ್ಥಾಪಿಸಿರುವ ಭಗವಂತನ ದರ್ಶನದ ಪುಣ್ಯ ದೊರೆಯುತ್ತದೆ.ಇದನ್ನು ತಾಮ್ರ,ಹಿತ್ತಾಳೆ, ಇಲ್ಲವೇ ಚಿನ್ನದಿಂದ ಮಾಡಿಸಬಹುದು. ವಿಶೇಷವಾಗಿ ದೇವತಾ ಪ್ರತಿಷ್ಠೆಯನ್ನು ೫ ದಿನಗಳು,೩ ದಿನಗಳು,ಕನಿಷ್ಠ ೧ ದಿನ ಮಾಡುತ್ತಾರೆ. ನಾವು ಇಲ್ಲಿ ೫ ದಿನದ ಪ್ರತಿಷ್ಠೆ ಬಗ್ಗೆ ತಿಳಿಸಿರುತ್ತೇವೆ. ೧ ನೇ ದಿನದಂದು ಪುಣ್ಯಾಹ ವಾಚನ,ದೇವ ನಾಂದಿ,ಋತ್ವಿಕ್ ವರ್ಣನೆ, ರಕ್ಷಾ ಬಂಧನ,ಚಕ್ರರಾಜ ಸ್ಥಾಪನೆ(ಯಾಗಶಾಲೆಯ ಪ್ರವೇಶ,ದಿಕ್ಬಂಧನ,ಪಂಚಗವ್ಯ ಹೋಮ,ಮಂಟಪ ದೇವತಾ ಸ್ಥಾಪನೆ,ಅಗ್ನಿ ಪ್ರತಿಷ್ಠೆ),ಸಾಯಂಕಾಲದಲ್ಲಿ ದೀಕ್ಷಾಹೋಮ,ಅಂಕುರಾರ್ಪಣೆ,ಬಲಿಪ್ರದಾನ ಇವು ಮೊದಲನೇಯ ದಿನದ ವಿಧಿ. ೨ ನೇ ದಿನದಂದು ನವಗ್ರಹ ಸ್ಥಾಪನೆ,ಮಂಡಲಾದಿ ದರ್ಶನ,ಯೂಪರೋಪಣೆ,ಶಾಂತಿ ಹೋಮ,ಮೂರ್ತಿಗೆ ಜಲಾಧಿವಾಸ,ಇವು ೨ ನೇ ದಿನದ ವಿಧಿ. ೩ ನೇ ದಿನದಂದು ಜಲಾಧಿವಾಸದಿಂದ ಮೇಲೆತ್ತಿ ಮಹಾ ಸ್ನಾನ_ನೇತ್ರೋನ್ಮೀಲನ,ರಕ್ಷಾಬಂಧನ,ಶಾಂತಿಪಾಠ,ಮಹಾಪೂಜೆ,ಇವು ೩ ನೆ ದಿನದ ವಿಧಿ. ೪ ನೇ ದಿನದಂದು ಧಾನ್ಯಾದಿವಾಸ,ಶಯ್ಯಾದಿವಾಸ,ತತ್ವಾದಿ ನ್ಯಾಸಗಳು,ರಕ್ಷಾಹೋಮ, ಶಾಂತಿ ಪಾಠ,ಇವು ೪ ನೇ ದಿನದ ವಿಧಿ. ೫ ನೇ ದಿನದಂದು ಪ್ರತಿಷ್ಠಾಹೋಮ, ಮೂರ್ತಿ ಪ್ರತಿಷ್ಠೆ,ಯಂತ್ರ ಪ್ರತಿಷ್ಠೆ,ಪ್ರಧಾನ ಕಲಶ ಅಭಿಷೇಕ,ಪ್ರಾಣಪ್ರತಿಷ್ಠೆ,೧೬ ಕಲಾ ಆವಾಹನೆ ನೇತ್ರ ಉನ್ಮೀಲನ,ಬಲಿ ಪ್ರದಾನ,ಪೂರ್ಣಾಹುತಿ ಇತ್ಯಾದಿ, ಕಲಶೋದಕ ಮಾರ್ಜನ,ಸುವಾಸಿನಿ ದಂಪತಿ ಪೂಜೆ, ಕಲಶ ವಸ್ತ್ರ,ಪ್ರತಿಮಾದಾನಾದಿಗಳಿಂದ ಬ್ರಾಹ್ಮಣ ಪೂಜೆ, ಆಶೀರ್ವಾದ ಪಡೆಯುವುದು ಮತ್ತು ಅನ್ನದಾನಾದಿ ಸೇವೆ ಮಾಡುವುದು. ಹೀಗೆ ೫ ದಿನಗಳ ವಿಧಿಗಳಿರುತ್ತದೆ.೩ ದಿನದಲ್ಲಿ ಮಾಡುವುದಾದರೆ, ಕೆಲವು ವಿಧಿಗಳನ್ನು ಸೇರಿಸಿ ಮಾಡುತ್ತಾರೆ. ಒಟ್ಟಿನಲ್ಲಿ ಆಗಮ ಪದ್ಧತಿಯಂತೆ ಮೂರ್ತಿ ಪ್ರತಿಷ್ಠೆ ಮಾಡಬೇಕು. ನಮ್ಮ ಐಚ್ಚಿಕ ಭಗವಂತನ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಮಾಡಬಹುದು.ಇಲ್ಲಿ ನವಗ್ರಹ ಮೂರ್ತಿಗಳನ್ನು ಪ್ರತ್ಯೇಕ ಗ್ರಹಗಳಿಗೆ ತಿಳಿಸಿದ ಸ್ಥಳದಲ್ಲಿ,ಅವರವರ ದಿಕ್ಕಿಗೆ ಮುಖ ಮಾಡಿ ಸ್ಥಾಪಿಸಬೇಕು.ನಾನು ಕೆಲವು ಕಡೆ ನೋಡಿದ್ದೇನೆ ಮೂರ್ತಿಗಳನ್ನು ವಾರಗಳ ಕ್ರಮದಲ್ಲಿ ಸ್ಥಾಪಿಸಿದ್ದಾರೆ.ಇದು ಶುದ್ಧ ತಪ್ಪು.ಋತ್ವಿಜರು ಈ ರೀತಿ ಮಾಡಬಾರದೆಂದು ತಿಳಿಸುತ್ತೇನೆ.

