Adsense

Thursday, 18 February 2021

ಯಾ ದೇವಿ ಸರ್ವ ಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ..

ಯಾ ದೇವಿ ಸರ್ವ ಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ..


ಈ ಕಲಿಯುಗದಲ್ಲಿ ನಾಮ ಜಪ ಪಾರಾಯಣಕ್ಕೆ ಬಹಳ ಪ್ರಾಮುಖ್ಯತೆಯನ್ನು ನಮ್ಮ ಹಿರಿಯರು ಕೊಟ್ಟಿದ್ದಾರೆ.  ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿಯ ಅವಶ್ಯಕತೆ ಬಹಳ ಇದೆ.  ನಮ್ಮ ನಿತ್ಯ ಜೀವನದಲ್ಲಿ ಸ್ವಲ್ಪ ಸಮಯವನ್ನು ಇದಕ್ಕಾಗಿ ಮೀಸಲು ಇಟ್ಟರೆ, ನಮಗೆ ಅರಿವಿಲ್ಲದಂತೆ ಮನಸ್ಸು ನೆಮ್ಮದಿಯ ಗೂಡಾಗುತ್ತದೆ.   ಭಗವಂತನ ಜಪದ ಮಹಿಮೆ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಬಹುದು.  ಇದಕ್ಕೆ ಪಾಂಡಿತ್ಯ ಅಥವಾ ವಿದ್ವತ್ ಅವಶ್ಯಕತೆ ಖಂಡಿತಾ ಇಲ್ಲ.
ಮನೆಯಲ್ಲಿ ಪ್ರಥಮ ಗುರುವಾದ ತಾಯಿಯು, ಮಕ್ಕಳಿಗೆ ಬಾಯಿ ಪಾಠ ಮಾಡಿಸಿ, ಹಾಸಿಗೆಯಿಂದ ಏಳುವಾಗಲೇ,

ಕರಾಗ್ರೇ ವಸತೇ ಲಕ್ಷ್ಮೀ
ಕರ ಮಧ್ಯೇ ಸರಸ್ವತೀ
ಕರ ಮೂಲೇ ಸ್ಥಿತೇ ಗೌರಿ
ಪ್ರಭಾತೇ ಕರದರ್ಶನಮ್..

ಲಕ್ಷ್ಮೀ, ಸರಸ್ವತೀ ಮತ್ತು ಗೌರೀ ಇವರುಗಳ ಪ್ರಾರ್ಥನೆಯಿಂದ ದಿನಚರಿಯನ್ನು ಆರಂಭಿಸಲು ಕಲಿಸಿದ್ದಾಳೆ ಮತ್ತು ತ್ರಿಮೂರ್ತಿಗಳಲ್ಲಿ ಹೇಗೆ ಭೇದವಿಲ್ಲವೋ, ಹಾಗೆಯೇ ತ್ರಿಮೂರ್ತಿಗಳ ಒಡತಿಯರಲ್ಲಿ ಯಾವ ಭೇದವಿಲ್ಲವೆಂಬುದನ್ನು ಕಲಿಸಿರುತ್ತಾಳೆ.
ನಮ್ಮ ಅಂಗೈನ ಬೆರಳುಗಳ ತುದಿಯಲ್ಲಿ ಲಕ್ಷ್ಮಿಯೂ, ಅಂಗೈನ ಮಧ್ಯದಲ್ಲಿ ಸರಸ್ವತಿಯೂ ಮತ್ತು ಅಂಗೈನ ಬುಡದಲ್ಲಿ ಗೌರಿಯೂ ವಾಸವಾಗಿರುತ್ತಾಳೆ.  ನಮ್ಮ ದಿನಚರಿಯು ಇದರಿಂದಲೇ ಪ್ರಾರಂಭವಾಗಿ, ಇವರ ಕೃಪೆ ಪಡೆದ ಮೇಲೆ ಬೇರೇನು ಬೇಕು!.  ಲಕ್ಷ್ಮಿಯ ಕಟಾಕ್ಷ, ಸರಸ್ವತಿಯಿಂದ ವಿದ್ಯೆ ಮತ್ತು ವಿನಯ, ಗೌರಿಯಿಂದ ಕಾರುಣ್ಯ ಇತ್ಯಾದಿ ಪಡೆದ ಮೇಲೆ ಪ್ರತಿದಿನವೂ ಮಂಗಳಕರವಾಗಿಯೇ ಇರುತ್ತದೆ.  ಅಂಗೈಗಳನ್ನು ದರ್ಶನ ಮಾಡಿ, ಎರಡು ಅಂಗೈಗಳನ್ನು ಉಜ್ಜಿ, ಆ ಬಿಸಿಯಿಂದ ಕಣ್ಣನ್ನು ಸ್ಪರ್ಷ ಮಾಡುವ ಸಂಪ್ರದಾಯವಿದೆ.  ಇದರಿಂದ ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ.