ಸಾಯಿರಾಂ
ಮಂಜುನಾಥ ಹಾರೊಗೊಪ್ಪ

Tuesday, 1 September 2020

ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ

 ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ :- 


ಕವಚ ಸ್ತೋತ್ರ ಪಟನೆಯ ಉಪಯೋಗ :- 


ತೊಂದರೆಗೀಡಾದ ಶಕ್ತಿಯನ್ನು ಹೋಗಲಾಡಿಸಲು :- ಆತ್ಮಗಳು, ಮಾಟಮಂತ್ರ, ಪೂರ್ವಜರ ಸೂಕ್ಷ್ಮ ದೇಹಗಳು, ಶನಿಯಿಂದ ಬಳಲುತ್ತಿರುವ ತೊಂದರೆಗಳಿಂದ ಹರಬರಲು 

ಆಹ್ಲಾದಕರ ಶಕ್ತಿಯನ್ನು ನಿಯಂತ್ರಿಸಲು :- ಸಕ್ರಿಯ ಕುಂಡಲಿನಿಯ (ಆಧ್ಯಾತ್ಮಿಕ ಶಕ್ತಿ) ಹಾದಿಯಲ್ಲಿ ಏನಾದರೂ ಅಡಚಣೆಗಳಿದ್ದರೆ ಅದನ್ನು ಜಯಿಸಲು ಮತ್ತು ಅದನ್ನು ಸೂಕ್ತವಾಗಿ ನಿವಾರಿಸಲು  


ಓಂ ಅಸ್ಯ ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ ಮಹಾ ಮಂತ್ರಸ್ಯ ಬ್ರಹ್ಮಾ ಋಷಿ: |

ಗಾಯತ್ರೀ ಛಂದ: |

ಶ್ರೀ ಹನುಮಾನ್ ದೇವತಾ | ರಾಂ ಬೀಜಂ | ಮಂ ಶಕ್ತಿ: |ಚಂದ್ರ ಇತಿ ಕೀಲಕಂ |


ಓಂ ರೌಂ ಕವಚಾಯ ಹುಂ |ಹ್ರೌಂ ಅಸ್ತ್ರಾಯ ಫಟ್ ||


ಭಾವಾರ್ಥ:- ಪಂಚಮುಖಿ ಹನುಮಾನ್ ಕವಚ ಸ್ತೋತ್ರ ಮಹಾ ಮಂತ್ರದ ಋಷಿ  ಬ್ರಹ್ಮ . ಇದು ಗಾಯತ್ರೀ ಛಂದಸ್ಸಿನಲ್ಲಿ ಇದ್ದು  ಹನುಮಂತನು ಇದರ ಉಪಾಸ್ಯ ದೇವತೆ.  "ರಾಂ" ಇದರ ಬೀಜಾಕ್ಷರ.  "ಮಂ"  ಇದರ ಶಕ್ತಿ;  "ಚಂದ್ರ" ಎಂಬುದು ಇದರ ಕೀಲಕ. "ರೌಂ" ಇದರ ಕವಚ.  "ಹ್ರೌಂ" ಈ ಸ್ತೋತ್ರಕ್ಕೆ ಬಾಣದ ಹಾಗೆ ಬಲ ಕೊಡುತ್ತದೆ.  " ಫಟ್ " ಇದಕ್ಕೆ ರಕ್ಷಾತ್ಮಕವಾಗಿದೆ.


ಈಶ್ವರ ಉವಾಚ

ಭಾವಾರ್ಥ :- ಈಶ್ವರನು ಪಾರ್ವತೀ ದೇವಿಗೆ ಹೇಳುವನು.