ತ್ರಿಮೂರ್ತಿಯರಲ್ಲಿ ಹೇಗೆ ಭೇದವಿಲ್ಲವೋ, ಅದೇ ರೀತಿ ‘ಸರಸ್ವತಿ’, ‘ಲಕ್ಷ್ಮೀ’ ಮತ್ತು ‘ಮಾಹೇಶ್ವರಿ’ ಇವರಲ್ಲಿಯೂ ಯಾವ ಭೇದವೂ ಇಲ್ಲ.  ಈ ಭಾವವನ್ನು ಆಯಾಯ ಅಷ್ಟೋತ್ತರ ಮತ್ತು ಸಹಸ್ರ ನಾಮಗಳಲ್ಲಿ ಕಾಣಬಹುದು.  

ಲಕ್ಷ್ಮೀ ಅಷ್ಟೋತ್ತರದಲ್ಲಿ –
ಬ್ರಹ್ಮ ವಿಷ್ಣು ಶಿವಾತ್ಮಿಕಾಯ್ಯೈ ನಮಃ

ಸರಸ್ವತಿ ಅಷ್ಟೋತ್ತರದಲ್ಲಿ –

ಮಹಾಕಾಳ್ಯೈ ನಮಃ, ಚಂಡಿಕಾಯ್ಯೈ ನಮಃ, ಅಂಬಿಕಾಯ್ಯೈ ನಮಃ .. ಇತ್ಯಾದಿ

ಹಾಗೆಯೇ ಶ್ರೀ ದುರ್ಗಾ ಸಪ್ತಶತೀ ಪಾರಾಯಣ ಕಾಲದಲ್ಲಿ ಸಂಕಲ್ಪ ಕೂಡ 'ಧರ್ಮಾರ್ಥ ಕಾಮ ಮೋಕ್ಷ ಚತುರ್ವಿಧ ಪುಣ್ಯ ಪುರುಷಾರ್ಥ ಸಿದ್ಧ್ಯರ್ಥಂಚ ಶ್ರೀ ಮಹಾಕಾಳೀ, ಮಹಾಲಕ್ಷ್ಮೀ, ಮಹಾಸರಸ್ವತೀ ದೇವತಾ ಪ್ರೀತ್ಯರ್ಥಂ ಚಂಡೀ ಸಪ್ತಶತೀ ಪಾಠಾಖ್ಯಂ ಕರಿಷ್ಯೇ' ಎಂಬುದಾಗಿ ಹೇಳಿ ಭೇದಭಾವವನ್ನು ಕಳೆದಿದ್ದಾರೆ.  ಅದೇ ರೀತಿ ಎಲ್ಲಾ ದೇವಿಯ ರೂಪಗಳು ಒಂದೇ ಎಂಬಂತೆ ಸಕಲರಲ್ಲಿಯೂ ಲಕ್ಷ್ಮೀ ರೂಪದಿಂದ ನೆಲೆಸಿರುವ ಆ ತಾಯಿಗೆ ಪುನಃ ನಮಸ್ಕಾರ ಎಂದು ಸ್ತೋತ್ರ ಮಾಡಿದ್ದಾರೆ.

ಯಾ ದೇವಿ ಸರ್ವ ಭೂತೇಷು
ಲಕ್ಷ್ಮೀ ರೂಪೇಣ ಸಂಸ್ಥಿತಾ ||
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ..