ಅಥ ಧ್ಯಾನಂ ಪ್ರವಕ್ಷ್ಯಾಮಿ ಶೃಣು ಸರ್ವಾಂಗ ಸುಂದರಂ |


ಯತ್ಕೃತ್ವಾ ದೇವ ದೇವೇಶಿ ಧ್ಯಾನ: ಹನುಮತ: ಪ್ರಿಯಂ ||೧||

ಪಂಚವಕ್ತ್ರಂ ಮಹಾಬೀಮಂ ಕಪಿಯೂಥ ಸಮನ್ವಿತಂ |

ಬಾಹುಬಿರ್ದಶಭಿರ್ಯುಕ್ತಂ ಸರ್ವ ಕಾಮಾರ್ಥ ಸಿದ್ಧಿದಂ ||೨||

ಪೂರ್ವಂತು ವಾನರಂ ವಕ್ತ್ರಂ ಕೋಟಿಸೂರ್ಯ ಸಮಪ್ರಭಂ |

ದಂಷ್ಠ್ರಾಕರಾಲವದನಂ ಭ್ರುಕುಟೀ ಕುಟಿಲೇಕ್ಷಣಂ ||೩||

ಅಸ್ಯೈವ ದಕ್ಷಿಣಂ ವಕ್ತ್ರಂ ನಾರಸಿಂಹ ಮಹಾದ್ಭುತಂ |

ಅತ್ಯುಗ್ರ ತೇಜೋವಪುಷಂ ಭೀಷಣಂ ಭಯನಾಶನಂ ||೪||

ಪಶ್ಚಿಮೇ ಗಾರುಡಂ ವಕ್ತ್ರಂ ವಕ್ರತುಂಡಂ ಮಹಾಬಲಂ |

ಸರ್ವನಾಶಪ್ರಶಮನಂ ಸರ್ವಭೂತಾದಿ ಕೃಂತನಂ ||೫||

ಉತ್ತರೇ ಸೌಕರಂ ವಕ್ತ್ರಂ ಕೃಷ್ಣ ದೀಪನಭೋಮಯಂ |

ಪಾತಾಲೇ ಸಿದ್ದಿವೇತಾಲಂ ಜ್ವರರೋಗಾದಿ ಕೃಂತನಂ ||೬||

ಊರ್ಧ್ವಂ ಹಯಾನನಂ ಘೋರಂ ದಾನವಾಂತ ಕರಂ ಪರಂ |

ಏನ ವಕ್ತ್ರೇಣ ವಿಪ್ರೇಂದ್ರ ತಾಟಕಾಯ ಮಹಾಹವೇ ||೭||

ದುರ್ಗತೇಶ್ಶರಣಂ ತಸ್ಯ ಸರ್ವಶತ್ರುಹರಂ ಪರಂ |

ಧ್ಯಾತ್ವಾ ಪಂಚಮುಖಂ ರುದ್ರಂ ಹನುಮಂತಂ ದಯಾನಿಧಿಂ ||೮||

ಖಡ್ಗಂ ತ್ರಿಶೂಲಂ ಖಟ್ವಾಂಗಂ ಪಾಶಮಂಕುಶಪರ್ವತಂ |

ಮುಷ್ಟೌಚ ಮೋದಕೌ ವೃಕ್ಷಂ ಧಾರಯಂತಂ ಕಮಂಡಲುಂ ||೯||

ಭಿಂದಿ ಪಾಲಂ ಜ್ಞಾನಮುದ್ರಾಂ ದಶಮಂ ಪುನಿಪುಂಗವ |

ಏತಾನ್ಯಾಯುಧ ಜಾಲಾನಿ ಧಾರಯಂ ತಂ ಭಯಾವಹಂ ||೧೦||

ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಂ |

ಸರ್ವೈಶ್ವರ್ಯಮಯಂ ದೇವಂ ಹನುಮದ್ವಿಶ್ವತೋ ಮುಖಂ ||೧೧||

ಪಂಚಾಸ್ಯಮಚ್ಯುತಮನೇತ ವಿಚಿತ್ರವರ್ಣಂ |

ವಕ್ತ್ರಂ ಸಶಂಖ ವಿಭೃತಂ ಕವಿರಾಜ ವೀರ್ಯಂ ||

ಪೀತಾಂಬರಾದಿ ಮುಕುಟೈರಪಿ ಶೋಭಿತಾಂಗಂ |

ಪಿಂಗಾಕ್ಷಮಂಜನಾಸುತಂ ಹ್ಯನಿಶಂ ಸ್ಮರಾಮಿ ||೧೨||

ಮರ್ಕಟಸ್ಯ ಮಹೋತ್ಸಾಹಂ ಸರ್ವ ಶೋಕವಿನಾಶನಂ |

ಶತೃ ಸಂಹಾರಕಂ ಚೈತಕ್ ಕವಚಂ ಹ್ಯಾಪದಂ ಚರೇತ್ ||೧೩||

||ಓಂ ಹರಿ ಮರ್ಕಟ ಮರ್ಕಟಾಯ ಫಟ್ ಸ್ವಾಹಾ||

ಓಂ ನಮೋ ಭಗವತೇ ಪಂಚವದನಾಯ

ಪೂರ್ವ ಕಪಿಮುಖಾಯ ಸಕಲ ಶತೃ ಸಂಹರಣಾಯ ಫಟ್ ಸ್ವಾಹಾ ||೧೪||

ಓಂ ನಮೋ ಭಗವತೇ ಪಂಚವದನಾಯ

ಉತ್ತರ ಮುಖಾಯ ಆದಿವರಾಹಾಯ

ಸಕಲ ಸಂಪತ್ಕರಾಯ ಫಟ್ ಸ್ವಾಹಾ ||೧೫||

ಓಂ ನಮೋ ಭಗವತೇ ಪಂಚವದನಾಯ

ಊರ್ಧ್ವಮುಖಾಯ ಹಯಗ್ರೀವಾಯ ಕಲಿಜನ ವಶ್ಯಕರಾಯ ಫಟ್ ಸ್ವಾಹಾ ||೧೬||


|| ಇತಿ ಶ್ರೀ ಸುದರ್ಶನ ಸಂಹಿತಾಯಾಂ ಚಿಂತಾಮಣಿ ರಾಮಭದ್ರ  ಅಧ್ಯಾಯೇ  ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||

ಶ್ಲೋಕಗಳ ಭಾವಾರ್ಥ:- ಪಂಚಮುಖಿ ಹನುಮಂತಂಗೆ ೫ ಮುಖಗಳು  ೧೦ ತೋಳುಗಳೂ ಇದ್ದು ಭಕ್ತಾದಿಗಳಿಗೆ ಅನುಗ್ರಹ ನೀಡುವ ರೂಪದಲ್ಲಿ ಇದ್ದು. ಪೂರ್ವ ದಿಕ್ಕಿನಲ್ಲಿ ಮಂಗನ ಮುಖವೂ ; ದಕ್ಷಿಣ ದಿಕ್ಕಿನಲ್ಲಿ ನರಸಿಂಹ ದೇವರ ಮುಖವೂ ;  ತೇಜೋಮಯವಾಗಿ ಇದ್ದು. ಪಶ್ಚಿಮ ದಿಕ್ಕಿನಲ್ಲಿ ಗರುಡನ ಮುಖವೂ ; ಉತ್ತರ ದಿಕ್ಕಿನಲ್ಲಿ ಹಂದಿಯ ಮುಖವೂ ಇದ್ದು ನಾಗ ಭೇತಾಳಾದಿ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತಿದೆ. ಊರ್ಧ್ವ ಮುಖವು [ಮೇಲ್ಮೊಗ] ಕುದುರೆಯ ಮುಖವನ್ನು ಹೋಲುತ್ತಿದ್ದು ದೈತ್ಯ ಶಕ್ತಿಯನ್ನು ನಾಶ ಮಾಡುವ ಶಕ್ತಿ ಹೊಂದಿರುತ್ತದೆ.  ಈ ರೀತಿಯಾಗಿರುವಂತಹಾ ದಯಾನಿಧಿಯೂ  ದು:ಖ ನಿವಾರಕನೂ ಆಗಿರುವ ಪಂಚ ಮುಖಿ ಹನುಮನನ್ನು ಸ್ಮರಣೆ ಮಾಡಬೇಕು

ಹನುಮಂತನ ಕೈಗಳಲ್ಲಿ  ಕತ್ತಿ , ತ್ರಿಶೂಲ , ಪಾಶ , ಮಂಚದ ಕಾಲುಗಳನ್ನು ಹೋಲುವ ಆಯುಧ ,ಅಂಕುಶ , ಬಂಡೆ, ಮೋದಕಂಗಳು ,ಮರ ,ಕಮಂಡಲು ,ಭಿಂದಿ ,ಹಾಗೂ ಜ್ಞಾನಮುದ್ರೆಯೂ ಇದ್ದು. ಈರೀತಿಯಾಗಿರುವ ಹನುಮಂತ  ದಿವ್ಯ ಮಂದಾರ ಹೂವಿನ ಮಾಲೆಯನ್ನು ಧರಿಸಿ ಸರ್ವ ಐಶ್ವರ್ಯವನ್ನು ದಯಪಾಲಿಸುವವನಾಗಿರುವನು. ಅಂತಹಾ ಪಂಚವದನ ;ಪಂಚ ವರ್ಣ, ಪೀತಾಂಬರ, ಕಿರೀಟಾದಿಗಳಿಂದ ಶೃಂಗಾರವಾಗಿರುವ ಆಂಜನೇಯ ಸ್ವಾಮಿಯನ್ನು ನಾನು ಧ್ಯಾನಿಸುತ್ತೇನೆ.  ಕಪಿ ಸೈನ್ಯಕ್ಕೆ ಉತ್ಸಾಹವದಾಯಕನೂ ; ಎಲ್ಲಾ ಸಂಕಷ್ಟಗಳ ವಿನಾಶಕನೂ , ಶತೃ ಸಂಹಾರಕಾರಕನೂ ಆಗಿರುವ ಹನಮಂತನ ಕವಚ ಆಪತ್ ನಾಶಕವಾಗಿ ಚೈತನ್ಯವನ್ನು ಕೊಡುತ್ತದೆ.  ಕಪಿರೂಪದ ಹನುಮಂತನ ನಾಮಸ್ಮರಣೆಯು ಜಪಯಜ್ಞದ ಸ್ವಾಹಾಕಾರವಾಗಿದ್ದು  ಐದು ಮುಖಗಳನ್ನು ಹೊಂದಿ ಪೂರ್ವ ದಿಕ್ಕಿನ ಕಪಿ ಮೊಗವು ಶತೃ ಸಂಹಾರಕವಾಗಿದ್ದು.   ಉತ್ತರದಿಕ್ಕಿನ ಹಂದಿಯ ಮೊಗದ ಹನುಮಂತನ ನಾಮ ಸ್ಮರಣೆ ಸರ್ವ ಸಂಪತ್ಪ್ರದಾಯಕವಾಗಿದ್ದು. ಐದು ಮೊಗಗಳನ್ನು ಹೊಂದಿ ಮೇಲ್ಮೊಗನಾಗಿರುವ ಸಕಲ ಜನ ವಶೀಕರಣ ಶಕ್ತಿಯ ಅನುಗ್ರಹಿಸುವ ಹನುಮಂತನಿಗೆ ಸ್ವಾಹಾಕಾರ ಸಹಿತವಾಗಿ ನಮಸ್ಕಾರಗಳು.


ಸಾಯಿರಾಂ 

ಮಂಜುನಾಥ ಹಾರೋಗೋಪ್ಪ

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...