ಅನೇಕ ಮಹಿಮಾನ್ವಿತಳಾದ ಮಹಾಲಕ್ಷ್ಮಿಯು ಸಂಧ್ಯಾಕಾಲದಲ್ಲಿ ಗೋವುಗಳು ಮನೆಗೆ ಬರುವ ಕಾಲದಲ್ಲಿ ನಮ್ಮಲ್ಲಿ ಮನೆಯ ಮುಂಬಾಗಿಲನ್ನು ತೆರೆದು, ಹಿಂಬಾಗಿಲನ್ನು ಮುಚ್ಚಿ ‘ಲಕ್ಷ್ಮಿ’ ಬರುವ ಸಮಯವೆಂದು ‘ಜ್ಯೋತಿ’ ಯನ್ನು ಬೆಳಗಿಸಿ ದೇವಿಯನ್ನು ಆರಾಧಿಸುವ ಸಂಪ್ರದಾಯ ಇಂದಿಗೂ ನಮ್ಮ ಭಾರತೀಯರಲ್ಲಿ ಉಳಿದಿದೆ. ಈ ಸಂಪ್ರದಾಯಗಳನ್ನು ‘ಉಳಿಸಿ’ ಮುಂದುವರೆಸುವ ‘ಕರ್ತವ್ಯ’ ನಮ್ಮಲ್ಲರ ಮೇಲಿದೆ.
ಸಂಪ್ರದಾಯ ಮತ್ತು ವೇದೋಕ್ತದಲ್ಲಿ ಪೂಜೆ ಮಾಡುವುದು ಲಕ್ಷ್ಮಿಯ ವಿವಿಧ ಚಕ್ರಗಳನ್ನು ಬರೆದು, ಅಲ್ಲಿ ವಿವಿಧ ರೂಪದ ಲಕ್ಷ್ಮಿಯನ್ನು ಆಹ್ವಾನಿಸಿ ಪೂಜೆ ಮಾಡುವ ಪದ್ಧತಿ ರೂಢಿಯಲ್ಲಿದೆ.  ಹಾಗೆಯೇ ಕೆಲವು ಗೃಹಿಣಿಯರು ‘ಲಕ್ಷ್ಮಿಯ ರಂಗೋಲಿ’ಯನ್ನು ನಿತ್ಯ ಬರೆದು ಪೂಜಿಸುತ್ತಾರೆ. ಎಲ್ಲ ಸಂಪ್ರದಾಯಗಳು, ಆಚರಣೆಗಳು ವಿವಿಧ ರೀತಿಯಲ್ಲಿರಬಹುದು, ಆದರೆ ಎಲ್ಲ ಪೂಜೆಗಳು, ಅರ್ಚನೆಗಳು, ಸಂಕೀರ್ತನೆಗಳು ಮನಸ್ಸಿನ ನೆಮ್ಮದಿ ಮತ್ತು ಶಾಂತಿಗೆ ಮಾತ್ರ.

ಪುತ್ರ, ಪೌತ್ರ, ಧನಂ, ಧಾನ್ಯಂ
ಹಸ್ತ್ಯಶ್ವಾದಿಗವೇರಥಮ್
ಪ್ರಜಾನಾಂ ಭವಸಿ ಮಾತಾ
ಆಯುಷ್ಯಂತಂ ಕರೋತು ಮೇ |
ಮಕ್ಕಳು, ಮೊಮ್ಮಕ್ಕಳು, ಧನ, ಧಾನ್ಯ, ಸಕಲ ಸಂಪತ್ತುಗಳನ್ನು ಕೊಟ್ಟು, ಅನುಭವಿಸಲು ಆರೋಗ್ಯ ಮತ್ತು ಆಯುಷ್ಯವನ್ನು ದೇವಿಯು ಎಲ್ಲರಿಗೂ ಕರುಣಿಸಲಿ.

ಶ್ರೀಕೃಷ್ಣಾರ್ಪಣಮಸ್ತು

ಸಾಯಿರಾಂ
ಮಂಜುನಾಥ ಹಾರೋಗೋಪ್ಪ


Wednesday, 10 February 2021

ತೀರ್ಥ ದಲ್ಲಿ ಏಕೆ ತುಳಸಿ ಎಲೆಯನ್ನು ಬೇರೆಸುತ್ತಾರೆ

ತೀರ್ಥ ದಲ್ಲಿ ಏಕೆ ತುಳಸಿ ಎಲೆಯನ್ನು ಬೇರೆಸುತ್ತಾರೆ
ತುಳಸಿ ಹಾಕದೆ ದೇವರ ತೀರ್ಥ ವಿಲ್ಲ ತೀರ್ಥ ಕ್ಕೆ ತುಳಸಿ ಹಾಕುವದಕ್ಕೆ ಧಾರ್ಮಿಕ ಕಾರಣವು ಕೂಡಾ ಇದೆ ಅರೋಗ್ಯ ಸಂಬಂದಿ ಹಿನ್ನೆಲೆ ಯು ಇದೆ.

ಧಾರ್ಮಿಕ ಕಾರಣ ತುಳಸಿ ದೇವ ಪತ್ರೆ ಸ್ಕಂದ ಪುರಾಣದ ಪ್ರಕಾರ ದೇವತೆಗಳು ಸಮುದ್ರ ಮಂಥನ ಮಾಡುವ ಸಮಯದಲ್ಲಿ ಕೆಲವು ಅಮೃತದ ಹನಿಗಳು ಭೂಮಿಯ ಮೇಲೆ ಬಿದ್ದವಂತೆ
ಅಲ್ಲಿ ತುಳಸಿ ಹುಟ್ಟಿತಂತೆ  ಅದಕ್ಕೆ ತುಳಸಿಗೆ ಅಮೃತದ ಗುಣವಿದೆ ನಂತರ ಬ್ರಹ್ಮ ಈ ತುಳಸಿಯನ್ನು ವಿಷ್ಣುವಿಗೆ ಒಪ್ಪಿಸಿಧನಂತೆ ಅದಕ್ಕೆ  ವಿಷ್ಣುವಿಗೆ ಇದು ತುಂಬಾ  ಪ್ರಿಯ 

 ಪಂಗಸ್ ಬ್ಯಾಕ್ಟೀರಿಯಾಕೆ ಸಂಬಂಧಿಸಿದ ಸೋಂಕುಗಳನ್ನುಹಾಗೂ  ಕೇಮ್ಮ್ನನ್ನು ಹಾಗೂ ಚರ್ಮ ಸಂಬಂಧಿ ಕಾಯಿಲೆಗಳನ್ನುನಿವಾರಿಸುವ ಶಕ್ತಿ ದೂರ ಮಾಡುವ ಗುಣ ತುಳಸಿ ಗಿಡಕ್ಕಿದೆ.

 ಒತ್ತಡ ನಿವಾರಣೆ ಕಿಡ್ನಿ ಸ್ಟೋನ್ ಹೃದಯರೋಗ ಮಧುಮೇಹ ತಡೆಯಲು ತುಳಸಿ ಸೂಕ್ತ ತುಳಸಿ ಯಲ್ಲಿರುವ ಒಲಿಯೋನಿಕ ಆಸಿಡ್ ಯಕೃತ ರಕ್ಷಕ. ಗಂತಿ ರೋಧಕ ಹಾಗೂ ವೈರಸ್ ರೋಧಕ ಗುಣಗಳು ತುಳಸಿಯಲ್ಲಿ ಇವೆ.ಆರ್ಸ್ ಒಲಿಕ್ ಆಸಿಡ್ ಕ್ಯಾನ್ಸರ್ ನಿಗ್ರಹಕ ಕ್ಯಾನ್ಸರ್ ಕೋಶಗಳ ಸ್ವಯಂ ಭಕ್ಷಣೆಗೆ ಇದು ಪ್ರೇರೇಪಿಸುತ್ತದೆ. ರೋಸ್ಮರಿನಿಕ್ ಆಮ್ಲ ಆತಂಕ ಲಯಕಾರಕ ಗುಣವುಳ್ಳದ್ದು ಕಾರ್ವ ಕ್ರಾಲ ಬ್ಯಾಕ್ಟರಿಯ ನಾಶಕ.

ಚರಕ ಸಂಹಿತೆ ತುಳಸಿಯ ಬಗ್ಗೆ ಪ್ರಸ್ತಾಪಿಸಿ ಮನೋ ಒತ್ತಡ ನಿಗ್ರಹಿಸುವುದರ  ಜೊತೆಗೆ ಶರೀರ ಕ್ರಿಯೆಯಲ್ಲಿ ಸಮತೋಲನ ತರುತ್ತದೆ. ಇದು ಒಂದು ಅರ್ಥ ದಲ್ಲಿ ಆಯಸ್ಸನ್ನು ಹೆಚ್ಚಿಸುವ  ಸಂಜೀವಿನಿ ಇದ್ದಂತೆ.

ಹಿಗಾಗಿ ಪ್ರತಿ ದಿನ ತೀರ್ಥ ದ ರೂಪದಲ್ಲಾ ದರು ತುಳಸಿ ಅಂಶ  ದೇಹಕ್ಕೆ ಹೋಗಲೆಂದು ತೀರ್ಥದಲ್ಲಿ ತುಳಸಿ ಕಡ್ಡಾಯ ಮಾಡಲಾಗಿದೆ

🙏🙏🙏 ಸರ್ವೇ ಜನ ಸುಖಿನೋ ಭವಂತು🙏🙏🙏

ಸಾಯಿರಾಂ
ಮಂಜುನಾಥ ಹಾರೋಗೋಪ್ಪ

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...